ಕಾಂಗ್ರೆಸ್ ಮುಂದಿನ 5 ವರ್ಷ ಹಿಂದೂಗಳ ಮೇಲೆ ಏನು ಮಾಡುತ್ತೆ ಅನ್ನೋದರ ಸ್ಯಾಂಪಲ್ ಇದು: ಕಲ್ಲಡ್ಕ ಪ್ರಭಾಕರ್ ಭಟ್
ಮಂಗಳೂರು, ಮೇ 18: ಹೊಸ ಸರಕಾರ ಮುಂದಿನ 5 ವರ್ಷ ಹಿಂದೂಗಳ ಮೇಲೆ ಏನು ಮಾಡುತ್ತೆ ಅನ್ನೋದರ ಸ್ಯಾಂಪಲ್ ಇದು ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಬಿಜೆಪಿ ನಾಯಕರ ಬ್ಯಾನರ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಹಲ್ಲೆಗೊಳಗಾದ ಹಿಂದೂ ಕಾರ್ಯಕರ್ತರನ್ನು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರಕಾರ ಮುಂದಿನ 5 ವರ್ಷ ಹಿಂದೂಗಳ ಮೇಲೆ ಏನು ಮಾಡುತ್ತೆ ಅನ್ನೋದರ ಸ್ಯಾಂಪಲ್ ಇದು ಎಂದು ಆತಂಕ ವ್ಯಕ್ತಪಿಡಿದ್ದಾರೆ.

ಕಂಬಳದ ಕೋಣಕ್ಕೆ ಹೊಡೆದರೂ ಶಿಕ್ಷೆಯಾಗುವ ಕಾಲವಿದು. ಆದರೆ, ಹಿಂದೂ ಕಾರ್ಯಕರ್ತರ ಮೇಲೆ ಪ್ರಾಣಿಗಳಿಗಿಂತಲೂ ಕ್ರೂರವಾಗಿ ಹೊಡೆದಿದ್ದಾರೆ. ಪೊಲೀಸರು ಹಿಂದೂ ಕಾರ್ಯಕರ್ತರನ್ನು ಪ್ರಾಣಿಗಿಂತಲೂ ಹೀನಾಯವಾಗಿ ನಡೆಸಿಕೊಂಡಿದ್ದಾರೆ.
ಈ ವಿಚಾರವಾಗಿ ಇಬ್ಬರು ಪೋಲೀಸರನ್ನು ಅಮಾನತು ಮಾಡಿದ್ದಾರೆ, ಈ ಘಟನೆಗೆ ಮೂಲ ಕಾರಣವಾದ ಡಿವೈಎಸ್ಪಿಯನ್ನು ಅಮಾನತು ಮಾಡಬೇಕು. ಪೋಲೀಸರು ನಮಗೆ ಒತ್ತಡ ಇತ್ತು ಎನ್ನುತ್ತಾರೆ ಯಾರ ಒತ್ತಡ ಇದೆ ಅನ್ನೋದನ್ನ ಹೇಳಲಿ, ಬೇರೆ ಯಾರು ಒತ್ತಡ ಮಾಡಬೇಕು ಎಂದು ಕಿಡಿಕಾರಿದ್ದಾರೆ.
ಇನ್ನೂ ಬಿಜೆಪಿಯವರು ಪೊಲೀಸರ ಮೇಲೆ ಒತ್ತಡ ಹಾಕ್ಲಿಕ್ಕೆ ಆಗುತ್ತಾ? ಸಣ್ಣಪುಟ್ಟ ವ್ಯತ್ಯಾಸ ಆಗಿದೆ, ಆದರೆ ಇದಕ್ಕೆ ಇಷ್ಟು ದೊಡ್ಡ ಶಿಕ್ಷೆಯ ಅಗತ್ಯವಿಲ್ಲ. ಸರಕಾರ ಹೇಳುತ್ತೆ ಎಂದು ಪೊಲೀಸರು ಹೀಗೆ ಮಾಡಿದರೆ ಮುಂದೆ ಕೆಟ್ಟ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೂ ಈ ಘಟನೆಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀನ್ ಟ್ವೀಟ್ ಮಾಡಿದ್ದು, ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾಗಿದೆ. ಈ ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ. ಉನ್ನತ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಈ ಘಟನೆ ಹಿನ್ನೆಲೆ ಏನು? ಇಲ್ಲಿದೆ ನೋಡಿ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿದೆ. ಈ ಹಿನ್ನೆಲೆಯಲ್ಲಿ ಹಿಂದು ಕಾರ್ಯಕರ್ತರು ಪುತ್ತೂರಿನ ಕೆಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಅವರ ಶ್ರದ್ಧಾಂಜಲಿ ಬ್ಯಾನರ್ ಹಾಕಿ ಅದಕ್ಕೆ ಚಪ್ಪಲಿ ಹಾರವನ್ನು ಹಾಕಿದ್ದು, ನಳಿನ್ ಕುಮಾರ್ ಕಟೀಲ್ ಹಾಗೂ ಡಿ.ವಿ. ಸದಾನಂದಗೌಡ ಅವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಬಿಜೆಪಿ ಜಿಲ್ಲಾ ಘಟಕದ ಮುಖಂಡರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಈ ಪ್ರಕರಣದಡಿ ಈಗಾಗಲೇ 7 ಜನ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದು, ಪೊಲೀಸರು ದೈಹಿಕವಾಗಿ ಬ್ಯಾನರ್ ಹಾಕಿದವರಿಗೆ ಹಲ್ಲೆ ಮಾಡಿದ್ದಾರೆ.












Click it and Unblock the Notifications