ಹುಷಾರ್... ಬೆಂಗಳೂರು, ಕೊಲ್ಕತ್ತಾ ಉಗ್ರರ ತಾಣ
ಬೆಂಗಳೂರು, ಫೆ. 13: ಕನ್ನಡಿಗರು ಬೆಚ್ಚಿಬೀಳುವ ಸುದ್ದಿ ಬಂದಿದೆ. ಏನೇ ಗೊತ್ತೇ? ಲೋಕ ಕಂಟಕವಾಗುತ್ತಿರುವ ಐಎಸ್ಐಎಸ್ ಪರವಾಗಿ ಉಗ್ರರ ನೇಮಿಸುವ ಜನ ಬೆಂಗಳೂರು ಹಾಗೂ ಕೊಲ್ಕತ್ತಾದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಷ್ಟೇ ಅಲ್ಲ, ಇವರೆಲ್ಲ ಈಗ ಇಂಟರ್ನೆಟ್‌ನಿಂದ ದೂರವುಳಿದು ಹಳೇ ಶೈಲಿಯಂತೆ ಮಾತಿನ ಮೂಲಕವೇ ಯುವಕರನ್ನು ಸೆಳೆಯುತ್ತಿದ್ದಾರೆ.
ಸುಮಾರು 40 ಉಗ್ರರು ದೇಶಾದ್ಯಂತ ಹರಡಿದ್ದಾರೆ. ಅವರ ಉದ್ದೇಶ ಐಎಸ್ಐಎಸ್ ಪರ ಅಫ್ಘಾನಿಸ್ತಾನ ಘಟಕವಾದ ಅಲ್-ಖೋರಾಸನ್ ಸಂಘಟನೆಗೆ ಉಗ್ರರನ್ನು ಪೂರೈಸುವುದು. ಹೆಚ್ಚಿನವರು ಹರಡಿರುವುದು ಬೆಂಗಳೂರು ಹಾಗೂ ಕೊಲ್ಕತ್ತಾದಲ್ಲಿ. [ಗಡೀಪಾರಾಗಿದ್ದವರ ಬಿಡುಗಡೆ]
ಬೆಂಗಳೂರು ಯಾವಾಗ ಐಟಿ ಹಬ್ ಆಯಿತೋ, ವಿದ್ಯಾವಂತ ಯುವಕರಿಗೆ ಬೇಡಿಕೆ ಬಂದಿತೋ ಅಂದೇ ಉಗ್ರರ ನೇಮಕಾತಿ ಮಾಡುವವರು ಇಲ್ಲಿಗೆ ಬಂದರು. ಬಾಂಗ್ಲಾದೇಶದಿಂದ ಬಂದವರು ಐಎಸ್ಐಎಸ್ ಪರ ಉಗ್ರರನ್ನು ನೇಮಿಸಲು ಕೊಲ್ಕತ್ತಾವನ್ನು ಆಯ್ದುಕೊಂಡರು.

ಇಂಟೆಲಿಜೆನ್ಸ್ ಬ್ಯೂರೊ ಪ್ರಕಾರ ಬೆಂಗಳೂರು ಹಾಗೂ ಕೊಲ್ಕೊತಾಗಳಲ್ಲಿ ಕನಿಷ್ಠ 25 ಉಗ್ರರು ಅಡಗಿದ್ದಾರೆ. ಉಳಿದವರು ಮುಂಬೈ ಹಾಗೂ ಹೈದರಾಬಾದ್‌ನಲ್ಲಿದ್ದಾರೆ. ಇವರೆಲ್ಲ ಯುವಕರನ್ನು ಮಾತಿನ ಮೂಲಕವೇ ಮರುಳು ಮಾಡಿ ಐಎಸ್ಐಎಸ್ ತತ್ವ-ಸಿದ್ಧಾಂತ ತುಂಬುತ್ತಿದ್ದಾರೆ. [ಒಬಾಮ ರುಂಡ ಚೆಂಡಾಡ್ತೇವೆ]
ಆದರೆ, ಐಎಸ್ಐಎಸ್ ಪರ ಉಗ್ರರಿಗೆ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಉಂಟಾದ ಜಾಗೃತಿಯಿಂದ ಅವರ ಪ್ರಯತ್ನಗಳು ಕುಂಠಿತಗೊಂಡಿತು. ಉಗ್ರರು ಅಲ್-ಖೋರಾಸನ್ ಪರ ಕೆಲಸ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಈ ಸಂಘಟನೆ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಆದ್ದರಿಂದ ಅವರ ಪ್ರಯತ್ನ ಕುಂಠಿತಗೊಂಡಿದೆ.
ಭಾರತೀಯ ಗುಪ್ತದಳ ನಡೆಸಿದ ಆಪರೇಶನ್ ಚಕ್ರವ್ಯೂಹ ಭಾರೀ ಯಶಸ್ಸು ಗಳಿಸಿದೆ. ಅವರು ಸುಳ್ಳು ಖಾತೆಗಳನ್ನು ತೆರೆದು ಶಂಕಿತರ ಮೇಲೆ ನಿರಂತರ ಕಣ್ಣಿಟ್ಟರು. [ಉಗ್ರರ ಬಂಧಿಸಲು ಚಕ್ರವ್ಯೂಹ]
ಯಾಸೀನ್ ಭಟ್ಕಳ್ ಬಂಧನದ ನಂತರ ಇಂಡಿಯನ್ ಮುಜಾಹಿದೀನ್ ಸಂಘಟನೆ ಶಕ್ತಿಗುಂದುತ್ತಿದೆ. ಐಎಂ ಕೂಡ ಐಎಸ್ಐಎಸ್‌ಗೆ ಉಗ್ರರನ್ನು ನೇಮಿಸಲು ಗಮನ ಕೇಂದ್ರೀಕರಿಸುತ್ತಿದೆ. ಅನ್ಸರ್-ಯು-ತವಹಿದ್ ಸಂಘಟನೆಯ ಮುಖ್ಯಸ್ಥ ಸುಲ್ತಾನ್ ಅಹ್ಮದ್ ಅರ್ಮರ್ ಮೂಲಕ ಈಗ ಹೆಚ್ಚು ನೈಮಕಾತಿ ನಡೆಯುತ್ತಿದೆ.
ಅಫ್ಘಾನಿಸ್ತಾನದಲ್ಲಿ ಯುದ್ಧ ನಡೆಯುತ್ತಿದ್ದಾಗ ಸಾಕಷ್ಟು ಸಂಖ್ಯೆಯಲ್ಲಿ ಉಗ್ರರನ್ನು ಐಎಂ ನೇಮಿಸಿತ್ತು. ಎರಡು ವರ್ಷಗಳ ಹಿಂದೆ ಅಹ್ಮದ್ ಭಟ್ಕಳ್ ಎಂಬುವನನ್ನು ಅರ್ಮರ್ ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ದಾನೆ. ಆದರೆ, ಭಟ್ಕಳ್ ಅಲ್ಲಿ ನಡೆದ ಯುದ್ಧದಲ್ಲಿ ಮೃತಪಟ್ಟ. ಈ ಎಲ್ಲ ಕಾರಣಗಳಿಂದ ಐಎಂ ಈಗ ಬಲ ಕಳೆದುಕೊಳ್ಳುತ್ತಿದೆ. [ನೇಮಕಾತಿಯ ಕೊಂಡಿ ಭಟ್ಕಳದ ಸುಲ್ತಾನ್]
ಪ್ರಸ್ತುತ ಹಲವು ರಾಜ್ಯಗಳಲ್ಲಿ ಬಂಧನಕ್ಕೊಳಗಾಗಿರುವ ಐಎಸ್ಐಎಸ್ ಪರ ಕಾರ್ಯಕರ್ತರ ಮೇಲೆ ಇನ್ನಷ್ಟು ಕಠಿಣ ಪ್ರಕರಣಗಳನ್ನು ದಾಖಲಿಸಬೇಕಾಗಿದೆ. ರಾ ಮಾಜಿ ಮುಖ್ಯಸ್ಥ ಸಿ.ಡಿ. ಸಹಾಯ್ ಪ್ರಕಾರ ಉಗ್ರರಿಗೆ ಶಿಕ್ಷೆ ವಿಧಿಸಿದರೆ ಉಳಿದವರು ಪಾಠ ಕಲಿಯುತ್ತಾರೆ.
ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕರ ಗುಂಪೊಂದು ಐಎಸ್ಐಎಸ್ ಟಿ ಶರ್ಟ್ ಧರಿಸಿತ್ತು. ಕಾಶ್ಮೀರದಲ್ಲಿ ಐಎಸ್ಐಎಸ್ ಧ್ವಜ ಹಾರಿತ್ತು. ಇಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications