Kadra Reservoir: ಭಾರೀ ಮಳೆ ಹಿನ್ನೆಲೆ 'ಕದ್ರಾ' ಜಲಾಶಯದಲ್ಲಿ ಭಾರೀ ಒಳಹರಿವು, 6000 ಕ್ಯೂಸೆಕ್ ನೀರು ಬಿಡುಗಡೆ
Kadra Dam: ಉತ್ತರ ಕನ್ನಡ ಸೇರಿದಂತೆ ರಾಜ್ಯದ ಕರಾವಳಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆ ಆಗುತ್ತಿರುವ ಪರಿಣಾಮ ರಾಜ್ಯದ ಅನೇಕ ಜಲಾಶಗಳು ಮೈದುಂಬಿಕೊಂಡಿವೆ. ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಕಂಡು ಬರುವ ಕಾಳಿನದಿಗೂ ಜೀವ ಕಳೆ ಬಂದಿದೆ. ಈ ನದಿಗೆ ಅಡ್ಡಲಾಗಿ ಕಟ್ಟಿರುವ 'ಕದ್ರಾ ಜಲಾಶಯ'ದಲ್ಲಿ (Kadra Dam) ಭಾರೀ ಒಳಹರಿವು ದಾಖಲಾಗಿದೆ. ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವ ಕಾರಣ, ನದಿ ತೀರದ ಪ್ರದೇಶಗಳ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ.
ಎರಡು ಮೂರು ವಾರಗಳಿಂದ ಪಶ್ಚಿಮ ಘಟ್ಟಗಳಲ್ಲಿ ನಿರಂತರ ಮಳೆ ಆಗುತ್ತಿದೆ. ಹೀಗಾಗಿ 'ಕದ್ರಾ ಆಣೆಕಟ್ಟಿ'ನಲ್ಲಿ ಜಲಾಶಯದಲ್ಲಿ ಅತ್ಯಧಿಕ ನೀರಿನ ಸಂಗ್ರಹವಾಗಿದೆ. ಜುಲೈ 5ರಂದು ಶುಕ್ರವಾರದಂದು ಜಲಾಶಯದ ಒಳಹರಿವು 19,976 ಕ್ಯೂಸೆಕ್ಸ್ ಎಂದು ಕರ್ನಾಟಕ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಲಾಶಯದ ಒಳಹರಿವು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಕದ್ರಾ ಅಣೆಕಟ್ಟಿನಲ್ಲಿ 4 ಗೇಟ್‌ಗಳನ್ನು ತೆರೆಯಲಾಗಿದೆ. ಒಟ್ಟು ಗೇಟ್ 6000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ಹೀಗಾಗಿ ಜಲಾಶಯದ ಅಕ್ಕಪಕ್ಕದ ಗ್ರಾಮಗಳ ನಿವಾಸಿಗಳಲ್ಲಿ ಆತಂಕ ಶುರುವಾಗಿ, ರಾತ್ರೋ ರಾತ್ರಿ ಪ್ರವಾಹ ಸೃಷ್ಟಿಯಾಗಬಹುದು ಎಂಬ ಭೀತಿ ಉಂಟಾಗಿದೆ.
ಜುಲೈ ಅಂತ್ಯಕ್ಕೆ ಕಾಳಿ ನದಿ ಭರ್ತಿ
ಮತ್ತೊಂದು ಕಡೆ ಉತ್ತರ ಕನ್ನಡದ ಕಾಳಿ ನದಿಯ ಕದ್ರಾ ಅಣೆಕಟ್ಟು ಈ ವರ್ಷದ ಆರಂಭದಲ್ಲಿ ಭಾರಿ ಪ್ರವಾಹ ಉಂಟು ಮಾಡಲು ಸಜ್ಜಾದಂತೆ ಕಂಡು ಬರುತ್ತಿದೆ. ಸಾಮಾನ್ಯವಾಗಿ ಇದು ಜುಲೈ ಅಂತ್ಯದ ವೇಳೆಗೆ ತುಂಬಲಿದೆ.
ಇನ್ನು ಉತ್ತರ ಕನ್ನಡದ ಜಿಲ್ಲೆಯಲ್ಲಿರು ಮತ್ತೊಂದು ಕೊಡಸಳ್ಳಿ ಆಣೆಕಟ್ಟಿನಲ್ಲಿ (kodasalli dam) ಸಹ ಅತ್ಯಧಿಕ ಪ್ರಮಾಣ ನೀರು ತುಂಬಿದೆ. ಜಲಾಶಯವು ಸಂಪೂರ್ಣ ಭರ್ತಿ ಆಗುವ ಹಂತಕ್ಕೆ ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಹಾಗೂ ಮಲೆನಾಡು ಭಾಗದಲ್ಲಿ ಅತ್ಯಧಿಕ ಮಳೆ ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಕೇರಳ, ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ ಆಗುತ್ತಿದ್ದು, ಇದು ಮುಂದುವರಿಯಲಿದೆ. ಕಾಳಿ ನದಿ, ಜಲಾಶಯ ಒಳಹರಿವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications