ಮೀಡಿಯಾ ಮಸಾಲ: ಕನ್ನಡಕ್ಕೆ 'ಸ್ಟಾರ್' ಕ್ರೀಡಾ ಚಾನೆಲ್, ಸೋಮಣ್ಣ ಈಗೆಲ್ಲಿ?
Recommended Video

ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಈ ವಾರದ ವಾರೆ ನೋಟ ಇಲ್ಲಿದೆ. ಕನ್ನಡದಲ್ಲಿ ಕ್ರೀಡಾ ಚಾನೆಲ್ ತರಲು ಸ್ಟಾರ್ ಸ್ಫೋರ್ಟ್ಸ್ ಇಂಡಿಯಾ ಮುಂದಾಗಿರುವುದು ಸದ್ಯದ ಬಿಗ್ ಬ್ರೇಕಿಂಗ್ ಸುದ್ದಿ. ಮಿಕ್ಕಂತೆ ಈ ವಾರವೂ ಮೇಲಕ್ಕೇರದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ, ಬಾರ್ಕ್ ರಿಪೋರ್ಟ್, ಸ್ವಾಮೀಜಿ ರಾಸಲೀಲೆ ಪ್ರಸಾರ, ಸುಮ್ ಸುಮ್ನೆ ಚರ್ಚೆ ಎಲ್ಲವೂ ಟಿವಿ ಮಾಧ್ಯಮಗಳಲ್ಲಿ ನಡೆದು ಹೋಗಿವೆ.
ಸುದ್ದಿ ಮುಖ್ಯಾಂಶಗಳು ಹೀಗಿವೆ:
* ಕನ್ನಡಕ್ಕೆ ಹೊಚ್ಚ ಹೊಸ ಕೀಡಾ ಚಾನೆಲ್.
* ಪ್ರಮುಖ ಆಂಕರ್ ಸೋಮಣ್ಣ ಮಾಚಿಮಾಡ ಈಗ ಯಾವ ಚಾನೆಲ್ ನಲ್ಲಿದ್ದಾರೆ?
* ಟಿವಿ9ಯ ಪ್ರಮುಖರಾದ ಮಾರುತಿ. ರವಿಕುಮಾರ್ ಗೆ ಸಿಕ್ತು ನೆಲೆ.
* ಟಿಆರ್ ಪಿಯಲ್ಲಿ ಕಲರ್ಸ್ ಕನ್ನಡ ಮುಂದು, ನ್ಯೂಸ್ ಚಾನೆಲ್ ಪೈಕಿ ಟಿವಿ9 ಎಂದಿನಂತೆ ನಂ.1.
ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿರುವ ಬಹು ಚರ್ಚಿತ, ವಿವಾದಿತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿ ಈ ವಾರವೂ ಟಿ ಆರ್ ಪಿಯಲ್ಲಿ ಮೇಲಕ್ಕೇರಿಲ್ಲ. ಧಾರಾವಾಹಿಗಳಿಂದ ಕಲರ್ಸ್ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ವಾಹಿನಿ ಎನಿಸಿಕೊಂಡಿದ್ದಾರೆ. ಟಿವಿ9ಯ ಪ್ರಮುಖರಾದ ಮಾರುತಿ. ರವಿಕುಮಾರ್ ಅವರು ಎಬಿಪಿಯ ಕನ್ನಡ ಚಾನೆಲ್ ನತ್ತ ಮುಖ ಮಾಡಿದ್ದಾರೆ. ನ್ಯೂಸ್ 18 ಕನ್ನಡ(ಈ ಹಿಂದಿನ ಈಟಿವಿ ಕನ್ನಡ) ಬಿಟ್ಟ ಬಳಿಕ ಪ್ರಮುಖ ಆಂಕರ್ ಸೋಮಣ್ಣ ಮಾಚಿಮಾಡ ಅವರು ಕೂಡಾ ಎಬಿಪಿಯ ಚಾನೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನವೆಂಬರ್ ನಿಂದ ಜನಶ್ರೀ ನೇಮಕಾತಿ ಆರಂಭವಾಗಲಿದ್ದು, ಹೊಸ ವಿನ್ಯಾಸ, ಹೊಸ ಮ್ಯಾನೇಜ್ಮೆಂಟ್ ನೊಂದಿಗೆ ಮತ್ತೆ ಚಾನೆಲ್ ಮೇಲಕ್ಕೇರಲಿದೆ ಎಂಬ ಸುದ್ದಿಯಲ್ಲಿ ಯಾವುದೇ ಬದಲಾವಣೆ ಇಲ್ಲ .ಆದರೆ, ಚಾನೆಲ್ ಹೆಸರು,ಸ್ವರೂಪದಲ್ಲಿ ತಕ್ಕಮಟ್ಟಿನ ಹೊಸತನ ಕಾಣಬಹುದಾಗಿದೆ.

ಅಲ್ಲಲ್ಲಿ ಏನೇನು? ಯಾಕ್ ಬೇಕಿತ್ತು ಇದೆಲ್ಲ?
ಹುಣಸೇಮಾರನಹಳ್ಳಿಯ ಜಂಗಮ ಮಠವೊಂದರ ಕಿರಿಯಸ್ವಾಮೀಜಿ ಎನಿಸಿಕೊಂಡ ವ್ಯಕ್ತಿ ದಯಾನಂದ ಎಂಬಾತ ನಟಿಯೊಬ್ಬರ ಜತೆ ಹಾಸಿಗೆಯಲ್ಲಿ ರಾಸಲೀಲೆ ನಡೆಸಿದ ದೃಶ್ಯಾವಳಿಯನ್ನು ಟಿವಿ5 ಹಾಗೂ ದಿಗ್ವಿಜಯ ಬಿಟ್ಟು ಮಿಕ್ಕ ಎಲ್ಲಾ ಚಾನೆಲ್ ಗಳು ಪ್ರಸಾರ ಮಾಡಿದ್ದು ಸಾಮಾಜಿಕ ಜಾಲಗಳಲ್ಲಿ ಇನ್ನೂ ಚರ್ಚೆಯಲ್ಲಿದೆ. ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾಗುತ್ತಿದೆ ಎಂಬ ಸುದ್ದಿ ಹಬ್ಬಿದ್ದೆ ತಡಾ ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ಮೊದಲು ಗೊಂಡಿತು. ಆದರೆ, ಈ ರೀತಿ ಯಾವುದೇ ಪ್ರಾಧಿಕಾರ ಸ್ಥಾಪನೆಗೆ ಸರ್ಕಾರ ಮುಂದಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದ್ದಾರೆ. ಇನ್ನು ಸುದ್ದಿ ವಾಹಿನಿಯೊಂದರ ನಿಲುವಿನ ಬಗ್ಗೆ ನಿರ್ದೇಶಕ ಎಎಂಆರ್ ರಮೇಶ್ ಅವರು ಆಕ್ಷೇಪ ವ್ಯಕ್ತಪಡಿಸಿ, ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ.

BARC ವರದಿ ಟಾಪ್ 5 ಚಾನೆಲ್
ಅಕ್ಟೋಬರ್ 14 ರಿಂದ ಅಕ್ಟೋಬರ್ 24ರ ತನಕದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ 5 ಕನ್ನಡ ಚಾನೆಲ್ ಗಳು.
1. ಕಲರ್ಸ್ ಕನ್ನಡ
2. ಉದಯ ಟಿವಿ
3. ಜೀ ಕನ್ನಡ
4. ಉದಯ ಮೂವಿಸ್
5. ಕಲರ್ಸ್ ಸೂಪರ್
ಮುಂಬರುವ ಚಾನೆಲ್ ಗಳು: ಟಿವಿ 1, ಪವರ್ ಕನ್ನಡ, ಫೋಕಸ್, ಎಬಿಪಿ, ಜೀ ಕನ್ನಡ ನ್ಯೂಸ್, ಗರುಡಾ ಮಾಲ್ ಒಡೆತನದ ಚಾನೆಲ್ ಬರುವ ಮುನ್ಸೂಚನೆ ಸಿಕ್ಕಿದೆ.

BARC : ವರದಿ ಟಾಪ್ 5 ನ್ಯೂಸ್ ಚಾನೆಲ್
ಅಕ್ಟೋಬರ್ 14 ರಿಂದ ಅಕ್ಟೋಬರ್ 24ರ ತನಕದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ ಕನ್ನಡ ಸುದ್ದಿ ವಾಹಿನಿಗಳು, ಕರ್ನಾಟಕ, ಬೆಂಗಳೂರು, ನಗರ ಹಾಗೂ ಗ್ರಾಮೀಣ ವಿಭಾಗದ ವರದಿ ಆಧಾರಿತ
1. ಟಿವಿ 9
2. ಪಬ್ಲಿಕ್ ಟಿವಿ.
3. ಸುವರ್ಣ 24/7
4. ನ್ಯೂಸ್ 18 ಕನ್ನಡ
5. ಬಿಟಿವಿ
6. ಉದಯ ಟಿವಿ
7. ಪ್ರಜಾ ಟಿವಿ
8. ದಿಗ್ವಿಜಯ
9. ಕಸ್ತೂರಿ
10. ಸುದ್ದಿ
11. ಸಮಯ
12. ರಾಜ್ ನ್ಯೂಸ್ ಕನ್ನಡ
13. ಜನಶ್ರೀ ಕನ್ನಡ

BARC : ವರದಿ ಟಾಪ್ 5 ಕಾರ್ಯಕ್ರಮ
ಅಕ್ಟೋಬರ್ 14 ರಿಂದ ಅಕ್ಟೋಬರ್ 24ರ ತನಕದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ 5 ಕನ್ನಡ ಕಾರ್ಯಕ್ರಮಗಳು
1. ಉದಯ ಟಿವಿ (ರಾಜಕುಮಾರ್ ಸಿನಿಮಾ)
2. ಕಲರ್ಸ್ ಕನ್ನಡ (ಪುಟ್ಟಗೌರಿ ಮದುವೆ) ಮೊದಲ ಬಾರಿಗೆ ಎರಡನೇ ಸ್ಥಾನಕ್ಕಿಳಿದಿದೆ.
3. ಕಲರ್ಸ್ ಕನ್ನಡ (ಲಕ್ಷ್ಮಿ ಬಾರಮ್ಮ)
4. ಕಲರ್ಸ್ ಕನ್ನಡ (ಅಗ್ನಿಸಾಕ್ಷಿ)
5. ಉದಯ ಟಿವಿ (ನಂದಿನಿ)

ಸ್ಟಾರ್ ಸ್ಫೋರ್ಟ್ಸ್ ಕನ್ನಡ ಚಾನೆಲ್
ಎಲ್ಲೆಲ್ಲಿ ಲಭ್ಯ: ಡಿಎಎಸ್, ಡಿಟಿಎಚ್, ಐಪಿಟಿವಿ ಹಾಗೂ ಎಚ್ ಐಟಿಎಸ್ ಮಾದರಿಯಲ್ಲಿ ಲಭ್ಯ. ಚಾನೆಲ್ ವಿ ಇನ್ಮುಂದೆ ನವೆಂಬರ್ 16, 2017 (00.001 ಗಂಟೆಯಿಂದ) ರಿಂದ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಎಂದು ಪ್ರಸಾರಗೊಳ್ಳಲಿದೆ ಎಂದು ಸ್ಟಾರ್ ಇಂಡಿಯಾ ಪ್ರೈ ಲಿಮಿಟೆಡ್ ವರದಿ ಮಾಡಿದೆ. ಇದಕ್ಕೆ ಪ್ರತ್ಯೇಕವಾಗಿ ಯಾವುದೇ ವ್ಯವಸ್ಥೆ ಬೇಡವಾಗಿದ್ದು, ಪ್ರಸಾರಕರಿಂದ ನೇರ ಫೀಡ್ ಲಭ್ಯವಿರುತ್ತದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) ನ 10ನೇ ಆವೃತ್ತಿಯ ಪಂದ್ಯಗಳ ವೀಕ್ಷಕ ವಿವರಣೆಯನ್ನು ಕನ್ನಡ ಭಾಷೆಯಲ್ಲಿ ಕೇಳಲು ಸಾಧ್ಯ. ಐಪಿಎಲ್ ವೀಕ್ಷಕ ವಿವರಣೆಯನ್ನು ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಹಾಗೂ ಬೆಂಗಾಲಿ ಭಾಷೆಯಲ್ಲಿ ಪಡೆಯಬಹುದಾಗಿದೆ.












Click it and Unblock the Notifications