JDS Election Manifesto: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕ್ರಮದ ಭರವಸೆ
ಬೆಂಗಳೂರು, ಏಪ್ರಿಲ್ 27: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ನೀರಾವರಿ ಕ್ಷೇತ್ರಕ್ಕೆ ಜಲಧಾರೆ ಹೆಸರಿನಲ್ಲಿ ಭರವಸೆಗಳನ್ನು ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯಿಂದ ಕೃಷ್ಣಾ ಮೇಲ್ದಂಡೆ ಯೋಜನೆಗೆ 303 TMC ಹಂಚಿಕೆಯಾಗಿದೆ: ಸ್ಟೀಮ್ -A ಅಡಿ 173 TMC ಸ್ಟೀಮ್ -B ಅಡಿ 130 TMC * ಒಟ್ಟು 303 TMC ಸ್ಟೀಮ್-A ಅಡಿ ಹಂಚಿಕೆಯಾಗಿರುವ 173 TMC ನೀರನ್ನು ಬಳಸಿಕೊಂಡು ಬರಪೀಡಿತ ಜಿಲ್ಲೆಗಳಾದ ಬಿಜಾಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 16 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.

ಈ ಯೋಜನೆಗೆ ಇಲ್ಲಿಯವರೆಗೆ 30,000 ಕೋಟಿ ರೂ ವೆಚ್ಚ ಮಾಡಲಾಗಿದೆ. ಸ್ಟೀಮ್ B ಅಡಿಯಲ್ಲಿ 130 TMC ನೀರನ್ನು ಬಳಸಿಕೊಂಡು 14 ಲಕ್ಷ ಎಕರೆಗೆ ನೀರಾವರಿ ಕಲ್ಪಿಸಲು ಉದ್ದೇಶಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಯೋಜನೆ ಅಡಿ 20 ಗ್ರಾಮಗಳು ಮುಳುಗಡೆ ಆಗುತ್ತಿದ್ದು, ಈ ಗ್ರಾಮಗಳ ಸ್ಥಳಾಂತರ ಮತ್ತು ಪುನರ್ ವಸತಿ ಕೇಂದ್ರಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನ ಮತ್ತು ಅಗತ್ಯವಿರುವ 1,33,867 ಎಕರೆ ಜಮೀನನ್ನು ಭೂಸ್ವಾಧೀನ ಪಡೆಸಿಕೊಂಡು ಭೂ ಪರಿಹಾರ ನೀಡುವಲ್ಲಿ ಉಂಟಾಗುವ ತಾರತಮ್ಯಕ್ಕೆ ಏಕರೂಪ ದರ ನಿಗಡಿಪಡಿಸಿ ಸಮಸ್ಯೆ ಪರಿಹರಿಸಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ ಒಂದು ಪ್ರತಿಷ್ಠಿತ ಯೋಜನೆ ಆಗಿದ್ದು, ಈ ಯೋಜನೆಯನ್ನು ಕೇಂದ್ರ ಸರ್ಕಾರವು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಸರ್ವಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದೆ.
ಭದ್ರ ಮೇಲ್ದಂಡೆ ಯೋಜನೆ:
ಈ ಯೋಜನೆ ಅಡಿ 29.90 TMC ನೀರನ್ನು ಬಳಸಿಕೊಂಡು ಬರಪೀಡಿತ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಒಟ್ಟು 5.57 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹಾಗೂ 367 ಕೆರೆಗಳನ್ನು ತುಂಬಿಸಿ ಈ ಭಾಗದ ಕುಡಿಯುವ ನೀರಿನ ಬವಣೆಯನ್ನು ಬಗೆಹರಿಸಲು ಉದ್ದೇಶಿಸಲಾಗಿದೆ.

ಈ ಯೋಜನೆಯ ಅಂದಾಜು ವೆಚ್ಚ 25 ಸಾವಿರ ಕೋಟಿ ರೂ.ಗಳಾಗಿದ್ದು, ಇದುವರೆಗೂ 5500 ಕೋಟಿ ರೂ.ಗಳಷ್ಟು ವೆಚ್ಚ ಮಾಡಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಪರಿಗಣಿಸಿ 5,300 ಕೋಟಿ ರೂ.ಗಳ ಅನುದಾನವನ್ನು ಒದಗಿಸುವುದಾಗಿ ಕೇಂದ್ರ ಸರ್ಕಾರವು ಭರವಸೆ ನೀಡಿದ್ದಾದರೂ ಇದು ಇನ್ನೂ ಕಾರ್ಯಗತಗೊಳ್ಳಬೇಕಾಗಿದೆ.
ಈ ಯೋಜನೆಗೆ ರಾಜ್ಯ ಸರ್ಕಾರ ವಾರ್ಷಿಕವಾಗಿ ಸರಾಸರಿ 2,000 ಕೋಟಿ ರೂ.ಗಳ ಅನುದಾನ ನೀಡುತ್ತಿದ್ದು, ಈ ಅನುದಾನವನ್ನು 5,000 ಕೋಟಿ ರೂ.ಗಳಿಗೆ ಏರಿಸಿ ಮುಂದಿನ 4 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.
ಮೇಕೆದಾಟು ಯೋಜನೆ:
ಈಯೋಜನೆಯು ಸಮಾನಂತರ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯಾಗಿದ್ದು, ಬೆಂಗಳೂರು ನಗರ ಮತ್ತುಆಸುಪಾಸಿನ ವಸತಿ ಪ್ರದೇಶಗಳು ಎದುರಿಸುತ್ತಿರುವ ಕುಡಿಯುವ ನೀರಿನ ಕೊರತೆಯನ್ನುನೀಗಿಸಲು 67 TMC ಶೇಖರಣೆ ಸಾಮರ್ಥ್ಯವುಳ್ಳಅಣೆಕಟ್ಟು ಯೋಜನೆಯಾಗಿದೆ. ಈ ಯೋಜನೆಯ ವಿಸ್ತೃತ ವರದಿಯನ್ನು ಜನವರಿ 2019 ರಲ್ಲಿಅನುಮೋದನೆಗಾಗಿ ಕೇಂದ್ರಸರ್ಕಾರಕ್ಕೆಕಳುಹಿಸಲಾಗಿದೆ.
4 ವರ್ಷಗಳು ಕಳೆದಿದ್ದರೂ ಈಯೋಜನೆಗೆ ಯಾವ ಅನುಮತಿ ದೊರಕಿರುವುದಿಲ್ಲ. ತಮಿಳುನಾಡು ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿಈಯೋಜನೆಗೆ ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿರುವುದು ಒಂದು ಕಾರಣವಾದರೆ, ತಾಂತ್ರಿಕ ಕಾರಣಗಳು ಹಲವಾರು ಇರುತ್ತವೆ. ಈಯೋಜನೆಯ ವೆಚ್ಚ9 ಸಾವಿರ ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಈಗಿನ ಅಂದಾಜಿನಂತೆ 13 ಸಾವಿರ ಕೋಟಿ ರೂ.ಗಳು ಆಗಬಹುದು.
ಈಯೋಜನೆಗೆ ಅವಶ್ಯವಿರುವ ಅನುಮತಿಗಳನ್ನುತ್ವರಿತಗತಿಯಲ್ಲಿ ಪಡೆದುಕೊಳ್ಳಲು ಮತ್ತುಕಾನೂನಿನ ತೊಡಕುಗಳನ್ನುಸಮರ್ಥವಾಗ ನಿವಾರಿಸಿಕೊಳ್ಳಲು ಹಾಗೂ ತಾಂತ್ರಿಕ ಸಲಹೆ ಪಡೆದು ಬೆಂಗಳೂರು ನಗರ ಜನತೆಯ ಹಿತದೃಷ್ಟಿಯಿಂದ ಮತ್ತುರಾಜ್ಯಕ್ಕೆಹಂಚಿಕೆ ಮಾಡಲಾದ ನೀರಿನ ಪರಿಮಿತಿಯಲ್ಲಿ ಯೋಜನೆಯ ವಿನ್ಯಾಸವನ್ನು ಮರುಪರಿಶೀಲನೆಗೆ ಒಳಪಡಿಸಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಈ ಯೋಜನೆಯನ್ನುತ್ವರಿತವಾಗಿ ಕಾರ್ಯಗತಗೊಳಿಸಲಾಗುವುದು.
ಮಹದಾಯಿ ಯೋಜನೆ:
ಈ ಯೋಜನೆ ಅಡಿ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ವಾಸಿಸುವ 20 ಲಕ್ಷ ಜನತೆಗೆ ಕುಡಿಯುವ ನೀರಿಗಾಗಿ ಮಹಾದಾಯಿ ನದಿ ಪಾತ್ರದಿಂದ ಮಲಪ್ರಭಾ ನದಿಯ ಉಪನದಿ ಪಾತ್ರಕ್ಕೆ ತಿರುಗಿಸುವ ಯೋಜನೆಯಾಗಿದೆ. ಮಹಾದಾಯಿ ಜಲವಿವಾದ ನ್ಯಾಯಮಂಡಳಿ ರಾಜ್ಯಕ್ಕೆ 13.42 TMC ನೀರನ್ನು ಹಂಚಿಕೆ ಮಾಡಿದ್ದು ಅದರಂತೆ ವಿಸ್ಮತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಈ ಯೋಜನೆಯ ವಿಸೃತ ವರದಿಗೆ ಕೇಂದ್ರ ಜಲಶಕ್ತಿ ಮತ್ತು ಪರಿಸರ ಮಂತ್ರಾಲಯಗಳಿಂದ ಅಗತ್ಯವಿರುವ ಅನುಮತಿ ಬಾಕಿ ಇವೆ. ಈ ಯೋಜನೆಗೆ ಅಗತ್ಯವಿರುವ ಅನುಮತಿ ಪಡೆದು, ಅನುದಾನ ನೀಡಿ, ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ.
ಎತ್ತಿನ ಹೊಳೆ ಯೋಜನೆ:
ಇದು ಸಂಪೂರ್ಣ ಕುಡಿಯುವ ನೀರಿನ ಯೋಜನೆ. ಪಶ್ಚಿಮ ಘಟ್ಟದಲ್ಲಿ ಉದಯಿಸಿ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುವ ಎತ್ತಿನಹೊಳೆ ಜಲಸಮೂಹದಿಂದ 24 TMC ನೀರನ್ನು ಮೇಲೆತ್ತಿ ಪೂರ್ವಕ್ಕೆ ತಿರುಗಿಸಿ ಅತ್ಯಂತ ಜಲಕ್ಷಾಮದಿಂದ ಸದಾಕಾಲ ಬಳಲುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 527 ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ.
ಪಶ್ಚಿಮ ಘಟ್ಟದಲ್ಲಿರುವ ಸಕಲೇಶಪುರದ ಎತ್ತಿನಹೊಳೆಯಿಂದ ನೀರನ್ನು ಎತ್ತಿ ಗುರುತ್ವಾಕರ್ಷಣ ಕಾಲುವೆ ಮುಖೇನ ಹಾಸನ ಮತ್ತು ತುಮಕೂರು ಜಿಲ್ಲೆಗಳ ಮುಖೇನ ಹಾದು ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಿಸಿರುವ ಬೈರಗೊಂಡಲು ಜಲಾಶಯಕ್ಕೆ ನೀರು ಬಿಡಲಾಗುತ್ತದೆ. ಈ ಯೋಜನೆ ಆಡಿ ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿನ ಒಟ್ಟು 8864 ಕೆರೆಗಳನ್ನು ತುಂಬಿಸುವ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯ ಮತ್ತು ಹೆಸರಘಟ್ಟ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ಇದೆ.
ಈ ಯೋಜನೆಗೆ ಇದುವರೆಗೂ 11500 ಕೋಟ ರೂ.ಗಳು ವೆಚ್ಚವಾಗಿದ್ದು, ಯೋಜನೆಯನ್ನು ಪೂರ್ಣಗೊಳಿಸಲು ಇನ್ನೂ 12500 ಕೋಟಿ ರೂ.ಗಳ ಅವಶ್ಯಕತೆ ಇರುತ್ತದೆ. ಯೋಜನಾ ವಿನ್ಯಾಸ ಹಲವು ಬಾರಿ ರ್ಪಡಿಸಲಾಗಿದೆ ಮತ್ತು ಯೋಜನೆ ಉದ್ದೇಶ ವಿಸ್ತರಿಸಲಾಗಿದೆ. ಆದ್ದರಿಂದ ಮೂಲ ಉದ್ದೇಶಕ್ಕೆ ಧಕ್ಕೆ ಇಲ್ಲದೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಆಶೋತ್ತರಗಳನ್ನು ಸಫಲಗೊಳಿಸಲು ಪ್ರತಿ ವರ್ಷ ಈ ಯೋಜನೆಗೆ 3 ಸಾವಿರ ಕೋಟಿ ರೂಗಳ ಅನುದಾನ ಒದಗಿಸಿ ಮುಂದಿನ 4 ವರ್ಷಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.












Click it and Unblock the Notifications