ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಜೆಡಿಎಸ್ ಶಾಸಕರ ಪಟ್ಟಿ

By Gururaj
|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಸಂಪುಟ ಸೇರಲಿರುವ ಜೆಡಿಎಸ್ ಶಾಸಕರ ಪಟ್ಟಿ ಇಲ್ಲಿದೆ | Oneindia Kannada

ಬೆಂಗಳೂರು, ಮೇ 24 : ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೆಡಿಎಸ್ ಪಕ್ಷದಿಂದ ಯಾರು ಸಂಪುಟ ಸೇರಲಿದ್ದಾರೆ? ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಮಾಡಲಿದ್ದಾರೆ. ನಂತರ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯಲಿದೆ. ಕಾಂಗ್ರೆಸ್‌ನ 22, ಜೆಡಿಎಸ್‌ನ 12 ಶಾಸಕರು ಸಂಪುಟ ಸೇರಲಿದ್ದಾರೆ.

ಜಿ.ಟಿ.ಡಿಗೆ ಒಲಿಯಲಿದೆಯೇ ಮೈಸೂರು ಉಸ್ತುವಾರಿ ಸಚಿವ ಸ್ಥಾನ?ಜಿ.ಟಿ.ಡಿಗೆ ಒಲಿಯಲಿದೆಯೇ ಮೈಸೂರು ಉಸ್ತುವಾರಿ ಸಚಿವ ಸ್ಥಾನ?

ಕಾಂಗ್ರೆಸ್ ಮೇ 26ರಂದು ದೆಹಲಿಗೆ ಬರುವಂತೆ ಪಕ್ಷದ ನಾಯಕರಿಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಕಾಂಗ್ರೆಸ್‌ನಿಂದ ಕುಮಾರಸ್ವಾಮಿ ಸಂಪುಟವನ್ನು ಯಾರು ಸೇರಬೇಕು? ಎಂಬುದು ತೀರ್ಮಾನವಾಗಲಿದೆ.

ಕಾಂಗ್ರೆಸ್ - ಜೆಡಿಎಸ್ ಅಧಿಕಾರ ಹಂಚಿಕೆ ಅಂತಿಮ, 'ಕೈ'ಗೆ ಸಿಂಹ ಪಾಲುಕಾಂಗ್ರೆಸ್ - ಜೆಡಿಎಸ್ ಅಧಿಕಾರ ಹಂಚಿಕೆ ಅಂತಿಮ, 'ಕೈ'ಗೆ ಸಿಂಹ ಪಾಲು

ಜೆಡಿಎಸ್‌ನಿಂದ ಯಾರು ಸಂಪುಟ ಸೇರಬೇಕು? ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಪಟ್ಟಿ ಸಿದ್ದಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಈ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಪಟ್ಟಿಯಲ್ಲಿ ಯಾವ ಶಾಸಕರ ಹೆಸರಿದೆ? ಚಿತ್ರಗಳಲ್ಲಿ ನೋಡಿ...

ವಿಶ್ವಾಸಮತ ಗೆದ್ದ ನಂತರ ಸಚಿವ ಸಂಪುಟ ರಚನೆ: ಪರಮೇಶ್ವರ್‌ವಿಶ್ವಾಸಮತ ಗೆದ್ದ ನಂತರ ಸಚಿವ ಸಂಪುಟ ರಚನೆ: ಪರಮೇಶ್ವರ್‌

ಸಂಪುಟ ಸೇರಲಿದ್ದಾರೆ ರೇವಣ್ಣ

ಸಂಪುಟ ಸೇರಲಿದ್ದಾರೆ ರೇವಣ್ಣ

ಎಚ್.ಡಿ.ಕುಮಾರಸ್ವಾಮಿ ಸಹೋದರ ಎಚ್.ಡಿ.ರೇವಣ್ಣ ಸಚಿವ ಸಂಪುಟ ಸೇರಲಿದ್ದಾರೆ. ಈಗಾಗಲೇ ಇಂಧನ, ಲೋಕೋಪಯೋಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗಿದೆ. 2018ರ ಚುನಾವಣೆಯಲ್ಲಿ 108541 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ.

ವೆಂಕಟರಾವ್ ನಾಡಗೌಡ

ವೆಂಕಟರಾವ್ ನಾಡಗೌಡ

ರಾಯಚೂರು ಜಿಲ್ಲೆಯ ಸಿಂಧನೂರು ಕ್ಷೇತ್ರದ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಅವರು ಸಂಪುಟ ಸೇರುವ ಸಾಧ್ಯತೆ ಇದೆ. ವೆಂಕಟರಾವ್ ನಾಡಗೌಡ ಅವರು ಎಚ್.ಡಿ.ದೇವೇಗೌಡರ ಆಪ್ತರಾಗಿದ್ದಾರೆ. 2018ರ ಚುನಾವಣೆಯಲ್ಲಿ 71,514 ಮತಗಳನ್ನು ಪಡೆದು ಅವರು ಜಯಗಳಿಸಿದ್ದಾರೆ.

ಜಿ.ಟಿ.ದೇವೇಗೌಡ

ಜಿ.ಟಿ.ದೇವೇಗೌಡ

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 30 ಸಾವಿರ ಮತಗಳ ಅಂತರದಿಂದ ಸೋಲಿಸಿದ ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. 2018ರ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಕ್ಷೇತ್ರ ಚಾಮುಂಡೇಶ್ವರಿ. ಸಿದ್ದರಾಮಯ್ಯ ಅವರನ್ನು ಸೋಲಿಸಿದ ಜಿ.ಟಿ.ದೇವೇಗೌಡರಿಗೆ ಮೈಸೂರು ಜಿಲ್ಲಾ ಉಸ್ತುವಾರಿಯೂ ಸಿಗುವ ಸಾಧ್ಯತೆ ಇದೆ.

ಸಿ.ಎಸ್.ಪುಟ್ಟರಾಜು/ಡಿ.ಸಿ.ತಮ್ಮಣ್ಣ

ಸಿ.ಎಸ್.ಪುಟ್ಟರಾಜು/ಡಿ.ಸಿ.ತಮ್ಮಣ್ಣ

ಮಂಡ್ಯ ಜಿಲ್ಲೆಯ ಎಲ್ಲಾ 7ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರಲ್ಲಿ ಯಾರು ಸಂಪುಟ ಸೇರಲಿದ್ದಾರೆ? ಎಂದು ಕಾದು ನೋಡಬೇಕು.

ಡಿ.ಸಿ.ತಮ್ಮಣ್ಣ ಅವರು ಎಚ್.ಡಿ.ದೇವೇಗೌಡರ ಬೀಗರು. ಸಿ.ಎಸ್.ಪುಟ್ಟರಾಜು ಅವರು ಮಂಡ್ಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ. ಯಾರಿಗೆ ಸಚಿವ ಸ್ಥಾನ ಎಂಬುದು ಕುತೂಹಲ ಮೂಡಿಸಿದೆ.

ಎ.ಟಿ.ರಾಮಸ್ವಾಮಿ

ಎ.ಟಿ.ರಾಮಸ್ವಾಮಿ

ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರು ಕುಮಾರಸ್ವಾಮಿ ಅವರ ಸಂಪುಟ ಸೇರುವ ಸಾಧ್ಯತೆ ಇದೆ. ಕುಮಾರಸ್ವಾಮಿ ಮತ್ತು ಎಚ್.ಡಿ.ದೇವೇಗೌಡರಿಗೆ ಎ.ಟಿ.ರಾಮಸ್ವಾಮಿ ಅವರು ಆಪ್ತರು. 2018ರ ಚುನಾವಣೆಯಲ್ಲಿ 85,064 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಎಚ್.ವಿಶ್ವನಾಥ್

ಎಚ್.ವಿಶ್ವನಾಥ್

ಮಾಜಿ ಸಚಿವ, ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಪಟ್ಟಿಯಲ್ಲಿದ್ದಾರೆ. ಹುಣಸೂರು ಕ್ಷೇತ್ರದಿಂದ ಅವರು ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಮೈಸೂರು ಭಾಗದ ಎಷ್ಟು ಶಾಸಕರಿಗೆ ಜೆಡಿಎಸ್ ಸಂಪುಟದಲ್ಲಿ ಸ್ಥಾನ ನೀಡಲಿದೆ? ಎಂದು ಕಾದು ನೋಡಬೇಕಾಗಿದೆ.

ಬಂಡೆಪ್ಪ ಕಾಶೆಂಪೂರ

ಬಂಡೆಪ್ಪ ಕಾಶೆಂಪೂರ

ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತರಾದ ಬಂಡೆಪ್ಪ ಕಾಶೆಂಪೂರ ಅವರು ಸಂಪುಟ ಸೇರುವ ಪಟ್ಟಿಯಲ್ಲಿದ್ದಾರೆ. ಬೀದರ್ ದಕ್ಷಿಣ ಕ್ಷೇತ್ರದಿಂದ ಅವರು ಈ ಬಾರಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಬಸವರಾಜ ಹೊರಟ್ಟಿ

ಬಸವರಾಜ ಹೊರಟ್ಟಿ

ಜೆಡಿಎಸ್ ಪಕ್ಷದ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರಲಿದ್ದಾರೆ. ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ ಇಬ್ಬರಿಗೂ ಹೊರಟ್ಟಿ ಆಪ್ತರಾಗಿದ್ದಾರೆ. ದೇವೇಗೌಡ ಜೊತೆಗೆ ರಾಜಕೀಯ ಮಾಡಿಕೊಂಡು ಬಂದವರು ಬಸವರಾಜ ಹೊರಟ್ಟಿ.

ಸಾ.ರಾ.ಮಹೇಶ್ ಸಂಪುಟ ಸೇರುವ ಸಾಧ್ಯತೆ?

ಸಾ.ರಾ.ಮಹೇಶ್ ಸಂಪುಟ ಸೇರುವ ಸಾಧ್ಯತೆ?

ಕೆ.ಆರ್.ನಗರ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್ ಅವರು ಸಂಪುಟ ಸೇರುವ ಸಾಧ್ಯತೆ ಇದೆ. ಮೈಸೂರು ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ನೀಡಲಿದ್ದಾರೆ? ಎಂಬುದು ಕುತೂಹಲದ ಪ್ರಶ್ನೆಯಾಗಿದೆ. 2018ರ ಚುನಾವಣೆಯಲ್ಲಿ ಸಾ.ರಾ.ಮಹೇಶ್ ಅವರು 85011 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಬಿ.ಎಂ.ಫಾರೂಕ್

ಬಿ.ಎಂ.ಫಾರೂಕ್

ಬಿ.ಎಂ.ಫಾರೂಕ್ ಅವರು ಸಹ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಸಾಧ್ಯತೆ ಇದೆ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ನಿಯೋಜಿತರಾದ ಬಳಿಕ ಅವರ ಸಂಚಾರದ ಸಂಪೂರ್ಣ ಜವಾಬ್ದಾರಿಯನ್ನು ಫಾರೂಕ್ ತೆಗೆದುಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಕೋಟಾದಡಿ ಅವರು ಸಚಿವರಾಗಬಹುದು.

ಆದರೆ, ಬಿ.ಎಂ.ಫಾರೂಕ್ ವಿಧಾನಸಭೆ, ವಿಧಾನಪರಿಷತ್ ಸದಸ್ಯರಲ್ಲ. ಸಚಿವರಾದ 6 ತಿಂಗಳಿನಲ್ಲಿ ಅವರಯ ಯಾವುದಾದರೂ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾಗುತ್ತದೆ.

English summary
JD(S) supremo H.D.Deve Gowda prepared the MLA's list who will join Chief Minister H.D.Kumaraswamy cabinet form JD(S). In a Congres-JD(S) alliance government Congress will get 22 and JD(S) will get 12 minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X