ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡ್ಲುಪೇಟೆಯಲ್ಲಿ ರಾಜ್ಯದ ಮೊದಲ ಜಿಪಿ-ಒನ್ ಸೇವೆ ಆರಂಭ

By Vanitha
|
Google Oneindia Kannada News

ಗುಂಡ್ಲುಪೇಟೆ, ಅಕ್ಟೋಬರ್, 12 : ಗ್ರಾಮೀಣ ಜನರಿಗೆ ಒಂದೇ ಸೂರಿನಡಿಯಲ್ಲೇ ಎಲ್ಲಾ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಜಿಪಿ-ಒನ್ (ಗ್ರಾಮ ಪಂಚಾಯತಿ-ಒನ್) ಸೇವೆಯನ್ನು ಚಾಮರಾಜ ನಗರದ ಗುಂಡ್ಲುಪೇಟೆಯಲ್ಲಿ ಜಾರಿಗೆ ತರಲಾಗಿದೆ. ಇದು ರಾಜ್ಯದ ಮೊದಲ ಜಿಪಿ-ಒನ್ ಎಂಬ ಹೆಗ್ಗಳಿಕೆ ಪಡೆದಿದ್ದು, ಬೆಂಗಳೂರು-ಒನ್ ನಂತೆ ಕಾರ್ಯ ನಿರ್ವಹಿಸಲಿದೆ.

ಜಿಪಿ-ಒನ್ ಸೇವೆಯೂ ರಾಜ್ಯದ ಹಂಗಳ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಆರಂಭವಾಗಿದ್ದು, ಒಟ್ಟು 17 ಸೇವೆಗಳನ್ನು ನೀಡಲು ಮುಂದಾಗಿದೆ. 'ಗಾಂಧಿ ಗ್ರಾಮ ಪುರಸ್ಕಾರ' ಪಡೆದ ಕೆಲವೇ ದಿನಗಳಲ್ಲಿ ಈ ಹೊಸ ಸೇವೆ ಆರಂಭವಾಗಿರುವುದು ಸಂತಸದ ವಿಚಾರ ಎಂದು ಸಹಕಾರ ಸಚಿವ ಎಚ್.ಎಸ್ ಮಹದೇವ ಪ್ರಸಾದ್ ತಿಳಿಸಿದರು.['ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ 176 ಗ್ರಾಮ ಪಂಚಾಯತಿ ಆಯ್ಕೆ]

JP-1(Grama panchayath-1) service is open in gundlupet Chamarajanagar october 12

ಜಿಪಿ-ಒನ್ ಸೇವಾ ಕೇಂದ್ರವನ್ನು ಜಾರಿಗೆ ತಂದಿರುವುದು ವಿನೂತನವಾದ ಪ್ರಯತ್ನವಾಗಿದ್ದು, ಗ್ರಾಮೀಣ ಜನತೆಗೆ ಬಹಳ ಅನುಕೂಲವಾಗಲಿದೆ. ಈ ಸೇವೆಯನ್ನು ರಾಜ್ಯದ ಎಲ್ಲಾ ಗ್ರಾಮಪಂಚಾಯತಿಗಳಿಗೂ ವಿಸ್ತರಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ ಪಾಟೀಲ್ ರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.


ಏನೆಲ್ಲಾ ಸೇವೆಗಳು ಲಭ್ಯವಿದೆ?

ಆಸ್ತಿ-ತೆರಿಗೆ (ಮನೆ-ನಿವೇಶನ), ನೀರಿನ ತೆರಿಗೆ, ಜೀವ ವಿಮೆ, ವಾಹನ ವಿಮೆಗಳ ಕಂತು, ವಿದ್ಯುತ್, ದೂರವಾಣಿ ಬಿಲ್ ಪಾವತಿ, ಮೊಬೈಲ್ ಕರೆನ್ಸಿ, ಡಿಟಿಎಚ್ ಕರೆನ್ಸಿ ಖರೀದಿ, ಲೈಸೆನ್ಸ್ ಶುಲ್ಕ ಪಾವತಿ, ಆಧಾರ ತಿದ್ದುಪಡಿ ಕೋರಿಕೆ, ಚುನಾವಣಾ ಗುರುತಿನ ಪತ್ರಗಳ ನೋಂದಣಿ, ಬಸ್, ರೈಲು ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ, ಪಡಿತರ ಚೀಟಿ, ಹಣ ವರ್ಗಾವಣೆ, ವಿದ್ಯಾರ್ಥಿ ವೇತನ ಕೋರಿಕೆ, ಸಕಾಲ ಸೇವೆ, ಉದ್ಯೋಗ ಮಾಹಿತಿ ಮತ್ತು ಅರ್ಜಿ ನಮೂನೆಗಳ ಭರ್ತಿ ಮುಂತಾದ ಸೇವೆಗಳು ಗ್ರಾಮೀಣ ಜನತೆಗೆ ದೊರೆಯಲಿದೆ.

English summary
JP-1(Grama panchayath-1) service is open in gundlupet Chamarajanagar october 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X