ಜನವರಿ 16ರಿಂದ ಭೈರಪ್ಪನವರ 'ಉತ್ತರ ಕಾಂಡ' ಎಲ್ಲೆಡೆ ಲಭ್ಯ

Posted By:
Subscribe to Oneindia Kannada

ಬೆಂಗಳೂರು, ಜನವರಿ 10: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ(ಎಸ್ ಎಲ್ ಭೈರಪ್ಪ) ಅವರ ಹೊಚ್ಚ ಹೊಸ ಕಾದಂಬರಿ 'ಉತ್ತರ ಕಾಂಡ' ಲೋಕಾರ್ಪಣೆಗೆ ಸಿದ್ಧವಾಗಿದೆ. ಜನವರಿ 16 ರಿಂದ ಎಲ್ಲಾ ಪ್ರಮುಖ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಎಸ್ ಎಲ್ ಭೈರಪ್ಪ ಅವರ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ.

ಕಾದಂಬರಿಯ ಬಗ್ಗೆ ಹೀಗೆ ಬರೆಯಲಾಗಿದೆ: ನಲವತ್ತು ವರ್ಷಗಳ ಹಿಂದೆ 'ಪರ್ವ'ದಲ್ಲಿ ದ್ರೌಪದಿ, ಕುಂತಿ, ಗಾಂಧಾರಿಯರನ್ನು ಚಿತ್ರಿಸಿದ ಭೈರಪ್ಪನವರು ಇಲ್ಲಿ ರಾಮಕಥೆ ಯನ್ನು ಸೀತೆಯ ಅನುಭವ ಮತ್ತು ಚಿಂತನೆಯ ಮೂಲಕ ಮೂಡಿಸಿದ್ದಾರೆ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಸೀತಾ ಪರಿತ್ಯಾಗವು ಉತ್ತರ ಕಾಂಡದಲ್ಲಿ ಬರುತ್ತದೆ.[ಎಸ್ಎಲ್ ಭೈರಪ್ಪನವರ ವೆಬ್ ತಾಣ]

Kannada Novelist SL Bhyrappa's new Novel Uttara-Kanda release on Jan 16

'ಜೋಡಿ ಹಕ್ಕಿಗಳಲ್ಲಿ ಬೇಡನು ಒಂದನ್ನು ಹೊಡೆದು ಅಗಲಿಸಿದ ನೋವಿನ ಭಾವವನ್ನು ವ್ಯಕ್ತಪಡಿಸಲು ನಾನು ರಾಮ ಸೀತೆಯರ ಜೀವನವನ್ನು ಬಳಸಿಕೊಂಡೆ. ಇದನ್ನಾದರೂ ಸುಖಾಂತ್ಯ ಮಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕವಿಯು ಏನನ್ನು ತಾನೆ ಬದಲಿಸಬಲ್ಲ? ಎಂಬ ವೈಫಲ್ಯ ಬಾಧಿಸುತ್ತಿದೆ,' ಎಂದು ವಾಲ್ಮೀಕಿಮಹರ್ಷಿಗಳು ಶೋಕದಲ್ಲಿ ಮುಳುಗುತ್ತಾರೆ.

ಪುಟಗಳು - 336
ಬೆಲೆ - ರೂ.375 (ದಪ್ಪರಟ್ಟು)
ಪ್ರಕಾಶಕರು - ಸಾಹಿತ್ಯ ಭಂಡಾರ
ಜನವರಿ 16 ರಿಂದ ಎಲ್ಲಾ ಪ್ರಮುಖ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗೆ ಈ ಪುಟ ನೋಡುತ್ತಿರಿ: http://slbhyrappa.in/kn/uttara-kanda/
ಆನ್ ಲೈನ್ ನಲ್ಲಿ ಖರೀದಿಗಾಗಿ: http://www.navakarnatakaonline.com/uttarakanda-by-s-l-byrappa
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada writer SL Bhyrappa's new novel Uttara-Kanda is set to release on Jan 16, 2017. SL Bhyrappa is widely regarded as one of modern India's foremost novelists. A website based on his works and life also ready for launch.
Please Wait while comments are loading...