ಕನಕ ಜಯಂತಿ ಮುಂದೂಡಿಕೆ, ಸರ್ಕಾರಿ ರಜೆ ಮುಂದುವರಿಕೆ, ಹೊಸ ದಿನಾಂಕ ಶೀಘ್ರ ಪ್ರಕಟ
ಬೆಂಗಳೂರು, ನವೆಂಬರ್ 26: ಇಂದು (ನವೆಂಬರ್ 26) ಕನಕಜಯಂತಿ, ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಿಸಲು ಸಕಲ ಸಿದ್ಧತೆ ಪೂರ್ಣವಾಗಿತ್ತು. ಆದರೆ ಅಂಬರೀಶ್ ಹಾಗೂ ಜಾಫರ್ ಶರೀಫ್ ನಿಧನದಿಂದಾಗಿ ಕನಕ ಜಯಂತಿ ಮುಂದೂಡಲಾಗಿದೆ.
ರಾಜ್ಯದೆಲ್ಲಡೆ ಕನಕ ಜಯಂತಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ ಇಂದು ಇದ್ದ ಸರ್ಕಾರಿ ರಜೆಯನ್ನು ಹಾಗೆಯೇ ಮುಂದುವರೆಸಲಾಗಿದೆ. ಹಾಗಾಗಿ ಇಂದು ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ.
ಸರ್ಕಾರದ ವತಿಯಿಂದ ಆಚರಿಸುವ ಕನಕ ಜಯಂತಿ ಕಾರ್ಯಕ್ರಮದ ಹೊಸ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಬರೀಶ್ ಮೃತಪಟ್ಟ ದಿನವೇ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಮೂರು ದಿನಗಳ ಶೋಕಾಚರಣೆ ಪ್ರಕಟಿಸಿದ್ದರು. ಆದ್ದರಿಂದ ಕನಕಜಯಂತಿ ಮುಂದೂಡುವುದು ಅನಿವಾರ್ಯವಾಗಿತ್ತು. ರಾಜಕೀಯ ಮುತ್ಸದಿ ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಸಹ ಮೃತರಾದ ರಾಜ್ಯಕ್ಕೆ ಬಹು ದುಃಖದ ದಿನವಾಗಿ ಭಾನುವಾರ ಹಾಗೂ ಶನಿವಾರಗಳು ಪರಿಣಮಿಸಿದವು.












Click it and Unblock the Notifications