'ಖರ್ಗೆ ಕುಟುಂಬ'ವನ್ನು ನಾಶ ಮಾಡುತ್ತೇನೆ ಎಂದಿದ್ದ ಬಿಜೆಪಿ ಮುಖಂಡ 'ಮಣಿಕಂಠ ರಾಠೋಡ್' ಮೇಲೆ ಮಾರಣಾಂತಿಕ ದಾಳಿ
ಕಲಬುರಗಿ, ನವೆಂಬರ್ 19: ರಾಜ್ಯ ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರದಲ್ಲಿ ಕಣಕ್ಕಿಳಿದಿದ್ದ ಬಿಜೆಪಿ ಮುಖಂಡ ಮಣಿಕಂಠ್ ರಾಥೋಡ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಮಲ್ಲಿಕಾರ್ಜುನ್ ಖರ್ಗೆ ಕುಟುಂಬದ ವಿರುದ್ಧ ತೊಡೆ ತಟ್ಟಿದ್ದ ಮಣಿಕಂಠ್ ರಾಥೋಡ್ ಖರ್ಗೆಯವರ ಪುತ್ರನ ವಿರುದ್ಧ ಸ್ಪರ್ಧಿಸಿದ್ದರು. ಅಲ್ಲಿಂಗ ಮಣಿಕಾಂತ್ ಕಾಂಗ್ರೆಸ್‌ನ ಟಾರ್ಗೆಟ್ ಆಗಿದ್ದರು ಅಂತಲೂ ಆರೋಪಿಸಲಾಗಿದೆ. ಈ ಮಧ್ಯೆ ಶನಿವಾರ ದುಷ್ಕರ್ಮಿಗಳಿಂದ ದಾಳಿ ಒಳಗಾಗಿರುವ ತಲೆ, ಕಿವಿ, ಕೈಗಳಿಗೆ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ತಾಪುರದ ಮಾಲಗತ್ತಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-150ರ ಸಮೀಪ ಗಾಯಾಳು ಮಣಿಕಂಠ್ ರಾಥೋಡ್ ಅವರು ತಮ್ಮ ತೋಟದ ಮನೆಯಿಂದ ಕಲಬುರಗಿಗೆ ತೆಳುತ್ತಿದ್ದವರು. ಈ ವೇಳೆ ದುರುದ್ದೇಶಪೂರ್ವಕವಾಗಿಯೇ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಘಟನೆ ವೇಳೆ ರಾಥೋಡ್ ಅವರ ಆಪ್ತ ಕಾರ್ಯದರ್ಶಿ ಸಹ ಸ್ಥಳದಲ್ಲಿದ್ದರು.
ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದ ರಾಥೋಡ್
ಬಿಜೆಪಿ ಮುಖಂಡ ರಾಥೋಡ್ ಅವರ ವಿರುದ್ಧ 40 ಕ್ಕೂ ಹೆಚ್ಚು ಪ್ರಕರಣಗಳು ಇವೆ ಎನ್ನಲಾಗಿದೆ. ಗ್ರಾಮದ ದೇವಾನಂದ ಕೊರಬ ಎಂಬುವವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ ಎಂಬ ಆರೋಪದಲ್ಲಿ ಈ ಹಿಂದೆ ಅವರ ಬಂಧನವಾಗಿತ್ತು.
ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಇತ್ತೀಚೆಗೆ ಅವರು ಚಿತ್ತಾಪುರದ ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಬೆಳಕಿ ಚೆಲ್ಲಿದ್ದರು. ವಾಸ್ತವ ಸ್ಥಿತಿ ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವೇಳೆ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಆಸ್ಪತ್ರೆಯ ವೈದ್ಯಾಧಿಕಾರಿ ರಾಥೋಡ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಸಚಿವ ಪ್ರಿಯಾಂಕ್ ಖರ್ಗೆಯಿಂದ ಟಾರ್ಗೆಟ್, ಕಿರಕುಳ
ರಾಥೋಡ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಕಾಂಗ್ರೆಸ್ ಸರ್ಕಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ಹೊರ ಹಾಕಿ X ನಲ್ಲಿ ಟ್ವೀಟ್ ಮಾಡಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇನ್ನೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿಯವರೆಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮುಖಂಡ ಮಣಿಕಂಠ್ ರಾಥೋಡ್ ಅವರನ್ನು ಇನ್ನಿಲ್ಲದಂತೆ ಟಾರ್ಗೆಟ್ ಮಾಡಿದ್ದಾರೆ. ಕಿರಿಕುಳ ನೀಡಿದ್ದಾರೆ ಎಂದು ಆರೋಪಿಸಿದೆ.
ಇದೀಗ ನಮ್ಮ ಮುಖಂಡನ ಮೇಲೆ ದಾಳಿ ಆಗಿವೆ. ಒಂದು ವೇಳೆ ಅವರ ಜೀವಕ್ಕೆ ಏನಾದರೂ ಹಾನಿಯಾದರೂ ಅದಕ್ಕೆ ನೇರ ಹೊಣೆ ಸಚಿವ ಪ್ರಿಯಾಂಖ್ ಖರ್ಗೆ ಮತ್ತು ಕಾಂಗ್ರೆಸ್ ಸರ್ಕಾರವೇ ಆಗುತ್ತದೆ ಆಗುತ್ತದೆ ಎಂದು ಬಿಜೆಪಿ ಎಚ್ಚರಿಸಿದೆ. ಈ ಪೋಸ್ಟ್‌ಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಟ್ಯಾಗ್ ಮಾಡಲಾಗಿದೆ.












Click it and Unblock the Notifications