ಕನ್ನಡ ಬಾವುಟ ಹಾಕಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ, ತಮಿಳುನಾಡು ಕಡೆಗೆ ನುಗ್ಗುತ್ತಿರುವ ಟಿಟಿ ವಾಹನಗಳು! Kannada
ಕನ್ನಡಿಗರನ್ನು ಕೆಣಕಿ ಉಳಿದವರಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್ ಆಗುತ್ತಿದೆ. ಅದರಲ್ಲೂ ಕನ್ನಡ ಬಾವುಟ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಕನ್ನಡಿಗ ಟಿಟಿ ಡ್ರೈವರ್ ಮೇಲೆ ಕೈಮಾಡಿ, ಹಲ್ಲೆ ಮಾಡಿದ್ದ ತಮಿಳುನಾಡಿನ ವ್ಯಕ್ತಿ ವಿರುದ್ಧ ಭಾರಿ ಆಕ್ರೋಶದ ಬೆಂಕಿಯೇ ಇದೀಗ ಮೊಳಗಿದೆ. ಕನ್ನಡಿಗರು ಮತ್ತು ತಮಿಳು ಭಾಷಿಗರು ಒಟ್ಟಾಗಿ ಬದುಕುವ ಸಮಯದಲ್ಲೇ ಕಿಡಿಗೇಡಿ ಒಬ್ಬ ಮಾಡಿರುವ ಕೃತ್ಯಕ್ಕೆ ಇದೀಗ ಎರಡೂ ರಾಜ್ಯಗಳ ನಡುವೆ ಬೆಂಕಿಯೇ ಹೊತ್ತಿಕೊಂಡಿದೆ. ಅದರಲ್ಲೂ ಕರ್ನಾಟಕ ಮತ್ತು ತಮಿಳುನಾಡು ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಪ್ರತಿಭಟನೆ ಭುಗಿಲೇಳುವ ಆತಂಕದ ವಾತಾವರಣ ಈಗ ಆವರಿಸಿದೆ.
ಕನ್ನಡ ಹಾಗೂ ತಮಿಳು ಸಹೋದರ ಭಾಷೆಗಳು, ಎರಡೂ ರಾಜ್ಯಗಳು ಒಟ್ಟಾಗಿಯೇ ಅಭಿವೃದ್ಧಿಯನ್ನ ಹೊಂದುತ್ತಿರುವ ರಾಜ್ಯಗಳು. ಹೀಗಿದ್ದಾಗ ಯಾರೋ ಕಿಡಿಗೇಡಿಗಳು ಮಾಡುತ್ತಿರುವ ಕೆಲಸಕ್ಕೆ ಇದೀಗ ಎರಡೂ ರಾಜ್ಯಗಳ ನೆಮ್ಮದಿ ಹಾಳಾಗಿ, ಎರಡೂ ರಾಜ್ಯಗಳ ನಡುವೆ ದ್ವೇಷದ ಕಿಚ್ಚು ಹೊತ್ತಿಕೊಳ್ಳುವ ಆತಂಕ ಆವರಿಸಿದೆ. ಕನ್ನಡ ಬಾವುಟ ಹಾಕಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ರೊಚ್ಚಿಗೆದ್ದು, ತಮಿಳುನಾಡು ಗಾಡಿಗಳನ್ನ ತಡೆದು ನಿಲ್ಲಿಸಿ ಕನ್ನಡ ಸ್ಟಿಕ್ಕರ್ ಹಾಗೂ ಬಾವುಟ ಕಟ್ಟಲು ಶುರು ಮಾಡಿದ್ದಾರೆ.

ಹಲ್ಲೆ ಮಾಡಿದವನಿಗೆ ಕನ್ನಡಿಗರ ಚಾಲೆಂಜ್
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್ ಆಗುತ್ತಿದ್ದು, ತಮಿಳುನಾಡಲ್ಲಿ ಜಗಳ ಮಾಡಿ ಕನ್ನಡಿಗ ಡ್ರೈವರ್ ಮೇಲೆ ಹಲ್ಲೆ ನಡೆಸಿರುವ ಪುಂಡನಿಗೆ ಕನ್ನಡಿಗರು ಚಾಲೆಂಜ್ ಹಾಕುತ್ತಾ ಇದ್ದಾರೆ. ಅದರಲ್ಲೂ ಕರ್ನಾಟಕ & ತಮಿಳುನಾಡು ಗಡಿ ಭಾಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಹಾಗಾದರೆ ಈ ಘಟನೆ ಹಿನ್ನೆಲೆ ಏನು? ಈ ರೀತಿ ಕನ್ನಡಿಗ ಡ್ರೈವರ್ ಮೇಲೆ ಹಲ್ಲೆ ಮಾಡಿದ್ದು ಯಾಕೆ? ತಮಿಳುನಾಡಿಗೆ ಹೋಗುವ ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಕರ್ನಾಟಕದ ಪ್ರವಾಸಿಗರು ಕನ್ನಡದ ಬಾವುಟ ಕಟ್ಟಿಕೊಂಡು ಹೋಗಬಾರದಾ? ಏನಿದು ಹೊಸ ರೂಲ್ಸ್? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಕನ್ನಡಿಗ ಡ್ರೈವರ್ ಮೇಲೆ ಹಲ್ಲೆ
ಕೆಲವು ದಿನಗಳ ಹಿಂದಷ್ಟೇ ಶಬರಿಮಲೆಗೆ ತೆರಳುತ್ತಿದ್ದ ಕನ್ನಡಿಗರ ವಾಹನದಲ್ಲಿದ್ದ ಕನ್ನಡ ಬಾವುಟವನ್ನು ತೆಗೆಯಲು ತಮಿಳುನಾಡಿನಲ್ಲಿ ಗುಂಪೊಂದು ಗಾಡಿ ಅಡ್ಡ ಹಾಕಿ ಬೆದರಿಕೆ ಹಾಕಿತ್ತು. ಆದರೆ ಈ ವೇಳೆ ಕನ್ನಡಿಗ ಟಿಟಿ ಡ್ರೈವರ್ ನಾನು ಕನ್ನಡ ಬಾವುಟ ತೆಗೆಯೋದಿಲ್ಲ ಎಂದು ಹೇಳಿದ್ದರು. ಇದೇ ವಿಚಾರ ದೊಡ್ಡದಾಗಿ ಕನ್ನಡಿಗ ಟಿಟಿ ಡ್ರೈವರ್ ಮೇಲೆ ತಮಿಳುನಾಡಿನ ವ್ಯಕ್ತಿ ಹಲ್ಲೆ ಮಾಡಿದ್ದು, ಈ ವಿಚಾರವೇ ಈಗ ದೊಡ್ಡದಾಗಿದ್ದು ಬೆಂಕಿ ಹೊತ್ತಿಕೊಂಡಿದೆ. ಎರಡೂ ರಾಜ್ಯಗಳ ನಡುವೆ ಮತ್ತೆ ಗಲಾಟೆ ಶುರುವಾಗುವ ಆತಂಕ ಆವರಿಸಿದೆ. ಇದೇ ಕಾರಣಕ್ಕೆ ಕರ್ನಾಟಕದ ಕಡೆಯಿಂದ ಟಿಟಿ ವಾಹನಗಳು ಹಾಗೂ ಬೇರೆ ಬೇರೆ ವಾಹನಗಳಿಗೆ ಕನ್ನಡ ಬಾವುಟ ಕಟ್ಟಿಕೊಂಡು ತಮಿಳುನಾಡು ಕಡೆಗೆ ಡ್ರೈವರ್ಸ್ ನುಗ್ಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications