ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೂರು ಸಲ್ಲಿಸಲು ಹೋದರೆ ಗುರ್ ಎಂದ ಎಂಬಿ ಪಾಟೀಲರು!

By Madhusoodhan
|
Google Oneindia Kannada News

ಕಲಬುರಗಿ, ಜುಲೈ, 18: ಅಧಿಕಾರಿಗಳ ಮೇಲೆ ರಾಜಕಾರಣಿಗಳು ತೋರಿಸುತ್ತಿದ್ದ ದರ್ಪ ಇದೀಗ ಹೋರಾಟಗಾರರ ಮೇಲೆ ತಿರುಗಿದೆ. ಕಾಲುವೆಯ ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಲು ಬಂದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನು ಜಲ ಸಂಪನ್ಮೂಲ ಸಚಿವ ಎಂ.ಬಿ ಪಾಟೀಲ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಸಣ್ಣ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಭಾನುವಾರ ಜೇವರ್ಗಿಯ ಸೊನ್ನ ಗ್ರಾಮಕ್ಕೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಎಂದು ತೆರಳಿದ್ದರು. ಈ ವೇಳೆ ಸಚಿವರ ಬಳಿ ಆಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕಾಮಗಾರಿಗಳು ಅತ್ಯಂತ ಕಳಪೆಯಾಗಿದೆ, ಪರಿಹಾರ ಕ್ರಮ ತೆಗೆದುಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.[ಇನ್ಸ್ ಪೆಕ್ಟರ್ ಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಅವಾಜ್ ಹಾಕಿದ್ದೇಕೆ?]

patil

ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಸಚಿವರು ಹೋರಾಟಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಪಾಟೀಲ್, ನಾನು ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ ಎಂದು ಹೇಳಿಕೆ ನೀಡಿದ್ದು ಅಂಥ ಯಾವ ಘಟನೆಯೇ ನಡೆದಿಲ್ಲ ಎಂದು ಹೇಳಿದ್ದಾರೆ.[ವಿಜಯಾಪುರದ ಹೆಸರು ಬದಲಾದ ಕತೆ]

ಜನರ ಸಮಸ್ಯೆಗಳನ್ನು ಕೇಳಲು, ಜನರಿಗೆ ಸ್ಪಂದಿಸಲು ಸದಾ ಮುಂದಿರಬೇಕಾದ ಜನಪ್ರತಿನಿಧಿಗಳೇ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ತಮ್ಮನ್ನೆ ತಾವು ಕೇಳಿಕೊಳ್ಳಬೇಕಿದೆ.

English summary
Karnataka Minister for water resources M.B. Patil has landed in a controversy by allegedly scold Kannada activists in a visit at Jevargi, Kalaburagi district, on 17 July.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X