ರಾಜ್ಯ ಸಚಿವ ಸಂಪುಟ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಅಮಿತ್ ಶಾ ಅವರಿಗೆ ಜೆಡಿಎಸ್ ಚಿಂತೆ: ಜೆಡಿಎಸ್ ಕಿಡಿ

ಬೆಂಗಳೂರು,ಜನವರಿ 4: ನೆಟ್ಟಗೆ ಆಡಳಿತ ನಡೆಸಲು ಬಾರದ ಅಯೋಗ್ಯ ಸಚಿವ ಸಂಪುಟ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, ಅಮಿತ್ ಶಾ ಅವರಿಗೆ ಜೆಡಿಎಸ್ ಚಿಂತೆ ಎಂದು ಜೆಡಿಎಸ್ ರಾಜ್ಯ ಘಟಕ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ತಮ್ಮ ತಟ್ಟೆಯಲ್ಲಿ ಬಿದ್ದ ನೊಣದ ಬಗ್ಗೆ ಚಿಂತಿಸಿದ್ದರೆ ಕನಿಷ್ಟಪಕ್ಷ ಜನರಿಗೆ ಉಪಯೋಗವಾಗುವ ನಾಲ್ಕು ಕೆಲಸಗಳನ್ನಾದರೂ ಮಾಡಬಹುದಿತ್ತು. ಅದು ಬಿಟ್ಟು ಮರಾಮೋಸ, ಹಸಿಸುಳ್ಳುಗಳಿಂದ ಜೆಡಿಎಸ್ ಕಟ್ಟಿಹಾಕಬಹುದು ಎಂಬ ಭ್ರಮೆಯಲ್ಲಿದ್ದರೆ ಅದಕ್ಕಿಂತ ನಗೆಪಾಟಲಿನ ಸಂಗತಿ ಇನ್ನೊಂದಿಲ್ಲ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

JDS Outraged On Union Home Minister Amit Shah

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೆ, ನಿಮ್ಮ ಸುಳ್ಳುಗಳ expiry ಮುಗಿದಿದೆ. ಬಿಜೆಪಿಯ ಸೋಲಿನ ಭಯದಿಂದ ಜೆಡಿಎಸ್ ಬಗ್ಗೆ 'ಅಣಿಮುತ್ತುಗಳನ್ನು' ಉದುರಿಸುವುದು ನಿಲ್ಲಿಸಿ. ಇಲ್ಲವಾದರೆ, ಜನರೇ ನಿಮಗೆ ತಕ್ಕಪಾಠ ಕಲಿಸಲಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಸಿಯುತ್ತಿರುವ ಬಿಜೆಪಿ ಪಕ್ಷವನ್ನು ಮೇಲೆತ್ತಲು, ಹಳೇ ಮೈಸೂರು ಭಾಗದಲ್ಲಿ ಹರಸಾಹಸ ಪಡುತ್ತಿರುವ ಅಮಿತ್ ಶಾ ಮತ್ತು ಬಿಜೆಪಿಯವರೆ, ಕನ್ನಡದ ಜನತೆ ನಿಮ್ಮ ಶವಪೆಟ್ಟಿಗೆಗೆ ಕೊನೆಯ ಮೂಳೆ ಹೊಡೆಯಲಿದ್ದಾರೆ. ನಿಮ್ಮ ನೌಟಂಕಿ 'ಸಾಹಸ'ಗಳಿಗೆ ಇತೀಶ್ರಿ ಹಾಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.

JDS Outraged On Union Home Minister Amit Shah

ಮೂರು ಬಿಟ್ಟವರು ಊರಿಗೆ ದೊಡ್ಡವರು ಎಂಬಂತೆ ಬಿಜೆಪಿಯ ಕಿನ್ನರಿ ಬಾರಿಸಲು ಮಂಡ್ಯಕ್ಕೆ ಬಂದಿದ್ದ ಅಮಿತ್ ಶಾ ಅವರೆ ಮಂಡ್ಯ ಜಿಲ್ಲೆಗೆ ನಿಮ್ಮ ಪಕ್ಷದ ಕೊಡುಗೆ ಏನು? ನಿಮ್ಮ ಮುಂದೆ ಥಕಥೈ ಕುಣಿಯುವುದ ಬಿಟ್ಟು ಬೇರೇನೂ ಬಾರದ ನಿಮ್ಮ ಸಚಿವ ಸಂಪುಟದ ಸಮೇತ ಬಹಿರಂಗ ಚರ್ಚೆಗೆ ಬನ್ನಿ ಮಂಡ್ಯಕ್ಕೆ ನಮ್ಮ ಕೊಡುಗೆಗಳ ಕುರಿತು ದಾಖಲೆ ಜೊತೆ ಉತ್ತರ ಕೊಡುತ್ತೇವೆ ಎಂದು ಜೆಡಿಎಸ್ ರಾಜ್ಯ ಘಟಕ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+