ಕಾಟೇರ ಚಿತ್ರ ಯಶಸ್ವಿ ಪ್ರದರ್ಶನ; ಕಾಫಿನಾಡಿನ ರಸ್ತೆಗೆ ದರ್ಶನ್ ಹೆಸರು ನಾಮಕರಣ

ಚಿಕ್ಕಮಗಳೂರು, ಜನವರಿ 06: ಕರ್ನಾಟಕದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಟ ದರ್ಶನ್ ಅವರ ವೃತ್ತಿ ಜೀವನದ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿರುವ ಖ್ಯಾತಿ 'ಕಾಟೇರ' ಚಿತ್ರಕ್ಕೆ ಸಿಕ್ಕಿದೆ.

ಹೌದು, ನಿರ್ದೇಶಕ ತರುಣ್ ಸುಧೀರ್ ಹಾಗೂ ದರ್ಶನ್ ಅವರದ್ದು ಹಿಟ್ ಕಾಂಬಿನೇಷನ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದರ್ಶನ ಅಭಿಮಾನಿಗಳು ಹಾಗೂ ಚಿತ್ರ ತಂಡ ವಿಭಿನ್ನ ರೀತಿಯಲ್ಲಿ ಖುಷಿಯನ್ನ ಹಂಚುತ್ತಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಖುಷಿಯನ್ನ ವ್ಯಕ್ತಪಸಿದ್ದಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಟೇರ ಚಿತ್ರ ಯಶಸ್ವಿ ಪ್ರದರ್ಶನ ಹಿನ್ನೆಲೆ ಕಾಫಿನಾಡಿನ ರಸ್ತೆ ಗೆ ದರ್ಶನ್ ಹೆಸರು ನಾಮಕರಣ ಮಾಡಿದ್ದಾರೆ.

Kaatera Success: Fans HaSuccessve Named A Road In COffee Nadu After Darshan

ಕಾಫಿನಾಡಿನ ರಸ್ತೆ ಗೆ ದರ್ಶನ್ ಹೆಸರು ನಾಮಕರಣ ಮಾಡುವ ಮೂಲಕ ಖುಷಿಯನ್ನ ವ್ಯಕ್ತಪಡಿಸಿದ್ದಾರೆ. ಕಡೂರು ಪಟ್ಟಣದ ಪುರಸಭೆ ವಾರ್ಡ್ ನಂ 11 ರ ರಸ್ತೆಗೆ ದರ್ಶನ್ ತೂಗದೀಪ ಹೆಸರನ್ನ ನಟ ದರ್ಶನ್‌ ಅಭಿಮಾನಿಗಳು ಹಾಗೂ ಪುರಸಭೆ ಸದಸ್ಯ ಮನು ಎಂಬುದವವರು ನಾಮಕರಣ ಮಾಡಿದ್ದಾರೆ.

ಈ ವೇಳೆ ಪುರಸಭೆ ಸದಸ್ಯ ಮನು ಮಾತನಾಡಿ, ಕಾಟೇರ ಚಿತ್ರ ರಾಜ್ಯದ ಜನತೆಯ ಮನಸ್ಸಿನಲ್ಲಿದೆ. ರಾಜ್‌ ಕುಮಾರ್‌ , ವಿಷ್ಟುವರ್ಧನ್‌ ಅವರ ಸ್ಥಾನಕ್ಕೆ ದರ್ಶನ್‌ ಅವರು ಸಹ ಸೇರುತ್ತಾರೆ. ರಾಜ್ಯದಲ್ಲಿ ಅತೀ ಹೆಚ್ಚು ಅಭಿಮಾನಿಗಳು ಇರುವಂತಹ ನಟ ಎಂದರೇ ಅದು ದರ್ಶನ್‌ ಅವರು, ಅಭಿಮಾನಿಗಳಿಗೆ ದರ್ಶನ್‌ ಅವರು ಸೆಲೆಬ್ರಿಟಿ ಅಂತ ಹೆಸರು ಕೊಟ್ಟಿದ್ದಾರೆ. ಹಬ್ಬಕ್ಕಿಂತ ಹೆಚ್ಚಾಗಿ ನಾವು ದರ್ಶನ್‌ ಅವರ ಸಿನಿಮಾವನ್ನ ಸಂಭ್ರಮಿಸುತ್ತೇವೆ. ಈಗಾಗಲೇ ನಟ ಪುನೀತ್‌ ರಾಜ್‌ ಕುಮಾರ್‌ ಅವರ ಹೆಸರನ್ನ ಇಟ್ಟಿದ್ದೇವೆ. ಇದೀಗ ನಾವು ದರ್ಶನ ಅವರ ಸಹಾಯ, ಧಾನ ಧರ್ಮವನ್ನ ಎಲ್ಲವನ್ನು ಕಂಡು ಇದೀಗ ನಾವು ಕಾಫಿನಾಡು ರಸ್ತೆಗೆ ದರ್ಶನ್‌ ಅವರ ಹೆಸರನ್ನ ನಾಮಕರಣ ಮಾಡಿದ್ದೇವೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+