ಸರ್ಕಾರಿ ಶಾಲೆಗಳನ್ನೇ ಹಂತ ಹಂತವಾಗಿ ಮುಚ್ಚುವ ಹುನ್ನಾರವೆ? ಸರ್ಕಾರವನ್ನ ಪ್ರಶ್ನಿಸಿದ ಜೆಡಿಎಸ್
ಶಾಲಾ ಸಮವಸ್ತ್ರ ವಿತರಣೆ ವಿಷಯದಲ್ಲಿ ಸರ್ಕಾರಿ ಶಾಲಾ ಮಕ್ಕಳೆಡೆಗೆ ದಿವ್ಯ ನಿರ್ಲಕ್ಷ ತೋರಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಮೂರು ಬಿಟ್ಟಿದ್ದು, ನ್ಯಾಯಾಲಯದ ದಾರಿ ತಪ್ಪಿಸಲು ಹೋಗಿ ಮತ್ತೆ ಸಿಕ್ಕಿಬಿದ್
ಬೆಂಗಳೂರು,ಫೆಬ್ರವರಿ15: ಇತ್ತೀಚೆಗಷ್ಟೆ ಶಾಲಾ ಸಮವಸ್ತ್ರ ವಿತರಣೆ ವಿಷಯದಲ್ಲಿ ಸರ್ಕಾರಿ ಶಾಲಾ ಮಕ್ಕಳೆಡೆಗೆ ದಿವ್ಯ ನಿರ್ಲಕ್ಷ ತೋರಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್ ಆದೇಶವನ್ನು ಪಾಲಿಸದಷ್ಟು ಉದ್ದಟತನವೆ? ಅಥವಾ ಸರ್ಕಾರಿ ಶಾಲೆಗಳನ್ನೇ ಹಂತ ಹಂತವಾಗಿ ಮುಚ್ಚುವ ಹುನ್ನಾರವೆ? ಎಂದು ಜೆಡಿಎಸ್ ಪ್ರಶ್ನಿಸಿದರು.
ಈ ಕುರಿತು ಜೆಡಿಎಸ್ ರಾಜ್ಯ ಘಟಕ ಟ್ವೀಟ್ ಮಾಡಿದ್ದು, ನೊಂದವರ ನೋವ ನೋಯದವರೆತ್ತ ಬಲ್ಲರೋ? ಎಂಬ ಅಕ್ಕ ಮಹಾದೇವಿಯವರ ಸಾಲಿನಂತೆ, ಸಂಪೂರ್ಣ ಕುಸಿದು ಕೊಳೆತು ಹೋಗಿರುವ ಆಡಳಿತಕ್ಕೆ ಹಿಡಿದ ಕನ್ನಡಿ ಈ ಸುದ್ದಿ. ರಾಜ್ಯದ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವ ಬಗ್ಗೆ ಸರ್ಕಾರ, ಅಧಿಕಾರಿಗಳ ಕಳಪೆ ಕಾರ್ಯವೈಖರಿಗೆ ಹೈಕೋರ್ಟ್ ಮತ್ತೆ ಛೀಮಾರಿ ಹಾಕಿದೆ ಎಂದು ಟ್ವೀಟ್ ಮಾಡಿದೆ.
ಇತ್ತೀಚೆಗಷ್ಟೆ ಶಾಲಾ ಸಮವಸ್ತ್ರ ವಿತರಣೆ ವಿಷಯದಲ್ಲಿ ಸರ್ಕಾರಿ ಶಾಲಾ ಮಕ್ಕಳೆಡೆಗೆ ದಿವ್ಯ ನಿರ್ಲಕ್ಷ ತೋರಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸೂಕ್ತ ದಾಖಲೆ ಕೊಡಲು ಹೇಳಿತ್ತು. ರಾಜ್ಯ @BJP4Karnataka ಸರ್ಕಾರ ಮೂರು ಬಿಟ್ಟಿದ್ದು, ನ್ಯಾಯಾಲಯದ ದಾರಿ ತಪ್ಪಿಸಲು ಹೋಗಿ ಮತ್ತೆ ಸಿಕ್ಕಿಬಿದ್ದಿದೆ. 2/5
— Janata Dal Secular (@JanataDal_S) February 15, 2023
ಇತ್ತೀಚೆಗಷ್ಟೆ ಶಾಲಾ ಸಮವಸ್ತ್ರ ವಿತರಣೆ ವಿಷಯದಲ್ಲಿ ಸರ್ಕಾರಿ ಶಾಲಾ ಮಕ್ಕಳೆಡೆಗೆ ದಿವ್ಯ ನಿರ್ಲಕ್ಷ ತೋರಲಾಗಿದೆ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಸೂಕ್ತ ದಾಖಲೆ ಕೊಡಲು ಹೇಳಿತ್ತು. ರಾಜ್ಯ ಬಿಜೆಪಿ ಸರ್ಕಾರ ಮೂರು ಬಿಟ್ಟಿದ್ದು, ನ್ಯಾಯಾಲಯದ ದಾರಿ ತಪ್ಪಿಸಲು ಹೋಗಿ ಮತ್ತೆ ಸಿಕ್ಕಿಬಿದ್ದಿದೆ.

ಶಾಲಾ ಮಕ್ಕಳಿಗೆ ನೀಡಬೇಕಿರುವ ಸಮವಸ್ತ್ರ, ಶೂ ಮತ್ತು ಕಾಲುಚೀಲ ವಿತರಿಸಿರುವುದನ್ನು ಪುಷ್ಠೀಕರಿಸುವ ಯಾವ ದಾಖಲೆಯು ಇಲಾಖೆಯ ಅಧಿಕಾರಿಗಳು ನ್ಯಾಯಲಯಕ್ಕೆ ಸಲ್ಲಿಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರೆ, ಇಂತಹ ಕನಿಷ್ಠ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಎಂದು ಪ್ರಶ್ನಿಸಿದ್ದಾರೆ.
ಕೋರ್ಟ್ ಆದೇಶವನ್ನು ಪಾಲಿಸದಷ್ಟು ಉದ್ದಟತನವೆ? ಅಥವಾ ಸರ್ಕಾರಿ ಶಾಲೆಗಳನ್ನೇ ಹಂತ ಹಂತವಾಗಿ ಮುಚ್ಚುವ ಹುನ್ನಾರವೆ? ಬಡ, ಕಿರು ಮಧ್ಯಮ ವರ್ಗದ ಮಕ್ಕಳ ಹಕ್ಕಿನ ಕುರಿತು ಈ ಮಟ್ಟದ ಉದಾಸೀನ ಖಂಡನೀಯ. ತೃಣ ಮಾತ್ರದಷ್ಟಾದರೂ ಮಾನವೀಯತೆ ಇದ್ದರೆ, ಕೂಡಲೇ ಆಗಿರುವ ಪ್ರಮಾದ ಸರಿಪಡಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಹೇಳಿದೆ.

ನ್ಯಾಯಾಲಯದ ಆದೇಶ ಪಾಲಿಸದಿರುವ ಜತೆಗೆ ದಾಖಲೆ ಸಲ್ಲಿಕೆಯಲ್ಲೂ ಸುಳ್ಳು ಹೇಳುವ ಭಂಡತನಕ್ಕೆ ಬಿಜೆಪಿ ಸರ್ಕಾರ ಬಿದ್ದಿದೆ ಎಂಬುದು ನಾಚಿಕೆಗೇಡು. ಇಷ್ಟೊಂದು ಕೀವುಗಟ್ಟಿರುವ ಆಡಳಿತ ಕರ್ನಾಟಕದ ಇತಿಹಾಸದಲ್ಲೇ ಮೊದಲು. ಅಧಿಕಾರದ ಕೊನೆಯ ದಿನಗಳನ್ನು ಎಣಿಸುತ್ತಿರುವ ನಿಮಗೆ ಕನ್ನಡಿಗರು ಮರೆಯಲಾರದ ಪಾಠ ಕಲಿಸುವುದು ಖಂಡಿತ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.












Click it and Unblock the Notifications