ವಿಕಾಸ ಪರ್ವ: 128 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್
ಬೆಂಗಳೂರು, ಫೆಬ್ರವರಿ 17: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಜೆಡಿಎಸ್ ಪಕ್ಷವು ಇಂದು ಯಲಹಂಕದ ನಿಟ್ಟೆ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ 'ವಿಕಾಸ ಪರ್ವ'ವನ್ನು ಆಯೋಜಿಸಿತ್ತು. ಇದೇ ಕಾರ್ಯಕ್ರಮದಲ್ಲಿ 128 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.
ಬಿಎಸ್‌ಪಿ ಮತ್ತು ಎನ್‌ಸಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷವು ಮಾಯಾವತಿಯವರನ್ನು ಸಮಾವೇಶಕ್ಕೆ ಕರೆತಂದಿದ್ದು, ದಲಿತ ಮತಗಳನ್ನು ತನ್ನತ್ತ ಸೆಳೆದುಕೊಳ್ಳಲೂ ಸಹ ಈ ಸಮಾವೇಶವನ್ನು ಪರಿಣಾಮಕಾರಿ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.
ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಬೃಹತ್ ಮಟ್ಟದಲ್ಲಿ 'ವಿಕಾಸ ಪರ್ವ' ಸಮಾವೇಶಕ್ಕೆ ರಾಜ್ಯದೆಲ್ಲೆಡೆಯಿಂದ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದು, ಸಮಾವೇಶದಲ್ಲಿ ಸುಮಾರು 3 ಲಕ್ಷ ಜನ ಸೇರಿರುವ ಅಂದಾಜಿದೆ.

128 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್, ಅಭ್ಯರ್ಥಿಗಳಿಗೆ ಪ್ರಮಾಣ ಬೋಧಿಸಿದ ಎಚ್.ಡಿ.ದೇವೇಗೌಡ
ಬಹುಜನ ಪಕ್ಷಗಳ ಅಭ್ಯರ್ಥಿಗಳಿಗೆ ಜೆಡಿಎಸ್ ಪಕ್ಷದ ಕಾರ್ಯಕ್ರತರು ಸಹಾಯ ಮಾಡಿ ಎಂದು ಮನವಿ ಮಾಡಿದ ಕುಮಾರಸ್ವಾಮಿ
70 ದಿನಗಳಲ್ಲಿ ನಿಮ್ಮ ಕ್ಷೇತ್ರದ ಪ್ರತಿ ಮನೆಗೆ ಭೇಟಿ ಮಾಡಿ, ಅವರ ಕಷ್ಟ ಸುಖದಲ್ಲಿ ಭಾಗಿ ಆಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಕುಮಾರಸ್ವಾಮಿ. ಕಾರ್ಯಕರ್ತರು ಕರೆದಲ್ಲಿಗೆ ನಾನು ಬರುತ್ತೇನೆ ಎಂದ ಎಚ್‌ಡಿಕೆ
ನಮಗೆ ಗುಜರಾತ್ ಮಾದರಿ ಅಲ್ಲ, ಅಲ್ಲಿ ನಡೆದಂತ ಹಿಂಸೆ, ಮಹಿಳೆಯರ ಸಾವು ನಮಗೆ ಮಾದರಿ ಆಗುವುದು ಬೇಡ, ಇಡೀ ದೇಶ ನಮ್ಮ ರಾಜ್ಯದತ್ತ ತಿರುಗಿ ನೋಡುವ ಹಾಗೆ ಅಭಿವೃದ್ಧಿ ಮಾಡಬೇಕೆಂಬ ಆಸೆ ಇದೆ: ಎಚ್‌ಡಿಕೆ
ಜೆಡಿಎಸ್ ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು, ಪ್ರತಿ ಜಿಲ್ಲೆಯ ರೈತರನ್ನು ವಿಧಾನಸೌಧಕ್ಕೆ ಕರೆಸಿ ಸಭೆ ಮಾಡುತ್ತೇನೆ, ಅಷ್ಟೆ ಅಲ್ಲ ಕಾರ್ಮಿಕ ವರ್ಗ, ವಿದ್ಯಾರ್ಥಿಗಳು, ನಿರುದ್ಯೋಗಿಗಳ ಕಲ್ಯಾಣಕ್ಕೆ ಶ್ರಮಿಸುತ್ತೇನೆ: ಕುಮಾರಸ್ವಾಮಿ
ಕೇವಲ ರೈತರ ಅಭಿವೃದ್ಧಿ ಮಾತ್ರವನ್ನೇ ಕುಮಾರಸ್ವಾಮಿ ಮಾಡುತ್ತಾನೆ ಎಂದು ಕೊಳ್ಳಬೇಡಿ, ರಾಜ್ಯದ ಎಲ್ಲಾ ವರ್ಗದ ಜನರ ಅಭಿವೃದ್ಧಿ ನನ್ನ ಗುರಿ: ಕುಮಾರಸ್ವಾಮಿ
ಜಲಿಯನ್ ವಾಲಾಬಾಗ್ ಗಿಂತಲೂ ಕಡೆಯಾಗಿ ಮಹದಾಯಿ ಹೋರಾಟಗಾರರ ಮೇಲೆ ಕಾಂಗ್ರೆಸ್ ಸರ್ಕಾರ ಪೊಲೀಸರ ಕೈಲಿ ಲಾಠಿ ಬೀಸಿಸಿದರು: ಕುಮಾರಸ್ವಾಮಿ
ಸರ್ಕಾರಿ ನೌಕರರಿಗೆ 5ನೇ ವೇತನ ಆಯೋಗ ಜಾರಿ ಮಾಡಿದ್ದೆ, ಈಗ ಸಿಎಂ ಅವರು 6 ನೇ ವೇತನ ಆಯೋಗ ಜಾರಿಗೆ ವಿಳಂಬ ಮಾಡುತ್ತಿದ್ದಾರೆ, ಇಬ್ಬರಲ್ಲಿ ಯಾರು ಬೇಕು ಆಯ್ಕೆ ಮಾಡಿಕೊಳ್ಳಿ: ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರದಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ, ಅವರ ಕುಟುಂಬಕ್ಕೂ ರಕ್ಷಣೆ ಇಲ್ಲ: ಸಿದ್ದರಾಮಯ್ಯ
ರಾಜ್ಯ ಇನ್ನೂ ಹಸಿವು ಮುಕ್ತವಾಗಿಲ್ಲ, ಅಧಿಕಾರದ ಮದದಲ್ಲಿ ಸಿಎಂ ಅವರು ರಾಜ್ಯದ ಸಮಸ್ಯೆ ಮರೆತಿದ್ದೀರಿ: ಕುಮಾರಸ್ವಾಮಿ
ಜೆಡಿಎಸ್ ಅಧಿಕಾರಕ್ಕೆ ಬಂದರೆ ಎಲ್ಲಾ ನದಿಗಳ ನೀರು ಹಂಚಿಕೆ ವಿವಾದಕ್ಕೂ ಪರಿಹಾರ: ಕುಮಾರಸ್ವಾಮಿ
ನನ್ನ ಪಕ್ಷ ಉಳಿಸುವ ಜವಾಬ್ದಾರಿ ಇತ್ತು ಹಾಗಾಗಿ, ಬಿಜೆಪಿ ಪಕ್ಷದೊಂದಿಗೆ ನಾನು ಸರ್ಕಾರ ರಚಿಸಿದೆ: ಕುಮಾರಸ್ವಾಮಿ
ರಾಜ್ಯದ ಜನ ಎಲ್ಲಾ ಪಕ್ಷಗಳ ಆಡಳಿತವನ್ನೂ ನೋಡಿದ್ದೀರಿ, ಆದರೆ ಈ ಬಾರಿ ನನಗೆ ಅವಕಾಶ ಕೊಡಿ: ಕುಮಾರಸ್ವಾಮಿ
ಜೆಡಿಎಸ್ ಪಕ್ಷಕ್ಕೆ ಹತ್ತು ವರ್ಷದಿಂದ ಅಧಿಕಾರವಿಲ್ಲ, ಆದರೂ ಪಕ್ಷ ಉಳಿಯಲು ನಿಮ್ಮ ಪ್ರೀತಿಯೇ ಕಾರಣ, ನೀವು ನನಗೆ ಪ್ರೀತಿಯ ಅಭಿಷೇಕ ಮಾಡಿದ್ದೀರಿ: ಕುಮಾರಸ್ವಾಮಿ
'ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ' ಎಂದಿದ್ದ ಸಿಎಂ ಗೆ ಟಾಂಗ್ ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಏನು ದೇವೇಗೌಡರನ್ನು ಕೊಂಡಿದ್ದಾರೆಯೇ, ಅಥವಾ ದತ್ತು ತೆಗೆದುಕೊಂಡಿದ್ದಾರಾ: ಕುಮಾರಸ್ವಾಮಿ
ದೇವೇಗೌಡ, ಕುಮಾರಸ್ವಾಮಿ ಸೇರಿ ನಾಟಕ ಆಡಿದರು ಎಂದು ಆಗ ಕೆಲವರು ಮಾತನಾಡಿದರು, ಆದರೆ ಅದೆಲ್ಲಾ ಸುಳ್ಳು, ರಾಜಕೀಯ ಪ್ರಲೋಭನೆಗೆ ಒಳಗಾಗಿ ನಾನು ಮುಖ್ಯಮಂತ್ರಿ ಆದೆ, ನನ್ನ ತಂದೆಯ ಮಾತಿನಿಂದಲ್ಲ: ಕುಮಾರಸ್ವಾಮಿ
ನಾನು ಮುಖ್ಯಮಂತ್ರಿ ಆಗಲು ಹೊರಟ ದಿನ ನನ್ನ ತಂದೆ ದೇವೇಗೌಡ ಅವರು ನನ್ನ ನಿರ್ಧಾರವನ್ನು ತಿಳಿದು ಮೂರ್ಛೆ ತಪ್ಪಿ ಬಿದ್ದುಬಿಟ್ಟರು, ಅವರನ್ನು ನನ್ನ ಭಾವ ಮಂಜುನಾಥ ಆಸ್ಪತ್ರೆಗೆ ಸೇರಿಸಿದ್ದರು: ಕುಮಾರಸ್ವಾಮಿ
'ರಾಜಕೀಯ ಮೇಲಾಟದಲ್ಲಿ ನಾನು ಮುಖ್ಯಮಂತ್ರಿ ಆಗಿ ಬಿಟ್ಟೆ, ಅಂದು ನನ್ನ ತಂದೆಗೆ ನಾನು ನೋವನ್ನು ಕೊಟ್ಟೆ' ಎಂದು ಭಾವುಕರಾದ ಕುಮಾರಸ್ವಾಮಿ
ನನ್ನ ಮುಖ್ಯಮಂತ್ರಿ ಮಾಡಬೇಕಿರುವುದು ನನಗಾಗಿ ಅಲ್ಲ, ಬಡ ಕುಟುಂಬಕ್ಕಾಗಿ ನಾನು ಜೀವನ ಮುಡಿಪಿಟ್ಟಿದ್ದೇನೆ, ಅವರಿಗಾಗಿ ನನ್ನನ್ನು ಮುಖ್ಯಮಂತ್ರಿ ಮಾಡಿ: ಕುಮಾರಸ್ವಾಮಿ
ನನ್ನ ಹೃದಯ ಶಸ್ತ್ರಚಿಕಿತ್ಸೆ ನಡೆದಾಗ ಎಲ್ಲಾ ಧರ್ಮದ ಜನರು ನನಗಾಗಿ ಪ್ರಾರ್ಥಿಸಿದ್ದಾರೆ, ಅವರೆಲ್ಲರಿಗೂ ನಾನು ಋಣಿ: ಕುಮಾರಸ್ವಾಮಿ
ನಾನು ಎರಡನೇ ಜನ್ಮ ಎತ್ತಿದ್ದೇನೆ, ಎಲ್ಲರಿಗೂ ಒಂದು ಜನ್ಮ ಆದರೆ ನನಗೆ ಎರಡು ಜನ್ಮ, ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆದರೂ ನಿಮ್ಮ ಮುಂದಿದ್ದೇನೆ, ನಾನು ಬದುಕಿ ಬಂದದಕ್ಕೆ ನಿಮ್ಮ ಪ್ರೀತಿ, ಅಭಿಮಾನಗಳೇ ಕಾರಣ: ಎಚ್‌ಡಿ ಕುಮಾರಸ್ವಾಮಿ
ಮೊದಲ ಬಾರಿಗೆ ಬಿಎಸ್‌ಪಿಯು ಮತ್ತೊಂದು ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡಿದೆ, ಮಾಯಾವತಿ ಅವರಿಗೆ ಹೃದಯಪೂರ್ವಕ ಅಭಿನಂದನೆ: ಎಚ್‌ಡಿಕೆ
ಕಾರ್ಯಕ್ರಮಕ್ಕೆ ಬಹುದೊಡ್ಡ ಸಂಖ್ಯೆಯಲ್ಲಿ ಆಗಮಿಸಿರುವ ಕಾರ್ಯಕ್ರರ್ತರಿಗೆ ಧನ್ಯವಾದ ಅರ್ಪಿಸಿದ ಕುಮಾರಸ್ವಾಮಿ
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾಷಣ ಆರಂಭ, ಭಾಷಣಕ್ಕೆ ಮುಂಚೆಯೇ ಭಾವುಕರಾದಂತೆ ಕಂಡು ಬರುತ್ತಿರುವ ಕುಮಾರಸ್ವಾಮಿ
ವಿಕಾಸ ಪರ್ವ ಒಂದು ಐತಿಹಾಸಿಕ ಕಾರ್ಯಕ್ರಮ, ಇಂತಹಾ ಕಾರ್ಯಕ್ರಮ ಹಿಂದೆ ಆಗಿರಲೇ ಇಲ್ಲ ಎಂದ ದೇವೇಗೌಡ ಅವರು ಕಾರ್ಯಕ್ರಮ ದುಡಿದವರಿಗೆ ಹಾಗೂ ಕಾರ್ಯಕ್ರಮಕ್ಕೆ ಬಂದವರಿಗೆಲ್ಲಾ ಕೈ ಮುಗಿದು ಮಾತುಮುಗಿಸಿರು
ಇಡೀ ರಾಜ್ಯದಲ್ಲಿ ಕುಮಾರಸ್ವಾಮಿ ಅಭಿಮಾನಿಗಳಿದ್ದಾರೆ, ಅವರ ಆ ಶಕ್ತಿಯನ್ನು ಕಾರ್ಯಕರ್ತರು ಬಳಸಿಕೊಳ್ಳಬೇಕು, ಎಲ್ಲಾ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಚಿತ್ರ ಇರಲೇಬೇಕು, ನನ್ನ ಫೊಟೊ ಇರದಿದ್ದರೂ ಸರಿ, ಕುಮಾರಸ್ವಾಮಿ ಪೊಟೊ ಇರಲೇಬೇಕು: ದೇವೇಗೌಡ
ಚುನಾವಣೆ ಮುಗಿಯುವವರೆಗೆ ವಿಶ್ರಮಿಸುವುದಿಲ್ಲ, ರಾಜ್ಯದ ಸಂಪೂರ್ಣ ಪ್ರವಾಸ ಮಾಡುತ್ತೇನೆ: ದೇವೇಗೌಡ
ಜೆಡಿಎಸ್ ಪಕ್ಷವನ್ನು ನಾಶ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದ ದೇವೇಗೌಡ, ಕಾರ್ಯಕರ್ತರಿಂದ ಭಾರಿ ಕರತಾಡನ
ಈದ್ಗಾ ಮೈದಾನದ ಗಲಾಟೆ ಬಗೆಹರಿಸಿದೆ, ಈಗ ಎಲ್ಲಾದರೂ ಆ ವಿಷಯ ಮತ್ತೆ ಪ್ರಸ್ತಾಪ ಆಗುತ್ತಿದೆಯಾ, ಆದರೆ ಈ ರಾಷ್ಟ್ರೀಯ ಪಕ್ಷಗಳು ಕರಾವಳಿಯಲ್ಲಿ ಬೆಂಕಿ ಹಚ್ಚಿವೆ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಳ್ಳುತ್ತಿವೆ: ದೇವೇಗೌಡ
READ MORE
More From
-
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್












Click it and Unblock the Notifications