ಗೌರಿ ಲಂಕೇಶ್ ಹತ್ಯೆ, ಮಂಗಳವಾರ ನಿಜಕ್ಕೂ ನಡೆದದ್ದೇನು?
ಬೆಂಗಳೂರು, ಸೆಪ್ಟೆಂಬರ್ 6: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದ್ದಾರೆ. ಅವರ ಸಾವಿನ ಅಂತಿಮ ಕ್ಷಣಗಳು ಮನೆ ಸುತ್ತ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.
ಮಂಗಳವಾರ ಗೃಹ ಇಲಾಖೆ ಹಿರಿಯ ಅಧಿಕಾರಿಗಳ ಜತೆಗಿನ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರಿ ಲಂಕೇಶ್ ಹತ್ಯೆಯ ಕೊನೆಯ ಕ್ಷಣಗಳ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಅವರು ನೀಡಿರುವ ಹೇಳಿಕೆ ಪ್ರಕಾರ, ಗೌರಿ ಲಂಕೇಶ್ ಅವರ ಮನೆಯ ಸುತ್ತ-ಮುತ್ತ ನಾಲ್ಕು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಇವುಗಳಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಗೌರಿ ಲಂಕೇಶ್ ಅವರು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಮಂಗಳವಾರ ರಾತ್ರಿ ಬಂದಾಗ, ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ 'ಬಿಂದು ಶೂನ್ಯ ವಲಯ' ( ಪಾಯಿಂಟ್ ಬ್ಲ್ಯಾಂಕ್ ರೇಂಜ್) ದಿಂದ ಗುಂಡಿನ ದಾಳಿ ನಡೆಸಿದ್ದಾನೆ.
ಈ ದೃಶ್ಯಗಳು ಮನೆಯ ಬಾಗಿಲ ಬಳಿ ಅಳವಡಿಸಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ತಮ್ಮ ದೇಹಕ್ಕೆ ಗುಂಡು ಬಿದ್ದ ನಂತವೂ ಗೌರಿ ಲಂಕೇಶ್ ಅವರು ಮನೆಯ ಬಾಗಿಲತ್ತ ನಾಲ್ಕೈದು ಹೆಜ್ಜೆ ಹಾಕಿದ್ದಾರೆ. ನಂತರ ಅಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಇದು ಆಕೆಯ ಅಂತಿಮ ಕ್ಷಣಗಳು. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವುದು ಒಬ್ಬ ಹಂತಕನೇ ? ಹಂತಕರ ಸಂಖ್ಯೆ ಎಷ್ಟು? ಹತ್ಯೆಗೆ ಮುನ್ನ ಆಗಮಿಸಿದ ವಾಹನ ಅಥವಾ ವಾಹನಗಳ ವಿವರ ತಿಳಿದು ಬಂದಿಲ್ಲ ಎಂದು ಸಿದ್ದರಾಮಯ್ಯ ಅವರು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.











Click it and Unblock the Notifications