BPL Card: ಬಿಪಿಎಲ್ ಎಂದರೆ ದಟ್ಟ ದರದ್ರರು: ವಿವಾದಾತ್ಮ ಪದ ಬಳಸಿದ ಜೆಡಿಎಸ್ ಶಾಸಕ
ಕೋಲಾರ, ನವೆಂಬರ್ 19: ಏಕಾಏಕಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದಾಗುತ್ತಿರುವ ಕುರಿತು ರಾಜ್ಯ ರಾಜಕೀಯದಲ್ಲಿ ಈ ಕುರಿತು ಪರ ವಿರೋಧ ಚರ್ಚೆಯಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಶೀಘ್ರವೇ 14 ಲಕ್ಷ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಉದ್ದೇಶಿಸಲಾಗಿದೆ. ಇದುವರೆಗೆ 3.63 ಲಕ್ಷ ಕಾರ್ಡ್ ರದ್ದಾಗಿದೆ ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ರೆ, ಇತ್ತ ಬಿಪಿಎಲ್ ಎಂದರೆ ದಟ್ಟ ದರದ್ರರು ಎಂದು ವಿವಾದಾತ್ಮ ಹೇಳಿಕೆಯನ್ನ ಗೋವಿಂದರಾಜು ಅವರು ಮಾತ್ನಾಡಿದ್ದಾರೆ.
ಈ ಕುರಿತು ಕೋಲಾರದಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರು ಮಾತನಾಡಿ, ಬಿಲೋ ಪಾವರ್ಟಿ ಲೈನ್ ಎಂದರೆ ದಟ್ಟ ದರಿದ್ರರು, ಪಾವರ್ಟಿ ಲೈನ್ ಗಿಂತ ಕೆಳಗಿರುವವರು ಅಂತಾ ವಿವಾದಿತ ಪದ ಬಳಕೆ ಮಾಡಿದ್ದಾರೆ. ದಟ್ಟ ದರಿದ್ರರು ಎಂದರೆ ಕಷ್ಟದಲ್ಲಿರುವವರು, ನಾವು ಒಂದು ಕಾಲದಲ್ಲಿ ದರಿದ್ರರೆ ಎನ್ನುವ ಮೂಲಕ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ 4 ಕೋಟಿ 80 ಲಕ್ಷ ಜನ ಬಿಲೋ ಪಾವರ್ಟಿ ಲೈನ್ ಅವರು ಇದ್ದಾರೆ ಅಂದರೆ ಅರ್ಥವೆ ಇಲ್ಲ, ಅಂದರೆ ಸರ್ಕಾರದ ಯೋಜನೆ ದುರುಪಯೋಗವಾಗುತ್ತಿದೆ ಎಂದರ್ಥ. ಈ ಹಿಂದೆ ಉಮೇಶ್ ಕತ್ತಿಯವರೆ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ರು, ಆಗ ಇದು ರಾಜಕೀಯ ವಿಚಾರವಾಗಿತ್ತು, ಇವತ್ತು ಕೂಲಿ ಮಾಡುವವನು ಸಹ ಒಂದಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ, ಅವರು ಸಹ ಸಮೃದ್ದಿಯಾದ ಜೀವನ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಅವರು ತಿಳಿಸಿದ್ದಾರೆ.
ಕೋಲಾರದಲ್ಲಿ ಭಾನುವಾರ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದ್ದು ಬೇರೆ ಅರ್ಥದಲ್ಲಿ. ರಾಜ್ಯದ ಜನರಿಗೆ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ, ಬಿಪಿಎಲ್ ನಿಂದ ಎಪಿಎಲ್ ಮಾಡಬೇಕಾದ್ರೆ ಸರಿಯಾದ ನೀತಿ ನಿಯಮಗಳನ್ನ ಪಾಲಿಸುವಂತೆ ಹೇಳಿದ್ದಾರೆ ಹಾಗಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ನಿಲುವೆ ಬೇರೆ ನಾನು ರಾಜಕೀಯ ಮಾತನಾಡಲ್ಲ ಎಂದು ಹೇಳಿದರು.
ಇನ್ನೂ ರಾಜ್ಯದ ಚನ್ನಪಟ್ಟಣ ಉಪ ಚುನಾವಣೆ ಕುರಿತು ಮಾತನಾಡಿದ ಗೋವಿಂದರಾಜು ಅವರು, ಒಟ್ಟಿಗೆ ಕೆಲಸ ಮಾಡಿದ್ದೇವೆ, ನಿಖಿಲ್ ಕುಮಾರಸ್ವಾಮಿ ಗೆಲ್ಲುತ್ತಾರೆ, ನಿಖಿಲ್ ಕುಮಾರಸ್ವಾಮಿ ಪಕ್ಷದ ಮುಂದಿನ ನಾಯಕ ರೇವಣ್ಣ ಕುಟುಂಬಕ್ಕೆ ಹಿನ್ನೆಡೆ ಇರೋದ್ರಿಂದ, ನಿಖಿಲ್ ಕುಮಾರಸ್ವಾಮಿ ರಾಜ್ಯಾಧ್ಯಕ್ಷರು ಆಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications