Karnataka Election: 2018ರ ಚುನಾವಣೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ-ಕಾಂಗ್ರೆಸ್ ಕ್ಲೋಸ್ ಫೈಟ್

ಕಾಂಗ್ರೆಸ್, ಜೆಡಿಎಸ್, ಬಿಎಸ್ಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಆಮ್ ಆದ್ಮಿ ಪಕ್ಷ ಎರಡನೇ ಪಟ್ಟಿಯನ್ನೂ ಪ್ರಕಟಿಸಿದ್ದಾಗಿದೆ. ಸದ್ಯದ ಮಾಹಿತಿಯ ಪ್ರಕಾರ ಮೂರೂ ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ವಾರದಲ್ಲಿ ಬಹುತೇಕ ಫೈನಲ್ ಮಾಡಲಿದೆ. ಏಪ್ರಿಲ್ ಮೂರರಂದು ಜೆಡಿಎಸ್ ಎರಡನೇ ಪಟ್ಟಿಯನ್ನು ಪ್ರಕಟಿಸುವುದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮುಂದಿನ ವಾರಾಂತ್ಯದಲ್ಲಿ ಅಂದರೆ ಏಪ್ರಿಲ್ 9ರಂದು ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಆ ಮೂಲಕ, ರಾಜ್ಯ ಚುನಾವಣೆಯ ಪ್ರಚಾರದ ಕಾವು ಇನ್ನೊಂದು ಮಜಲಿಗೆ ಉರುಳಲಿದೆ. ಸಂಸದರಾಗಿ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ರಾಜ್ಯಕ್ಕೆ ಮೊದಲ ಬಾರಿಗೆ ಆಗಮಿಸಲಿದ್ದಾರೆ. ಮೇ ಹತ್ತರಂದು ಚುನಾವಣೆ, ಮೇ ಹದಿಮೂರರಂದು ಫಲಿತಾಂಶ ಹೊರಬೀಳಲಿದೆ.

Kalyana Karnataka Region : Congress Was Slightly Ahead Against BJP In 2018 Assembly Elections

2018ರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರಕಾರ ರಚಿಸುವಷ್ಟು ಸೀಟುಗಳು ಬಂದಿರಲಿಲ್ಲ. ಆ ನಂತರ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದ್ದು, ಅದು ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವುದು ಗೊತ್ತಿರುವುದು ವಿಚಾರ.

ಕಳೆದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ಕಲ್ಯಾಣ ಕರ್ನಾಟಕದ (Kalyana Karnataka) ಮತದಾರ ಎಷ್ಟು ಸೀಟಿನ ಮೂಲಕ ಆಶೀರ್ವದಿಸಿದ್ದ? ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರುವ ಜಿಲ್ಲೆಗಳು ಯಾವುವು, ಕ್ಷೇತ್ರಗಳು ಎಷ್ಟು ಎನ್ನುವುದನ್ನು ಕೆಳಗೆ ವಿವರಿಸಲಾಗಿದೆ. ಈ ಹಿಂದೆ ಹೈದರಾಬಾದ್ ಕರ್ನಾಟಕ ಎಂದಿದ್ದದ್ದು ಈಗ ಕಲ್ಯಾಣ ಕರ್ನಾಟಕ ಎಂದಾಗಿದೆ.

ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ,ಬಳ್ಳಾರಿ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯು ಕಲ್ಯಾಣ ಕರ್ನಾಟಕದ ಭಾಗವಾಗಿದೆ. ಭೌಗೋಳಿಕವಾಗಿ ಇದು ದೇಶದ ಎರಡನೇ ಅತಿದೊಡ್ಡ ಶುಷ್ಕ (dry) ಪ್ರದೇಶವಾಗಿದೆ.

ಕಲ್ಯಾಣ ಕರ್ನಾಟಕ ರಾಜ್ಯ ರಾಜಕೀಯಕ್ಕೆ ಘಟಾನುಗಟಿ ಜನ ಪ್ರತಿನಿಧಿಗಳನ್ನು ಪರಿಚಯಿಸಿಕೊಟ್ಟ ಭಾಗವಾಗಿದೆ. ಖರ್ಗೆ, ಧರಂಸಿಂಗ್, ಜಾಧವ್ ಕುಟುಂಬ, ರೆಡ್ಡಿ ಸಹೋದರರ ರಾಜಕೀಯ ಆರಂಭವಾಗಿದ್ದು ಇದೇ ಭಾಗದಿಂದ. ಈಗ ಅವರ ಕುಟುಂಬದ ಮುಂದಿನ ಕುಡಿಗಳಿಂದಲೂ ರಾಜಕೀಯ ಮುಂದುವರಿದಿದೆ. ಉದಾಹರಣೆಗೆ ಮಲ್ಲಿಕಾರ್ಜುನ ಅವರ ಪುತ್ರ ಪ್ರಿಯಾಂಕ್, ಧರಂಸಿಂಗ್ ಪುತ್ರ ಅಜಯ್ ಸಿಂಗ್, ಸಂಸದ ಜಾಧವ್ ಅವರ ಪುತ್ರರು ಕೂಡಾ ಮುನ್ನಲೆಯಲ್ಲಿದ್ದಾರೆ.

2018ರ ಚುನಾವಣೆಯ ಫಲಿತಾಂಶವನ್ನು ಅವಲೋಕಿಸುವುದಾದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಬಹುತೇಕ ನೇರ ಹಣಾಹಣಿ. ಈ ಭಾಗದಲ್ಲಿನ 41 ಕ್ಷೇತ್ರಗಳು ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಹಲವು ಉದಾಹರಣೆಗಳಿವೆ.

ಕಲಬುರಗಿ ಭಾಗದಿಂದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಬೀದರ್ ಭಾಗದಿಂದ ಬಂಡೆಪ್ಪ ಕಾಶಾಂಪೂರ, ಅಜಯ್ ಸಿಂಗ್, ರಾಯಚೂರು ಭಾಗದಿಂದ ರಾಜಾ ವೆಂಕಟಪ್ಪ ನಾಯಕ, ಶಿವನಗೌಡ ಪಾಟೀಲ್, ಕೊಪ್ಪಳ ಭಾಗದಿಂದ ರಾಘವೇಂದ್ರ ಹಿಟ್ನಾಳ್, ವಿಜಯನಗರ ಕಡೆಯಿಂದ ಆನಂದ್ ಸಿಂಗ್, ಬಳ್ಲಾರಿ ಭಾಗದಿಂದ ಸೋಮಶೇಖರ ರೆಡ್ಡಿ ಮುಂತಾದವರು ರಾಜ್ಯ ರಾಜಕೀಯದಲ್ಲಿ ತಮ್ಮ ಛಾಪನ್ನು ಮೂಡಿಸಿದವರು.

ಕಲ್ಯಾಣ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿ 2018ರ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನವನ್ನು ಗೆದ್ದಿತ್ತು ಎನ್ನುವುದನ್ನು ಟೇಬಲ್ ನಲ್ಲಿ ಕೊಡಲಾಗಿದೆ. ಒಟ್ಟು 41 ಕ್ಷೇತ್ರಗಳಲ್ಲಿ ಬಿಜೆಪಿ 18, ಜೆಡಿಎಸ್ 04 ಮತ್ತು ಕಾಂಗ್ರೆಸ್ 19 ಸ್ಥಾನದಲ್ಲಿ ಗೆಲುವನ್ನು ಕಂಡಿತ್ತು.

ಜಿಲ್ಲೆ ಒಟ್ಟು ಕ್ಷೇತ್ರಗಳು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಇತರರು
ಕಲಬುರಗಿ 09 05 04 00 00
ಯಾದಗಿರಿ 04 02 01 01 00
ಬೀದರ್ 06 02 03 01 00
ಕೊಪ್ಪಳ 05 03 02 00 00
ವಿಜಯನಗರ 05 02 03 00 00
ಬಳ್ಳಾರಿ 05 02 03 00 00
ರಾಯಚೂರು 07 02 03 02 00
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+