ಕಲಬುರ್ಗಿ ಹತ್ಯೆ : ಮತ್ತೆ ಮಹಾರಾಷ್ಟ್ರಕ್ಕೆ ಸಿಐಡಿ ತಂಡ
ಬೆಂಗಳೂರು, ಸೆಪ್ಟೆಂಬರ್ 28 : ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕದ ಸಿಐಡಿ ಪೊಲೀಸರು ಸನಾತನಾ ಸಂಸ್ಥಾ ಬಗ್ಗೆ ಮಹಾರಾಷ್ಟ್ರ ಪೊಲೀಸರು ತಯಾರಿಸಿರುವ ವರದಿಯನ್ನು ಪರಿಶೀಲಿಸುವ ಸಾಧ್ಯತೆ ಇದೆ.
4 ವರ್ಷಗಳ ಹಿಂದೆ ಸುಮಾರು 1000 ಪುಟದ ವರದಿಯನ್ನು ಮಹಾರಾಷ್ಟ್ರ ಪೊಲೀಸರು ಸನಾತನಾ ಸಂಸ್ಥಾ ಬಗ್ಗೆ ತಯಾರಿಸಿದ್ದರು. ಸಂಸ್ಥಾದ ಸದಸ್ಯರು, ಚಟುವಟಿಕೆಗಳು ಸೇರಿದಂತೆ ವಿವಿಧ ಮಾಹಿತಿಗಳು ಈ ವರದಿಯಲ್ಲಿವೆ. ಕಲಬುರ್ಗಿ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿರುವ ರುದ್ರಾ ಪಾಟೀಲ್ ಬಗ್ಗೆಯೂ ಇದರಲ್ಲಿ ಮಾಹಿತಿ ಇದೆ. [ಕಲಬುರ್ಗಿ ಹತ್ಯೆ ಸಂಚು ರೂಪಿಸಿದ್ದು ರುದ್ರ ಪಾಟೀಲ್]

ನಾಲ್ಕು ವರ್ಷಗಳ ಹಿಂದೆ ಸನಾತನಾ ಸಂಸ್ಥಾವನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬಂದಾಗ ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ 1 ಸಾವಿರ ಪುಟದ ವರದಿಯನ್ನು ಸಿದ್ಧಪಡಿಸಿ ಸಲ್ಲಿಕೆ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ನಿಷೇಧದ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. [ಪನ್ಸಾರೆ, ದಾಬೋಲ್ಕರ್, ಕಲಬುರ್ಗಿ ಅವರನ್ನು ಸನಾತನ ಸಂಸ್ಥೆ ಕೊಂದಿಲ್ಲ]
ಕ್ರಿಮಿನಲ್ ಚಟುವಟಿಕೆ ಇಲ್ಲ : ಸನಾತನಾ ಸಂಸ್ಥಾ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಮಹಾರಾಷ್ಟ್ರದ ವರದಿಯ ಹೇಳಿಲ್ಲ. ಸನತಾನ ಸಂಸ್ಥಾ ಜೊತೆ ಗುರುತಿಸಿಕೊಂಡಿರುವ ಗುಂಪು ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದೆ, ರುದ್ರ ಪಾಟೀಲ್ ಈ ಗುಂಪಿನ ನೇತೃತ್ವ ವಹಿಸಿಕೊಂಡಿದ್ದಾನೆ ಎಂದು ವರದಿ ಹೇಳಿದೆ.
ರುದ್ರ ಪಾಟೀಲ್ ನೇತೃತ್ವದ ಈ ಗುಂಪು ಪುಣೆ, ಗೋವಾ, ಕೊಲ್ಲಾಪುರ, ಸಾಂಗ್ಲಿ, ಕರ್ನಾಟಕದಲ್ಲಿ ಸಕ್ರಿಯವಾಗಿದೆ. ಕ್ರಿಮಿನಲ್ ಚಟುವಟಿಕೆ ಜೊತೆ ಈ ಗುಂಪು ಬಾಂಬ್ ಸ್ಪೋಟಗಳನ್ನು ನಡೆಸಿದೆ ಎಂದು ಮಹಾರಾಷ್ಟ್ರ ಸರ್ಕಾರದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಸ್ಥಾಗೆ ನಿಷೇಧ? : ಕೆಲವು ದಿನಗಳ ಹಿಂದೆ ಸತಾನಸ ಸಂಸ್ಥಾವನ್ನು ನಿಷೇಧಿಸಿ ಎಂಬ ಕೂಗು ಕೇಳಿಬಂದಿತ್ತು. ಆಗ ಗೋವಾ ಮುಖ್ಯಮಂತ್ರಿಗಳು ಕೆಲವು ಸದಸ್ಯರ ಚಟುವಟಿಕೆಗಳಿಗಾಗಿ ಸಂಸ್ಥೆಯುನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಆ.30ರಂದು ಧಾರವಾಡದ ಕಲ್ಯಾಣ ನಗರದ ನಿವಾಸದಲ್ಲಿ ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ.












Click it and Unblock the Notifications