'ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ'
ಬೆಂಗಳೂರು, ಮೇ 04: 'ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ' ಹೀಗೊಂದು ಧ್ಯೇಯವಾಕ್ಯದಡಿಯಲ್ಲಿ ಟ್ವಿಟ್ಟರ್‌ನಲ್ಲಿ ಅಭಿಯಾನವೊಂದು ಗಟ್ಟಿಯಾಗುತ್ತಿದೆ.
ಕೆಲವು ದಿನದ ಹಿಂದೆಯಷ್ಟೆ ತಮಿಳುನಾಡಿನಲ್ಲಿ ಹೀಗೊಂದು ಟ್ವಿಟ್ಟರ್ ಅಭಿಯಾನ ನಡೆದಿತ್ತು, ಯುಕವರು ರಸ್ತೆಗಿಳಿದು ಪ್ರತಿಭಟನೆಯನ್ನೂ ಮಾಡಿದ್ದರು, ಈಗ ಅದು ಕರ್ನಾಟಕಕ್ಕೂ ಕಾಲಿಟ್ಟಿದೆ, ಇಲ್ಲಿಯೂ ಸಹ ಹಕ್ಕೊತ್ತಾಯದ ಪ್ರತಿಭಟನೆಗಳು ನಡೆಯುತ್ತಿವೆ.

ತಮಮಿಳುನಾಡಿನಲ್ಲಿ ನಡೆದ ರೈಲ್ವೆ ನೇಮಕಾತಿಯಲ್ಲಿ 80% ಉದ್ಯೋಗಗಳು ಉತ್ತರ ಭಾರತದವರ ಪಾಲಾಗಿದ್ದು, ತಮಿಳರ ಕಣ್ಣು ಕೆಂಪಗಾಗಿಸಿತು, ತಮಿಳಿಗರು ಅಲ್ಲಿ ಎದುರಿಸಿದ ಸಮಸ್ಯೆ ಕರ್ನಾಟಕದಲ್ಲಿಯೂ ಇದೆಯಾದ್ದರಿಂದ ಇಲ್ಲಿ ಸಹ ಅಭಿಯಾನ ಪ್ರಾರಂಭವಾಗಿದೆ, ಪ್ರತಿಭಟನೆಯೂ ನಡೆಯುತ್ತಿದೆ.
ಕರ್ನಾಟಕ ರಣಧೀತ ಪಡೆ ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳು ಒಕ್ಕೂರಲಿನಿಂದ ಕನ್ನಡಗರಿಗೆ ಖಾಸಗಿ ವಲಯದಲ್ಲೂ ಮೀಸಲಾತಿಯ ಬಗ್ಗೆ ಹೋರಾಟ ಆರಂಭಿಸಿವೆ. ಈ ಹೊರಾಟ ಹೊಸದಲ್ಲದಿದ್ದರೂ ಸಹ ಈ ಬಾರಿ ಇದಕ್ಕೆ ಸಾಮಾಜಿಕ ಜಾಲತಾಣದ ಬಲ ಸಿಕ್ಕಿದೆ.
ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸುವವರು, ಅಭಿಯಾನದ ಬಗ್ಗೆ ಅಭಿಪ್ರಾಯವನ್ನು ದಾಖಲಿಸಬೇಕೆನ್ನುವವರು #KarnatakaJobsForKannadigas ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ.












Click it and Unblock the Notifications