ಜೆಡಿಎಸ್ ಅಭಿಮಾನಿಗಳ ತೀವ್ರ ಸಿಟ್ಟಿಗೆ ಗುರಿಯಾದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು, ಜುಲೈ 24: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಸಾಮಾಜಿಕ ತಾಣದಲ್ಲಿ, ಜೆಡಿಎಸ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

Recommended Video

      China launches Mars probe during Pandemic | Oneindia Kannada

      ಬಿಜೆಪಿ ಮುಖಂಡ ಮುನಿರತ್ನ ಅವರಿಗೆ ನಿಖಿಲ್, ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು. ಇದು, ಜೆಡಿಎಸ್ ಅಭಿಮಾನಿಗಳನ್ನು ಕೆರಳಿಸಿದೆ. ಇದಕ್ಕೆ, ಕಾರಣ, ಕುಮಾರಣ್ಣನ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಳ್ಳಲು ಮುನಿರತ್ನ ಕೂಡಾ ಒಬ್ಬರು ಕಾರಣರು.

      "ಸೃಜನಶೀಲ ನಿರ್ಮಾಪಕರು ಮತ್ತು ಆತ್ಮೀಯರೂ ಆದ ಶ್ರೀ ಮುನಿರತ್ನ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು"ಎಂದು ನಿಖಿಲ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಸುಮಾರು 300ಕ್ಕೂ ಹೆಚ್ಚು ಕಾಮೆಂಟುಗಳು ಬಂದಿವೆ.

      JDS Fans Upset On Nikhil Kumaraswamy Over His Birthday Wish Post Of BJP Leader Munirathna

      ಮುನಿರತ್ನ ನಿರ್ಮಿಸಿದ್ದ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್, ಅಭಿಮನ್ಯುವಿನ ಪಾತ್ರವನ್ನು ಮಾಡಿದ್ದರು. ಚಿತ್ರದಲ್ಲಿನ ನಿಖಿಲ್ ನಟನೆ ವ್ಯಾಪಕ ಪ್ರಶಂಸೆಗೊಳಗಾಗಿತ್ತು. "Prince ನಮಗೆಲ್ಲ ನೋವು ಕೊಡಬೇಡಿ ಜೆಡಿಎಸ್ ಕಾರ್ಯಕರ್ತರ ಪರವಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ" ಈ ರೀತಿಯ ಹಲವು ಕಾಮೆಂಟುಗಳು ನಿಖಿಲ್ ಪೋಸ್ಟಿಗೆ ಬಂದಿದೆ.

      "ಅಣ್ಣ ನಿನಗೆ ರಾಜಕೀಯ ಮಾಡೋದು ಬರಲ್ಲ ಸಿನಿಮಾ ಮಾಡ್ಕೊಳ್ಳಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡೋದು ಸೂಕ್ತ", "ಯುವ ಅಧ್ಯಕ್ಷ ಸ್ಥಾನವನ್ನ ಗ್ರೌಂಡ್ ಕೆಲಸ ಮಾಡೋರಿಗೆ ಬಿಟ್ಟು ಕೊಡ್ರಿ ಇಲ್ಲಾಂದ್ರೆ ಪಕ್ಷ ಹಾಳಾಗುತ್ತೆ, ನೀವು ಸಿನಿಮಾ ಮಾಡ್ಕೊಂಡು ಆರಾಮಾಗಿರಿ".

      JDS Fans Upset On Nikhil Kumaraswamy Over His Birthday Wish Post Of BJP Leader Munirathna

      "ನಿಖಿಲ್ ಅವ್ರೇ ನಿಮ್ಮ ಮೇಲೆ ನಮಗೆ ತುಂಬಾ ಅಭಿಮಾನ ಇದೆ. ನೀವು ನಮ್ಮ ರಾಜಕೀಯ ನಾಯಕರು. ಆದರೆ ನೀವು ಈ ರೀತಿ ಮಾಡಿದರೆ ನಮಗೆ ಕಾರ್ಯಕರ್ತರಿಗೆ ಅವಮಾನ. ನಿಮಗೆ ಅಭಿಮಾನ ಇದ್ರೆ ಫೋನ್ ನಲ್ಲಿ ಅಭಿನಂದಿಸಿ. ನೀವು ನಿಮ್ಮ ಅಧಿಕೃತ ಪೇಜ್ ನಲ್ಲಿ.ವಿಶ್ ಮಾಡಿರೋದು ಇಡೀ jds ಕಾರ್ಯ ಕರ್ತರಿಗೆ ಮಾಡಿರುವ ಅವಮಾನ" - ಈ ರೀತಿಯ ಕಾಮೆಂಟುಗಳು, ನಿಖಿಲ್ ಪೋಸ್ಟಿಗೆ ಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+