ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ ಎಂಎಂ ಕಲಬುರಗಿ ಬೆಂಬಲಿಸಿ ಟ್ವಿಟ್ಟರ್ ಅಭಿಯಾನ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 29: ಅಗಸ್ಟ್ 30,2016ಕ್ಕೆ ಕರ್ನಾಟಕದ ಪಾಲಿಗೆ ಕರಾಳ ದಿನ, ಕಾರಣ ನಾಳೆ ಕನ್ನಡದ ಮೇರು ಸಾಹಿತಿ, ಸಂಶೋಧಕ, ಬಸವ ಭಕ್ತ, ನಾಡೋಜ ಡಾ. ಎಂಎಂ ಕಲ್ಬುರ್ಗಿಯವರ ಹತ್ಯೆಯಾಗಿ ಬರೋಬ್ಬರಿ ಒಂದು ವರ್ಷವಾಗುತ್ತದೆ. ಈ ಸಂದರ್ಭದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಐಟಿ ಬಿಟಿ ಕನ್ನಡ ಬಳಗ ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

ಕಲಬುರಗಿ ಪ್ರಕರಣದಲ್ಲಿ ನ್ಯಾಯ ಮಾತ್ರ ಮರಿಚಿಕೆಯಾಗಿದೆ. ಸರ್ಕಾರವು ಮೊದಲು ದಿನಕ್ಕೊಂದು ಹೇಳಿಕೆ ಕೊಟ್ಟು ಕಣ್ಣೊರೆಸುವ ತಂತ್ರಕ್ಕೆ ಹೋಗಿತ್ತು ಆದರೆ ಈಗ ಅದು ಸಂಪೂರ್ಣ ಮೌನವಾಗಿದೆ ಈ ತರದ ಅನ್ಯಾಯದಿಂದಾಗಿ ಕನ್ನಡ ಮತ್ತು ಅವರ ಅಭಿಮಾನಿಗಳಿಗೆ ನಿರಂತರ ಆಂತರಿಕ ನೋವಾಗಲ್ಪಟ್ಟಿದೆ ಮತ್ತು ನ್ಯಾಯ ದೂರದ ಮರಿಚಿಕೆಯಾಗಿದೆ. [ಕಲಬುರ್ಗಿ ಹತ್ಯೆ ಕೇಸ್ : ಸಿಐಡಿ ವರದಿಯಲ್ಲೇನಿದೆ?]

ಸರ್ಕಾರದ ಈ ನಿಲುವನ್ನು ಖಂಡಿಸಿ ಸಾಮಾಜಿಕ ಜಾಲ ತಾಣದ ಕಲ್ಬುರ್ಗಿಮತ್ತು ಕನ್ನಡ ಅಭಿಮಾನಿಗಳು ಜೊತೆಗೆ ಆಕ್ಟಿವ್ ನೆಟಿಜೆನ್ಸ್ ಗಳು ಕೂಡಿ ಇಂದು ರಾತ್ರಿ ಹತ್ತುಗಂಟೆಯಿಂದ ದೇಶ್ಯಾದ್ಯಂತ ಟ್ವಿಟ್ಟರ್ ಟ್ರೆಂಡ್ ಮಾಡಬೇಕೆಂದಿದ್ದಾರೆ.[ಎಂಎಂ ಕಲಬುರ್ಗಿ ಹತ್ಯೆ, ಶೀಘ್ರದಲ್ಲೇ ಆರೋಪಿಗಳ ಬಂಧನ : ಸಿಎಂ]

ಹೀಗಾಗಿ ಸಮಾನ ಮನಸ್ಕ ಎಲ್ಲ ಗೇಳೆಯರು ಇಂದು ರಾತ್ರಿ 10 ಗಂಟೆಯಿಂದ ನಾಳೆ ಸಂಜೆವರೆಗೆ ಟ್ವಿಟ್ ಮಾಡುವ ಮುಖಾಂತರ ನ್ಯಾಯವನ್ನು ಕೇಳೊಣ ಬನ್ನಿ . ಸತ್ಯದ ಸಾವಾದಾಗ ಅದನ್ನ ವಿರೋಧಿಸಲೇಬೇಕು ಇಲ್ಲವಾದಲ್ಲಿ ಜಗತ್ತು ಸುಳ್ಳಿನ ಕಾಡರಾತ್ರಿಯಲ್ಲಿ ಮುಳಗಿಹೋಗಿಬಿಡುತ್ತದೆ.

ಬನ್ನಿ ಎಲ್ಲರೂ ಜೊತೆಗೂಡಿ ಹೋರಾಡೋಣ

ಬನ್ನಿ ಎಲ್ಲರೂ ಜೊತೆಗೂಡಿ ಹೋರಾಡೋಣ

ಬನ್ನಿ ಎಲ್ಲರೂ ಜೊತೆಗೂಡಿ ಹೋರಾಡೋಣ, ಪಕ್ಷ, ಜಾತಿ, ಧರ್ಮಗಳನ್ನ ಮೀರಿ ಸತ್ಯಕ್ಕಾಗಿ ಹೋರಾಡೋಣ. ಕನ್ನಡ ಮತ್ತು ವಚನಕ್ಕಾಗಿ ಪ್ರಾಣ ನೀಡಿದ ಶ್ರೇಷ್ಠ ಸಮಾನತೆಯ ಹರಿಕಾರನ ಸಾವಿಗೆ ನ್ಯಾಯದ ಕಂಬನಿ ಮಿಡಿಯೋಣ. ಹತ್ಯಕೋರರನ್ನು ಶೀಘ್ರ ಬಂದಿಸಲಿ ಎಂದು ಮನವಿ ಮಾಡೋಣ.

ಪ್ರೊ ಕಲ್ಬುರ್ಗಿಯವರ ಸಾಧನೆ

ಪ್ರೊ ಕಲ್ಬುರ್ಗಿಯವರ ಸಾಧನೆ

135 ಪುಸ್ತಕಗಳು, 770 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, ಕನ್ನಡ ಹಸ್ತಪ್ರತಿ ಮತ್ತು ಶಾಸನಗಳ ಸಂಶೋಧನೆ, ಕರ್ನಾಟಕ ಸಮಗ್ರ ಸಾಂಸ್ಕೃತಿಕ ಸಾಹಿತ್ಯದ ಸಂಶೋಧನೆ, ಧಖನಿ ಸಾಹಿತ್ಯ, ವಚನಗಳು ಮತ್ತು ಶರಣ ಸಾಹಿತ್ಯ, ಅಳುವಿನಂಚಿನಲ್ಲಿರುವ ಸಮಗ್ರ ಸಾಹಿತ್ಯ ಸಂಪಾಧನೆ ಇತ್ಯಾದಿ ಅಪೂರ್ವ ಸಾಧನೆ.

ಎಸ್.ಎಫ್.ಐ ಪ್ರತಿಭಟನೆ

ಎಸ್.ಎಫ್.ಐ ಪ್ರತಿಭಟನೆ

ವೈದಿಕ ಶಾಹಿಯ ವಂಚಕ ವಾದಗಳಿಗೆ ಎದುರಾಗಿ ವೈಚಾರಿಕವಾಗಿ ಗಟ್ಟಿನೆಲೆಯಲ್ಲಿ ಪ್ರಬಲ ಸವಾಲನ್ನು ಒಡ್ಡುತ್ತಿದ್ದ, 12ನೇ ಶತಮಾನದ ಶರಣರ ಚಳುವಳಿಯನ್ನು ವಿಶಿಷ್ಟ ವಿಶ್ಲೇಷಣೆಯಿಂದ ಅದರ ಅಮೋಘತೆ ಎತ್ತಿ ತೋರಿಸಿದ ನಮ್ಮ ನಾಡಿನ ಖ್ಯಾತ ಸಂಶೋಧಕ, ಚಿಂತಕ ಡಾ.ಎಂ.ಎಂ ಕಲುಬುರ್ಗಿಯವರ ಹತ್ಯೆಯಾಗಿ 30 ಆಗಸ್ಟ್ 2016ರಂದು ಒಂದು ವರ್ಷ ಆಗುತ್ತದೆ. ಒಂದು ವರ್ಷ ಕಳೆದರೂ ಹಂತಕರು ಯಾರೆಂದು ಪತ್ತೆಯಾಗಿಲ್ಲ.

ತನಿಖೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ

ತನಿಖೆ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ

ಈ ಹಿನ್ನಲೆಯಲ್ಲಿ ಹಂತಕರನ್ನು ಬಂಧಿಸುವಂತೆ, ಶೀಘ್ರಗತಿಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿ ನಾಳೆ ಧಾರವಾಡದಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳು ರಾಷ್ಟ್ರೀಯ ಮಟ್ಟದ ಬೃಹತ್ ಪ್ರತಿಭಟನೆ ನಡೆಸಲಿವೆ. ಈ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಪ್ರತಿಭಟನೆ ನಡೆಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಲಾಗುತ್ತದೆ.

English summary
Karnataka Chief Minister Siddaramaiah said Professor M.M.Kalburgi murder case accused will be arrested soon. Kalburgi was shot dead in the morning of 30 August 2015 at his residence Dharawad but till now no progress in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X