ಜಿಂದಾಲ್ ವಿವಾದ : ಕರ್ನಾಟಕ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆಗಳು
ಬೆಂಗಳೂರು, ಜೂನ್ 09 : ಜಿಂದಾಲ್ ಕಂಪನಿಗೆ ಸರ್ಕಾರಿ ಜಮೀನು ಮಾರಾಟ ಮಾಡುವ ವಿಚಾರದ ಬಗ್ಗೆ ಕರ್ನಾಟಕದಲ್ಲಿ ಬಾರಿ ಚರ್ಚೆ ನಡೆಯುತ್ತಿದೆ. ಸರ್ಕಾರ ಮತ್ತು ಪ್ರತಿಪಕ್ಷ ನಡುವೆ ಈ ವಿಚಾರದಲ್ಲಿ ವಾಕ್ಸಮರ ನಡೆಯುತ್ತಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಸಚಿವರಿಗೆ ಪತ್ರವನ್ನು ಬರೆದಿದ್ದಾರೆ. ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಮತ್ತು ಕರೆಕುಪ್ಪ ಗ್ರಾಮಗಳಲ್ಲಿ 2,001 ಎಕರೆ ಹಾಗೂ ಸಂಡೂರು ತಾಲೂಕಿನ ಮುಸೇ ನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿ 1,666 ಎಕರೆ ಭೂಮಿ ಸೇರಿ 3,667 ಎಕರೆ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆಯಲ್ಲಿ ಕ್ರಯ ಪತ್ರ ಮಾಡಿಕೊಡಲು ಸರ್ಕಾರ ಮುಂದಾಗಿದೆ.
ಸರ್ಕಾರ ಪ್ರತಿಪಕ್ಷ ಮಾತ್ರವಲ್ಲ. ಕಾಂಗ್ರೆಸ್ ನಾಯಕರಾದ ಕೆ.ಜೆ.ಜಾರ್ಜ್, ಎಚ್.ಕೆ.ಪಾಟೀಲ್ ಅವರ ನಡುವೆ ಜಿಂದಾಲ್ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಇದು ಮೈತ್ರಿ ಸರ್ಕಾರಕ್ಕೆ ಮುಜಗರ ತಂದಿದೆ. ಸಿ.ಟಿ.ರವಿ ಕೇಳಿದ ಪ್ರಶ್ನೆಗಳೇನು? ಇಲ್ಲಿದೆ ನೋಡಿ.....

ಸಿ.ಟಿ.ರವಿ ಪ್ರಶ್ನೆಗಳು
* ಜಿಂದಾಲ್ ಕಂಪನಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇಲ್ ಡೀಲ್ ಮಾಡಿಕೊಡುವುದರಿಂದ ಕರ್ನಾಟಕಕ್ಕೆ ಆಗುವ ಲಾಭ ಏನು?
* ರಾಷ್ಟ್ರೀಯ ಹೆದ್ದಾರಿಗೆ ಅದೇ ತಾಲೂಕಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಖಾಸಗಿಯವರಿಗೆ ಎಕರೆಗೆ 30 ಲಕ್ಷದಿಂದ ಒಂದು ಕೋಟಿ ವರೆಗೂ ಮೀರಿ ಪರಿಹಾರ ಕೊಟ್ಟಿರುವಾಗ ಕೇವಲ ಎಕರೆಗೆ 1,2200 ರೂ. ಸೇಲ್ ಡೀಡ್ ಮಾಡಿಕೊಡುತ್ತಿರುವ ಉದ್ದೇಶವೇನು?
* ಜಿಂದಾಲ್ ಸ್ಟೀಲ್ ಕಂಪನಿ ಕರ್ನಾಟಕದಲ್ಲಿ ಪ್ರಾರಂಭಿಸುವಾಗ ಕರ್ನಾಟಕ ಸರ್ಕಾರಕ್ಕೂ ಜಿಂದಾಲ್ ಕಂಪನಿಗೂ ನಡೆದಿರುವ ವ್ಯವಹಾರಿಕ ಒಪ್ಫಂದವೇನು?

ಗುತ್ತಿಗೆ ಮೊತ್ತವೆಷ್ಟು?
* ಇದುವರೆಗೂ ಎಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ಲೀಸ್ ನೀಡಲಾಗಿದೆ. ಎಷ್ಟು ವರ್ಷಗಳ ಅವಧಿಗೆ ನೀಡಲಾಗಿರುತ್ತದೆ. ಅದರ ಮೊತ್ತ ಎಷ್ಟು?
* ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣವೆಷ್ಟು?. ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ.
* ಈ ಕಂಪನಿ ಪ್ರಾರಂಭಿಸಿದ ಮೇಲೆ ಸುತ್ತಮುತ್ತಲಿನ ಜನಜೀವನದ ಮೇಲೆ, ಆರೋಗ್ಯದ ಮೇಲೆ, ಪರಿಸರದ ಮೇಲೆ, ಆಗಿರುವ ಪರಿಣಾಮ ಏನು?. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಆಡಿಟ್ ಆಗಿದೆಯೇ?, ಪರಿಸರ ಇಲಾಖೆ ವರದಿ ಏನಿದೆ?

ಗುತ್ತಿಗೆ ಮೊತ್ತವೆಷ್ಟು?
* ಇದುವರೆಗೂ ಎಷ್ಟು ಭೂಮಿಯನ್ನು ಜಿಂದಾಲ್ ಕಂಪನಿಗೆ ಲೀಸ್ ನೀಡಲಾಗಿದೆ. ಎಷ್ಟು ವರ್ಷಗಳ ಅವಧಿಗೆ ನೀಡಲಾಗಿರುತ್ತದೆ. ಅದರ ಮೊತ್ತ ಎಷ್ಟು?
* ಜಿಂದಾಲ್ ಕಂಪನಿಗೆ ಕರ್ನಾಟಕ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣವೆಷ್ಟು?. ಆ ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ.
* ಈ ಕಂಪನಿ ಪ್ರಾರಂಭಿಸಿದ ಮೇಲೆ ಸುತ್ತಮುತ್ತಲಿನ ಜನಜೀವನದ ಮೇಲೆ, ಆರೋಗ್ಯದ ಮೇಲೆ, ಪರಿಸರದ ಮೇಲೆ, ಆಗಿರುವ ಪರಿಣಾಮ ಏನು?. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಆಡಿಟ್ ಆಗಿದೆಯೇ?, ಪರಿಸರ ಇಲಾಖೆ ವರದಿ ಏನಿದೆ?

ಎಷ್ಟು ಉದ್ಯೋಗ ಸೃಷ್ಟಿಯಾಗಿದೆ?
* ಜಿಂದಾಲ್ ಕಂಪನಿ ಈ ಸ್ಟೀಲ್ ಪ್ಲಾಂಟ್‌ನಿಂದ ಎಷ್ಟು ಉದ್ಯೋಗ ಸೃಷ್ಟಿ ಆಗುತ್ತದೆಂದು ತನ್ನ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಈಗ ಉದ್ಯೋಗ ಸೃಷ್ಟಿಯಾಗಿರುವುದು ಎಷ್ಟು?. ಆ ಉದ್ಯೋಗದಲ್ಲಿ ಕನ್ನಡಿಗರ ಪಾಲು ಎಷ್ಟು?, ಸ್ಥಳೀಯರಿಗೆ ಎಷ್ಟು ಉದ್ಯೋಗ ನೀಡಲಾಗಿದೆ.ಸ
* ಜಿಂದಾಲ್ ಕಂಪನಿ ಎಂಎಂಎಲ್‌ಗೆ ಬಾಕಿ ಉಳಿಸಿಕೊಂಡಿರುವ ಹಣ ಎಷ್ಟು?
* ಮಾನ್ಯ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗಡೆ ಅವರು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ವರದಿಯಲ್ಲಿ ಜಿಂದಾಲ್ ಕಂಪನಿಯ ಬಗ್ಗೆ ಇರುವ ಉಲ್ಲೇಖವೇನು?

ಜಿಂದಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ
* ಕೆಲವು ಐಎಎಸ್/ಐಪಿಎಸ್ ಅಧಿಕಾರಿ ಸೇವಾ ನಿವೃತ್ತಿ ಪಡೆದ ನಂತರ ಜಿಂದಾಲ್ ಕಂಪನಿಯಲ್ಲಿ ದೊಡ್ಡ ಮೊತ್ತದ ಸಂಬಳಕ್ಕೆ ಕೆಲಸ ಮಾಡಿರುವುದು, ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?. ಹಾಗಿದ್ದರೆ ಹಿಂದೆ ಕೆಲಸ ಮಾಡಿರುವ ಮತ್ತು ಹಾಲಿ ಕೆಲಸ ಮಾಡುತ್ತಿರುವ ಮಾಜಿ ಐಪಿಎಸ್/ಐಎಎಸ್ ಅಧಿಕಾರಿಗಳ ಮಾಹಿತಿ ಮತ್ತು ಅವರು ಸೇವೆಯಲ್ಲಿದ್ದಾಗ ಜಿಂದಾಲ್ ಕಂಪನಿಗೆ ಮಾಡಿರುವ ಸಹಾಯ ಬಹಿರಂಗ ಪಡಿಸಿ.
* ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ 10 ಎಕರೆ ಮೇಲ್ಪಟ್ಟ ಪ್ರದೇಶವನ್ನು ಯಾವುದೇ ಕೈಗಾರಿಕೆಗೆ ನೀಡುವಾಗ ಸೇಲ್ ಡೀಲ್ ಮಾಡದೇ ದೀರ್ಘಾವದಿ ಲೀಸ್/ಗುತ್ತಿಗೆ ನೀಡುವ ಮೂಲಕ ಸರ್ಕಾರ ಜಮೀನಿನ ಮೇಲೆ ನಿಯಂತ್ರಣ ಹೊಂದಬೇಕೆಂಬ ಸಂಪುಟ ನಿರ್ಣಯಕ್ಕೆ ವ್ಯತಿರಿಕ್ತವಾಗಿ ಭೂಮಿ ಪರಭಾರೆ ಮಾಡಲು ಹೊರಟಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವೇನು?
* ಒಮ್ಮೆ ಸೇಲ್ ಡೀಲ್ ಮಾಡಿದ ಬಳಿಕ ಸರ್ಕಾರ ಯಾವ ರೀತಿಯಲ್ಲಿ ಕಂಪನಿಯ ಮೇಲೆ ನಿಯಂತ್ರಣ ಮಾಡಲು ಸಾಧ್ಯವಿದೆ ಎಂದು ತಿಳಿಸಿ.
* ಜಿಂದಾಲ್ ಕಂಪನಿ ಮತ್ತು ಇತರೆ ಕಂಪನಿಗಳಿಗೆ 2001 ರಿಂದ 2009-10 ರವರೆಗೆ ಎಂಎಂಎಲ್ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಅದಿರು ಸರಬರಾಜು ಮಾಡಿರುವ ಬಗ್ಗೆ ಸಿಎಜಿ ನೀಡಿರುವ ವರದಿ ಏನು?












Click it and Unblock the Notifications