ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಜೈಲುವಾಸ ಅಂತ್ಯ, ಚೆನ್ನೈನತ್ತ ಅಮ್ಮ

|
Google Oneindia Kannada News

ಬೆಂಗಳೂರು, ಅ. 18 : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶುಕ್ರವಾರ ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದಿದ್ದ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಅಕ್ರಮ ಆಸ್ತಿಗಳಿಗೆ ಪ್ರಕರಣ ಸಾಬೀತಾಗಿದ್ದರಿಂದ ಜಯಲಲಿತಾ ಅವರು 22 ದಿನಗಳಿಂದ ಜೈಲಿನಲ್ಲಿದ್ದರು.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನ್ಯಾ. ಮದನ್ ಬಿ ಲೋಕೂರ್ ಹಾಗೂ ನ್ಯಾ. ಎ.ಕೆ.ಸಿಕ್ರಿ ಅವರ ಪೀಠ ಅಕ್ರಮ ಆಸ್ತಿಗಳಿಗೆ ಪ್ರಕರಣದ ಎಲ್ಲಾ ನಾಲ್ವರು ಅಪರಾಧಿಗಳಿಗೂ ಶುಕ್ರವಾರ ಜಾಮೀನು ಮಂಜೂರು ಮಾಡಿತ್ತು. ಶನಿವಾರ ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಧ್ಯಾಹ್ನ 3.15ಕ್ಕೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

J Jayalalithaa

ಸೆ.27ರಂದು ಜೆ.ಜಯಲಲಿತಾ ಮತ್ತು ಅವರ ಆಪ್ತರಾದ ಶಶಿಕಲಾ, ಇಳವರಸಿ ಮತ್ತು ಸಾಕುಮಗ ಸುಧಾಕರನ್‌ಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಕಳೆದ 22 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಎಲ್ಲರೂ ಇಂದು ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಬಿಡುಗಡೆಯಾಗಿದ್ದಾರೆ. [ಶನಿವಾರ ಬೆಳಗ್ಗೆಯಿಂದ ಏನಾಯ್ತ? ಇಲ್ಲಿದೆ ಮಾಹಿತಿ]

ಜೈಲಿನಿಂದ ಹೊರಬಂದ ಜಯಲಲಿತಾ ಅವರು ಝೆಡ್‌ ಪ್ಲಸ್ ಭದ್ರತೆ ನಡುವೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿದರು. ಎಚ್‌ಎಎಲ್‌ನಿಂದ ವಿಶೇಷ ವಿಮಾನದಲ್ಲಿ ಜಯಲಲಿತಾ ಅವರು ಚೆನ್ನೈನ ಪೋಯಾಸ್ ಗಾರ್ಡ್‌ನ್‌ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. [ಜಯಲಲಿತಾ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ]

ಜಯಲಲಿತಾ ಅವರ ಬಿಡುಗಡೆಗೆ 1 ಕೋಟಿ ರೂ.ಮೌಲ್ಯದ ಶ್ಯೂರಿಟಿಯನ್ನು ನೀಡಲಾಗಿದೆ. ಬೆಂಗಳೂರಿನ ಗುಣಜ್ಯೋತಿ ಮತ್ತು ಭರತ್‌ ಎನ್ನುವವರು ಜಿಗಣಿಯಲ್ಲಿರುವ 1 ಕೋಟಿ ಮೌಲ್ಯದ ಆಸ್ತಿಯನ್ನು ಶ್ಯೂರಿಟಿಯಾಗಿ ನೀಡಿದ್ದಾರೆ. ಅಪರಾಧಿಗಳು ನಾಪತ್ತೆಯಾದರೆ ನೀವೆ ಹೊಣೆಗಾರರು ಎಂದು ಶ್ಯೂರಿಟಿ ನೀಡಿದವರಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.

English summary
AIADMK supremo J Jayalalithaa released form Parappana Agrahara prison after 22 days. AIADMK supremo J Jayalalithaa, granted bail by the Supreme Court in the disproportionate assets case on Friday by Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X