ಜಾರಕಿಹೊಳಿ ಸಹೋದರರಿಂದ ಸರ್ಕಾರ ಉರುಳಿಸುವುದು ಅಸಾಧ್ಯ: ಮೊಯ್ಲಿ
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 15: ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಕೆಲ ಮಾಫಿಯಾಗಳು ಕೈ ಹಾಕಿವೆ ಎನ್ನುವ ಸಿಎಂ ಕುಮಾರಸ್ವಾಮಿ ಹೇಳಿಕೆಯಲ್ಲಿ ಸತ್ಯಾಂಶ ಇದ್ದೇ ಇರುತ್ತೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ವೀರಪ್ಪ ಮೊಯ್ಲಿ ಹೇಳಿದರು.
ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ಮುದ್ದೇನಹಳ್ಳಿ ಗ್ರಾಮದ ವಿಶ್ವೇಶ್ವರಯ್ಯ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಮ ನಮನ ಸಲ್ಲಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ವೀರಪ್ಪ ಮೊಯ್ಲಿ ಯಡಿಯೂರಪ್ಪ ನವರು ವಾಮಮಾರ್ಗದಿಂದ ಆಧಿಕಾರ ಹಿಡಿಯಲು ಯತ್ನ ನಡೆಸುತ್ತಿದ್ದಾರೆ ಎಂದರು.
ಅಪರೇಷನ್ ಕಮಲ ಮಾಡಿ ಈ ಹಿಂದೆ ಯಡಿಯೂರಪ್ಪ ಅವರೇ ಪಕ್ಷದಿಂದ ಹೊರಗೆ ಬಂದರು. ಕರ್ನಾಟಕದ ಜನ ಸುಸಂಸ್ಕೃತರು ಹಾಗೂ ನಮ್ಮ ಶಾಸಕರು ಹಣ ಅಮಿಷಗಳಿಗೆ ಶಾಸಕರು ಬಗ್ಗಲ್ಲ . ಬಿಜೆಪಿಯವರು ಭ್ರಮೆಯಿಂದ ಅಪರೇಷನ್ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದರು.

ಕಳೆದ ಬಾರಿ 18 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ರು. ಅದ್ರೆ ಈ ಬಾರಿ ಕೇವಲ 2-3 ಸ್ಥಾನ ಬರಬೇಕು ಎಂಬುದು ಅವರ ಆಸೆಯಾದರೆ ಸಮ್ಮಿಶ್ರ ಸರ್ಕಾರ ಉರುಳಿಸಲಿ ಎಂದರು.
ಜಾರಕಿಹೊಳಿ ವಿಷಯ ಮಾತನಾಡಿದ ಅವರು, ದಿನ ಬೆಳಗಾದರೆ ಜಾರಕಿಹೊಳಿ ವಿಚಾರ ಮಾತನಾಡಿ ಮಾದ್ಯಮದವರು ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಆದರೆ ಒಬ್ಬ ಜಾರಕಿಹೊಳಿ ಅಥವಾ ಮತ್ತೊಬ್ಬರು ಈ ಪಕ್ಷ ಹಾಗೂ ಸರ್ಕಾರ ಉರುಳಿಸೋಕೆ ಆಗಲ್ಲ ಎಂದರು.












Click it and Unblock the Notifications