ಗೌರಿ ಲಂಕೇಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರವಿ ಬೆಳಗೆರೆ
Recommended Video

"ಒಂದು ಸುಂದರವಾದ ಮಡಿಕೆಯನ್ನು ಕೋಲಿನಿಂದ ಒಡೆದು ಹಾಕಿದಂತೆ ಆಯಿತು" - ಪತ್ರಕರ್ತ ರವಿ ಬೆಳಗೆರೆ ಅವರು ಗೌರಿ ಲಂಕೇಶ್ ಹತ್ಯೆ ಬಗ್ಗೆ ನೀಡಿದ ಮೊದಲ ಪ್ರತಿಕ್ರಿಯೆ ಇದು. ಜೋಯಿಡಾದಲ್ಲಿದ್ದ ಅವರನ್ನು ಒನ್ಇಂಡಿಯಾ ಕನ್ನಡ ದೂರವಾಣಿ ಮೂಲಕ ಸಂಪರ್ಕಿಸಿದಾಗ ಗೌರಿ ಲಂಕೇಶ್ ಹೋರಾಟ, ಅವರ ಜತೆಗಿದ್ದ ಒಡನಾಟವನ್ನು ಹಂಚಿಕೊಂಡಿದ್ದಾರೆ.
"ನಾವು ಆಕೆಯನ್ನು ಹೆಂಗಸು ಅಂತಲೇ ಅಂದುಕೊಂಡಿರಲಿಲ್ಲ. ಯಾವ ಗಂಡಸಿಗೂ ಗೌರಿ ಕಡಿಮೆ ಇರಲಿಲ್ಲ. ಎಲ್ಲ ಹೋರಾಟಗಳ ಬಗ್ಗೆಯೂ ಆಕೆಗೊಂದು ಪ್ರೀತಿಯಿತ್ತು. ಕಾಳಜಿಯಿತ್ತು. ಯಾವುದಕ್ಕೂ ಆಕೆ ಹೆದರುತ್ತಿರಲಿಲ್ಲ. ಗೌರಿಗೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಕೂಡ ಉತ್ತಮ ಸಂಪರ್ಕಗಳಿದ್ದವು" ಎಂದರು.
"ವ್ಯವಸ್ಥೆ ಇವತ್ತು ಯಾವ ಕೆಟ್ಟ ಸ್ಥಿತಿಯಲ್ಲಿ ಇದೆ ಅಂದರೆ ಇದನ್ನು ಸರಿ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಗೌರಿ ಕೆಲವು ವಿಷಯಗಳಲ್ಲಿ ಮೂರ್ಖತನದ ನಿರ್ಧಾರ ತೆಗೆದುಕೊಂಡಳು. ಆದರೆ ಆಕೆ ನಿರ್ಭಯವಾದ ಹೆಣ್ಣುಮಗಳು. ಲಂಕೇಶ್ ಅವರು ಚಿಂತಕರಾದರೆ, ಅವರನ್ನೂ ಮೀರಿದ ಗೌರಿ ಹೋರಾಟಗಾರ್ತಿ ಆಗಿದ್ದಳು. ಯಾವ ಹೋರಾಟಕ್ಕಾದರೂ ಇಳಿಯುವಷ್ಟು ಧೈರ್ಯ ಆಕೆಗಿತ್ತು" ಎಂದರು.
ಅವರೂ ಹೇಳಿದ ಇನ್ನಷ್ಟು ವಿಚಾರಗಳನ್ನು ತಿಳಿಯಲು ಮುಂದಿನ ಸ್ಲೈಡ್ ಗಳನ್ನು ಓದಿ.

ಬೆದರಿಕೆಗೆ ಬಗ್ಗುತ್ತಿರಲಿಲ್ಲ
ಗೌರಿ ಲಂಕೇಶ್ ಬೆದರಿಕೆಗೆ ಬಗ್ಗುತ್ತಿರಲಿಲ್ಲ. ನಾವು ಭೇಟಿ ಆಗುತ್ತಿದ್ದದ್ದು ಅಪರೂಪದಲ್ಲಿ ಅಪರೂಪ. ಕೆಲವು ಕೋರ್ಟ್ ಗಳಲ್ಲಿ ನಮ್ಮ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಇಬ್ಬರವೂ ಕೇಸುಗಳಿರುತ್ತಿದ್ದವು. ಆ ರೀತಿಯಲ್ಲೇ ಹಿಂದೆ ತೀರ್ಥಹಳ್ಳಿಯಲ್ಲಿ ಒಮ್ಮೆ ಭೇಟಿ ಆಗಿದ್ದೆವು. ನಮ್ಮಿಬ್ಬರ ಮಧ್ಯೆ ಇಬ್ಬರು ಗಂಡಸರ ಮಧ್ಯೆ ಇರುವಂಥ ಸ್ನೇಹವಿತ್ತು.

ಗೌರಿಯ ಕ್ರಿಯೇಟಿವಿಟಿ ಹೋರಾಟದಿಂದ ಹುಟ್ಟಿದ್ದು
ಲಂಕೇಶರ ಕ್ರಿಯೇಟಿವಿಟಿ ಅವರ ಹಸಿವಿನಿಂದ ಹುಟ್ಟಿತ್ತು. ಆದರೆ ಗೌರಿಯ ಕ್ರಿಯೇಟಿವಿಟಿ ಹೋರಾಟಗಳಿಂದ ಹುಟ್ಟಿತ್ತು. ನಾವಿಷ್ಟು ಜನ ಇದ್ದೀವಿ. ನನಗೂ ನಕ್ಸಲ್ ಸಿದ್ಧಾಂತ-ಹೋರಾಟದ ಜತೆಗೆ ನಂಟಿತ್ತು, ನಂಟಿದೆ. ಆದರೆ ಅವರು ಗೌರಿಯನ್ನು ಭೇಟಿ ಮಾಡಿದರು. ಸಾಕೇತ್ ರಾಜನ್ ನಿಂದ ಇಲ್ಲಿವರೆಗಿನ ನಕ್ಸಲ್ ಹೋರಾಟಗಾರರ ಪರಿಚಯ ಗೌರಿಗಿತ್ತು.

ಇದು ಸ್ಯಾಫ್ರನ್ ಟೆರರಿಸಂ
ಈ ಕೊಲೆ ಕೇಸರಿ ಭಯೋತ್ಪಾದನೆಯ ಕೃತ್ಯ. ಬಿಜೆಪಿ- ಆರೆಸ್ಸೆಸ್ ಇದರಲ್ಲಿದೆ ಅಂತ ನಾನು ನಂಬಲ್ಲ. ಅದು ಬೇರೆಯದೇ ಗುಂಪಿದೆ. ಅದು ಇಂಥ ಹೇಯ ಕೃತ್ಯವನ್ನು ಮಾಡುತ್ತಿದೆ. ಗೌರಿಯನ್ನು ಕೊಲ್ಲೋದಿಕ್ಕೆ ಗನ್ ಬೇಕಿತ್ತಾ? ಆಕೆಯನ್ನು ಮಡಿಕೆ ಒಡೆದ ಹಾಕಿದ ಹಾಗೆ ಕೊಂದುಬಿಟ್ಟರು.

ಆ ಮದುವೆ ವಿಫಲವಾಯಿತು
ಗೌರಿಯನ್ನು ಚಿದಾನಂದ ಅಂತ ಮದುವೆಯಾಗಿದ್ದ. ಆತ ಕೂಡ ಪತ್ರಕರ್ತ. ಗೌರಿ ಪತ್ರಿಕೆ ಆರಂಭ ಮಾಡಿದ ದಿನಗಳಲ್ಲಿ ಆತ ಕೂಡ ಆರ್ಥಿಕ ಸಹಾಯ ಮಾಡಿದ್ದ. ಆದರೆ ಆ ಮದುವೆ ವಿಫಲವಾಯಿತು.

ನೀನು ಅಂದರೆ ನಿಮ್ಮಪ್ಪ ಅಂತೀವಿ
ಇತ್ತೀಚೆಗೆ ಪತ್ರಕರ್ತರ ಮೇಲೆ ಕೇಸರಿ, ಕೆಂಪು, ಹಳದಿ, ಬಿಳಿ ಎಲ್ಲ ಬಣ್ಣದವರೂ ಬಿದ್ದಿದ್ದಾರೆ. ನಾವು ಪತ್ರಕರ್ತರು ಕೂಡ ಬದಲಾಗಿದ್ದೀವಿ. ಯಾರಾದರೂ ನೀನು ಅಂತ ಬಂದರೆ, ನಿಮ್ಮಪ್ಪ ಅಂತೀವಿ. ಆಗ ಆ ಗುಂಪಿಗೆ ಸಿಟ್ಟು ಬರುತ್ತದೆ. ನಮಗೆ ಇರುವ ಆಯ್ಕೆ ಅಂದರೆ, ಅವರ ಜತೆ ಹೋರಾಡಬೇಕು. ಜೈಲು ಶಿಕ್ಷೆ ಅಂತಾದರೂ ಅದರ ವಿರುದ್ಧ ಹೋರಾಡಿ ದಕ್ಕಿಸಿಕೊಳ್ಳುವಂತಾಗಬೇಕು. ಇಲ್ಲದಿದ್ದರೆ ಸ್ನೇಹ ಮಾಡಿಕೊಂಡು ಚೆನ್ನಾಗಿರಬೇಕು.

ಅನಂತಮೂರ್ತಿ ಅವರನ್ನು ಹೀಗಳೆದರು
ಅನಂತಮೂರ್ತಿ ಅವರು, ನಾನು ಚಿಕ್ಕ ವಯಸ್ಸಿನಲ್ಲಿದ್ದಾಗ ದೇವರ ಕಲ್ಲು ಅನ್ನೋದರ ಮೇಲೆ ಉಚ್ಚೆ ಹೊಯ್ದಿದ್ದೆ ಅಂತ ಹೇಳಿದರು. ಅವರಿಗೆ ವಯಸ್ಸಾದ ಕಾಲದಲ್ಲಿ ಕಿಡ್ನಿ ಸಮಸ್ಯೆ ಆದರೆ, ನೀನು ಉಚ್ಚೆ ಹುಯ್ದಿದ್ದಕ್ಕೆ ಈ ರೀತಿ ರೋಗ ಅಂತ ಹುಯಿಲೆಬ್ಬಿಸಿದರು. ಯಾರಿಗೆ ಕಾಯಿಲೆ ಬರೋದಿಲ್ಲ? ಇವರೆಂಥ ಮಾತನಾಡ್ತಿದ್ದಾರೆ?

ನನ್ನ ಪ್ರಾಣ ಕೊಟ್ಟಾದರೂ ಅವಳನ್ನು ಉಳಿಸಿಕೊಳ್ತಿದ್ದೆ
ಇವರೇನೋ ದನದ ಹೋರಾಟ ಅಂತ ಮಾಡ್ತಾರೆ. ಅಲ್ಲ ಕಣ್ರೀ ದನ ತಿನ್ನೋನು ತಿಂತಾನೆ. ಅದರಲ್ಲಿ ನಿಮ್ಮದೇನು ಆಕ್ಷೇಪ? ಕೊನೆಯದಾಗಿ ನನಗೆ ಗೌರಿ ಬಗ್ಗೆ ಇದ್ದ ಪ್ರೀತಿ ಎಂಥದ್ದು ಎಂಬುದಕ್ಕೆ ಒಂದು ಮಾತು ಹೇಳ್ತೀನಿ: ನಾನಲ್ಲಿ ಇದ್ದಿದ್ದರೆ ನನ್ನ ಪ್ರಾಣ ಕೊಟ್ಟಾದರೂ ಅವಳನ್ನು ಉಳಿಸಿಕೊಳ್ಳುತ್ತಿದ್ದೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ?












Click it and Unblock the Notifications