ಕಳಸಾ ಬಂಡೂರಿ ಯೋಜನೆ, ಆ.23ರಂದು ಸರ್ವ ಪಕ್ಷ ಸಭೆ

ಬೆಂಗಳೂರು, ಆಗಸ್ಟ್ 14 : ಕಳಸಾ ಬಂಡೂರಿ ನಾಲಾ ಯೋಜನೆಯ ಬಗ್ಗೆ ಪ್ರತಿಪಕ್ಷಗಳ ಅಭಿಪ್ರಾಯವನ್ನು ಪಡೆಯಲು ಆ.23ರಂದು ಸರ್ವಪಕ್ಷ ಸಭೆಯನ್ನು ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕದ ಸರ್ವಪಕ್ಷ ನಿಯೋಗದ ಭೇಟಿಗೆ ಪ್ರಧಾನಿ ಕಚೇರಿಯಿಂದ ಇನ್ನೂ ಸಮಯಾವಕಾಶ ಸಿಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಸಿದ್ದರಾಮಯ್ಯ ಅವರು, ಕಳಸಾ ಬಂಡೂರಿ ನಾಲೆ (ಮಹದಾಯಿ ಯೋಜನೆ) ಜಾರಿಗೊಳಿಸುವಂತೆ ಉತ್ತರ ಕರ್ನಾಟಕ ಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಈ ವಿಚಾರದಲ್ಲಿ ರಾಜ್ಯದ ಮುಂದಿನ ನಡೆ ಬಗ್ಗೆ ಮಾರ್ಗದರ್ಶನ ಪಡೆಯಲು ಸರ್ವ ಪಕ್ಷ ಸಭೆಯನ್ನು ಕರೆಯಲಾಗಿದೆ ಎಂದರು. [ಕೇಳುವವರೇ ಗತಿಯಿಲ್ಲದ ಕಳಸ ಭಂಡೂರಿ!]

north karnataka

'ನಾಡಿನ ನೆಲ-ಜಲದ ವಿಚಾರದಲ್ಲಿ ಸರ್ಕಾರ ಎಂದಿಗೂ ರಾಜಕೀಯ ಮಾಡುವುದಿಲ್ಲ. ಪ್ರತಿಪಕ್ಷಗಳು ರಾಜಕೀಯ ಮಾಡಬಾರದು ಎಂದು ಅವರು ಹೇಳಿದರು. ಸರ್ಕಾರ ಕಳಸಾ-ಬಂಡೂರಿ ನಾಲಾ ವಿಚಾರವನ್ನು ನಿರ್ಲಕ್ಷ್ಯ ಮಾಡುತ್ತಿಲ್ಲ. ಕೃಷ್ಣಾ ಮತ್ತು ಕಾವೇರಿಯಷ್ಟೇ ಈ ಯೋಜನೆ ಮುಖ್ಯವಾದದ್ದು' ಎಂದು ಅವರು ತಿಳಿಸಿದರು. [ಚಿತ್ರ : ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ]

ಆ.23ರಂದು ಬೆಳಗ್ಗೆ 11 ಗಂಟೆಗೆ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಉಭಯ ಸದನಗಳ ನಾಯಕರು ಹಾಗೂ ಎಲ್ಲ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರನ್ನು ಸಭೆಗೆ ಆಹ್ವಾನಿಸಲಾಗುತ್ತದೆ. ಅಲ್ಲದೇ ರಾಜ್ಯದ ಸಂಸದರ ಜೊತೆಯೂ ಪ್ರತ್ಯೇಕವಾಗಿ ಸಭೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು. [ರಾಜಕಾರಣಿಗಳೇ, ಉತ್ತರ ಕರ್ನಾಟಕ ಬಾಯಾರಿದೆ!]

ಪ್ರಧಾನಿ ನಡೆ ಬೇಸರ ತಂದಿದೆ : ರಾಜ್ಯದಲ್ಲಿನ ಬರಗಾಲ, ರೈತ ಆತ್ಮಹತ್ಯೆ, ಕಳಸಾ- ಬಂಡೂರಿ ಮುಂತಾದ ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗಾಗಿ ಕಾಲವಾಶ ಕೇಳಿದ್ದೇವೆ.

ಆದರೆ, ನರೇಂದ್ರ ಮೋದಿ ಅವರು ಸಮಯಾವಕಾಶ ನೀಡಿಲ್ಲ ಇದು ತೀವ್ರ ನಿರಾಸೆ ಹಾಗೂ ನೋವುಂಟು ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಮಂತ್ರಿ ಅವರು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದೇ ಇರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+