ನಟ ದೊಡ್ಡಣ್ಣಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

Posted By:
Subscribe to Oneindia Kannada

ವಿಜಯಪುರ, ಮೇ 19: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು ಅವರನ್ನು ಮೊದಲು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಇದೀಗ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ದೊಡ್ಡಣ್ಣ ಅವರಿಗೀಗ 68 ವರ್ಷ ವಯಸ್ಸು.

ದೊಡ್ಡಣ್ಣ ಅವರು ತೆಲುಗು ಚಿತ್ರವೊಂದರ ಶೂಟಿಂಗ್ ನಲ್ಲಿ ನಿರತರಾಗಿದ್ದರು. ಚಿತ್ರದ ಶೂಟಿಂಗ್ ವಿಜಯಪುರದ ಸೊಲ್ಲಾಪುರ ರಸ್ತೆಯಲ್ಲಿ ನಡೆಯುತ್ತಿತ್ತು. ಅದೇ ವೇಳೆ, ದೊಡ್ಡಣ್ಣ ಅವರಿಗೆ ಅನಾರೋಗ್ಯ ಉಂಟಾಗಿದೆ. ತಕ್ಷಣ ಅವರನ್ನು ವಿಜಯಪುರದ ಆಯುಷ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Kannada actor Doddanna admitted to hospital in Vijayapura

ಆದರೆ, ಅವರ ಕುಟುಂಬ ಸದಸ್ಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲು ಕೋರಿದ್ದರು. ಈ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಯ ವೈದ್ಯರು ರಾತ್ರಿ ಸುಮಾರು 2:30ರ ವೇಳೆಗೆ ದೊಡ್ಡಣ್ಣ ಅವರನ್ನು ಆ್ಯಂಬುಲೆನ್ಸ್ ಒಂದರಲ್ಲಿ ಬೆಂಗಳೂರಿಗೆ ಸ್ಥಳಾಂತರಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದೊಡ್ಡಣ್ಣ ಇದೀಗ ಚಿಕಿತ್ಸೆಗೊಳಗಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Veteran actor of Kannada film industry Doddanna has admitted to hospital in Vijayapura.
Please Wait while comments are loading...