ಅಮ್ಮನಿಗೆ ಇದು ಸ್ಪೆಷಲ್ ಗಿಫ್ಟ್ ಎಂದ ಜ್ಯೂ. ಎನ್‌ಟಿಆರ್, ಏನದು ?
ತೆಲುಗಿನ ಸ್ಟಾರ್ ನಟ ಹಾಗೂ ಜೂನಿಯರ್ ಎನ್‌ಟಿಆರ್ ಅವರ ತಾಯಿಗೆ ವಿಶೇಷ ಗಿಫ್ಟ್ ಇದಾಗಿತ್ತು. ನನ್ನ ತಾಯಿ ಬಹುದಿನಗಳಿಂದ ಇಲ್ಲಿಗೆ ಬರಬೇಕು ಎಂದು ಆಸೆ ಪಡುತ್ತಿದ್ದರು ಎಂದು ಹೇಳಿದ್ದಾರೆ. ಕರ್ನಾಟಕದ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಪಡೆದ ಜ್ಯೂನಿಯರ್ ಎನ್‌ಟಿಆರ್ ಹಾಗೂ ಅವರ ತಾಯಿ ಇದು ತಮ್ಮ ಬಹುದಿನಗಳ ಕನಸಾಗಿತ್ತು ಎಂದು ಜ್ಯೂನಿಯರ್ ಎನ್‌ಟಿ ಆರ್ ಹೇಳಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟ ಜ್ಯೂ.ಎನ್‌ಟಿಆರ್, ಅವರ ತಾಯಿ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಶನಿವಾರ ಉಡುಪಿ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಜ್ಯೂ. ಎನ್‌ಟಿಆರ್ ಅವರ ತಾಯಿಯ ಆಸೆಯಂತೆ ಅವರನ್ನು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಕರೆದುಕೊಂಡು ಬಂದಿದ್ದಾಗಿಯೂ, ಇದು ಅವರ ಬಹುದಿನಗಳಿಂದ ಕಾಯುತ್ತಿದ್ದ ದಿನವೆಂದೂ ಹೇಳಿದ್ದಾರೆ.

ತಾಯಿಗೆ ಜನ್ಮದಿನದ ಮೊದಲ ಗಿಫ್ಟ್
ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿರುವ ಸಂತಸವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಜ್ಯೂ. ಎನ್‌ಟಿಆರ್‌ಅವರು, ಸೆಪ್ಟೆಂಬರ್ 2ರಂದು ನನ್ನ ತಾಯಿಯ ಜನ್ಮದಿನವಿದೆ. ಉಡುಪಿ ಶ್ರೀಕೃಷ್ಣ ಮಠದ ಭೇಟಿ ಅವರ ಜನ್ಮದಿನಕ್ಕೆ ಮೊದಲ ಗಿಫ್ಟ್ ಎಂದು ಸಂತಸ ಹಂಚಿಕೊಂಡಿದ್ದಾರೆ.
ಅಮ್ಮ ಯಾವಾಗಲೂ ಶ್ರೀಕೃಷ್ಣನ ದರ್ಶನಕ್ಕಾಗಿ ಅವರ ತವರು ಮನೆಯಾದ ಕುಂದಾಪುರದಿಂದ ಉಡುಪಿಗೆ ಹೋಗುವಂತೆ ನನ್ನನ್ನು ಒತ್ತಾಯಿಸುತ್ತಿದ್ದರು. ಈಗ ಅವರ ಕನಸು ನನಸಾಗಿದೆ. ಸೆಪ್ಟೆಂಬರ್ 2 ರಂದು ಅವರ ಹುಟ್ಟುಹಬ್ಬ. ಅದಕ್ಕೂ ಮುಂಚೆಯೇ ಈ ಬಾರಿ ಗಿಫ್ಟ್ ಇದಾಗಿರಲಿದೆ ಎಂದಿದ್ದಾರೆ. ನಿರ್ಮಾಪಕ (ಹೊಂಬಾಳೆ ಫಿಲಂಸ್ ಮುಖ್ಯಸ್ಥ) ವಿಜಯ್ ಕಿರಗಂದುರ್ ಸರ್‌ಗೆ ಧನ್ಯವಾದಗಳು. ನನ್ನ ಗೆಳೆಯ ಪ್ರಶಾಂತ್ ನೀಲ್ ಅವರೊಂದಿಗೆ ಇಲ್ಲಿಗೆ ಬಂದಿರುವ ಬಗ್ಗೆ ಸಂತೋಷವಿದೆ. ಅಲ್ಲದೇ ನಟ ರಿಷಬ್ ಶೆಟ್ಟಿ ಅವರೂ ಸಹ ನಮ್ಮೊಂದಿಗೆ ಬಂದು ಈ ಸಂತೋಷದ ಕ್ಷಣಗಳನ್ನು ಇನ್ನಷ್ಟು ಸ್ಪೆಷಲ್ ಮಾಡಿದ್ರು ಎಂದು ಹೇಳಿದ್ದಾರೆ.

ಎನ್‌ಟಿಆರ್ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧತೆ
ಇನ್ನು ಜ್ಯೂನಿಯರ್ ಎನ್‌ಟಿಆರ್ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟ. ಸದ್ಯ ಅವರು ದೇವರ ಎನ್ನುವ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ನಾಯಕಿಯಾಗಿ ಜಾನ್ವಿ ಕಪೂರ್ ಅವರು ಅಭಿನಯಿಸುತ್ತಿದ್ದಾರೆ. ಸೆಪ್ಟೆಂಬರ್ 27 ರಂದು ಚಿತ್ರದ ಮೊದಲ ಭಾಗ ಭಾರತದಾದ್ಯಂತ ಬಿಡುಗಡೆ ಆಗಲಿದೆ.
ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರುವ ಸ್ಟಾರ್
ಟಾಲಿವುಡ್‌ನಲ್ಲಿ ತಮ್ಮದೇ ಹವಾ ಸೃಷ್ಟಿಸಿರುವ ಜ್ಯೂ ಎನ್‌ಟಿಆರ್ ಇದೀಗ ಬಾಲಿವುಡ್‌ನಲ್ಲಿ ಮಿಂಚಲು ಸಹ ಸಿದ್ಧರಾಗುತ್ತಿದ್ದಾರೆ. ಬಿ ಟೌನ್‌ನ ಅಂದರೆ, ಬಾಲಿವುಡ್‌ನ 'ವಾರ್2' ಚಿತ್ರದಲ್ಲೂ ಜ್ಯೂ. ಎನ್‌ಟಿಆರ್ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕರ್ನಾಟಕದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಿನಿಮಾವೊಂದು ಪ್ರಾರಂಭವಾಗಿದೆ. ಈ ಸಿನಿಮಾದ ಪೂಜಾ ಕಾರ್ಯಕ್ರಮಗಳು ಸಹ ಈಚೆಗಷ್ಟೇ ನಡೆದಿತ್ತು.












Click it and Unblock the Notifications