'ಜಪಾನ್ ಕಂಪನಿಯಿಂದ ಬೆಂಗಳೂರಿನಲ್ಲಿ ಅನಿಲ ತಯಾರಿಕೆಯ 2ನೇ ಘಟಕ'
ಬೆಂಗಳೂರು, ಸೆಪ್ಟಂಬರ್ 12: ಕೈಗಾರಿಕಾ ಅನಿಲ ತಯಾರಿಸುವ ಜಪಾನಿನ ಏರ್ ವಾಟರ್ ಕಂಪನಿ, ಬೆಂಗಳೂರಿನ ಸಮೀಪ ತನ್ನ ಎರಡನೇ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ. ಅಧಿಕೃತ ಮಾಹಿತಿ ನೀಡಿದೆ. ಈಗಾಗಲೇ ಈ ಕಂಪನಿಯು ವಿಜಯನಗರದಲ್ಲಿ ಮೊದಲ ಘಟಕ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಜೈವಿಕ ಅನಿಲ ತಯಾರಿಕಾ ಘಟಕ ಸ್ಥಾಪನೆಗೂ ಕಂಪನಿಯು ಆಸಕ್ತಿ ತೋರಿದೆ.
ಜಪಾನ್‌ಗೆ ಭೇಟಿ ನೀಡಿದ ಸಚಿವ ಎಂಬಿ ಪಾಟೀಲ್ ಮತ್ತು ಅಧಿಕಾರಿಗಳ ನಿಯೋಗ ಏರ್ ವಾಟರ್ ಕಂಪನಿ ಮುಖ್ಯಸ್ಥರ ಒತೆ ಮಾತನಾಡಿದ್ದಾರೆ. ಏರ್ ವಾಟರ್ ಅಧಿಕಾರಿಗಳೊಂದಿಗೆ ನಡೆದ ಸಮಲೋಚನೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕರ್ನಾಟಕವು ತಮ್ಮ ವಹಿವಾಟಿನ ಪ್ರಮುಖ ವಲಯವಾಗಿದ್ದು, ಜೈವಿಕ ಅನಿಲದ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಈ ಯೋಜನೆಯು ನೆರವಾಗಲಿದೆ ಎಂದು ಕಂಪನಿಯು ತಿಳಿಸಿದೆ ಎಂದರು.

ಇದೇ ಸಂದರ್ಭದಲ್ಲಿ, ಶಿಂಕೊ ನೇಮ್‌ಪ್ಲೇಟ್ ಕಂಪನಿಯು ₹100 ಕೋಟಿ ಹೂಡಿಕೆಯ ಮೂಲಕ ವಾಹನ ಭಾಗ ತಯಾರಿಕಾ ಘಟಕವನ್ನು ಬೆಂಗಳೂರು ಬಳಿ ಆರಂಭಿಸಲು ನಿರ್ಧರಿಸಿದೆ. ಟೊಯೋಟ ಗ್ರೂಪ್‌ನ ಕ್ಯಾಟಲರ್ ಕಂಪನಿಯು ಬಿಡದಿಯಲ್ಲಿನ ತನ್ನ ತಯಾರಿಕಾ ಚಟುವಟಿಕೆಗೆ 140 ಕೋಟಿ ರೂಪಾಯಿ ಹೆಚ್ಚುವರಿ ಹೂಡಿಕೆ ಮೂಲಕ 2030ರ ವೇಳೆಗೆ ವಿಸ್ತರಿಸುವುದಾಗಿ ತಿಳಿಸಿದೆ. ಈ ಮೂಲಕ ಕರ್ನಾಟಕದ ವಿದೇಶ ಕಂಪನಿಗಳಿಂದ ಬಂಡವಾಳ ಹರಿವು ಹೆಚ್ಚಾಗುತ್ತಿದೆ.
ಮಾತ್ರವಲ್ಲದೇ ಸುಧಾರಿತ ಸ್ವಯಂಚಾಲಿತ ನಿಯಂತ್ರಣ ಸಾಧನ ತಯಾರಿಸುವ ಸಗಿನೋಮಿಯಾ, ಕರ್ನಾಟಕದಲ್ಲಿ ಹೊಸ ಘಟಕ ಸ್ಥಾಪಿಸಲು ಒಲವು ವ್ಯಕ್ತಪಡಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಜಪಾನ್ ಪ್ರವಾಸದಲ್ಲಿ ಹತ್ತು ಹಲವು ಕಂಪನಿಗಳೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿರುವ ಸಚಿವರು ಬಂಡವಾಳ ಆಕರ್ಷಿಸುತ್ತಿದ್ದ, ಕರ್ನಾಟಕದಲ್ಲಿ ಹೂಡಿಕೆಗೆ ಇರುವ ವಿಫುಲ ಅವಕಾಶಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಎನ್‌ಜಿಇಎಫ್ ಪುನಶ್ಚೇತನ
ಪಾಲುದಾರಿಕೆಯಡಿ ಹುಬ್ಬಳ್ಳಿಯಲ್ಲಿರುವ ಪ್ರತಿಷ್ಠಿತ ಎನ್‌ಜಿಇಎಫ್ ಕಾರ್ಖಾನೆ ಪುನ:ಶ್ಚೇತನದ ಸಾಧ್ಯತೆಗಳ ಕುರಿತು ಜಪಾನಿನ ಜೆಎಫ್‌ಇ ಷೋಜಿ ಕಂಪನಿ ಜೊತೆ ಚರ್ಚಿಸಿ ಎನ್‌ಜಿಇಎಫ್ ಪುನಶ್ಚೇತನದ ಪ್ರಸ್ತಾವ ಮುಂದಿಟ್ಟಿದ್ದಾರೆ. ವಿದ್ಯುತ್ ಪರಿವರ್ತಕಗಳ ತಯಾರಿಕೆಯಲ್ಲಿ ಜೆಎಫ್‌ಇ ಮುಂಚೂಣಿಯಲ್ಲಿ ಇದೆ. ಹುಬ್ಬಳ್ಳಿಯಲ್ಲಿ ಇರುವ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿರುವ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿಯನ್ನು (ಎನ್‌ಜಿಇಎಫ್) ರಾಜ್ಯ ಸರ್ಕಾರದ ಪಾಲುದಾರಿಕೆಯಡಿ ಪುನಶ್ಚೇತನಗೊಳಿಸುವ ಸಂಬಂಧ ಪೂರ್ವಭಾವಿ ಮಾತುಕತೆ ನಡೆಸಲು ಕಂಪನಿಯ ಉನ್ನತಾಧಿಕಾರಿಗಳು ಹುಬ್ಬಳ್ಳಿಯ ಘಟಕಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.












Click it and Unblock the Notifications