ಜಂತಕಲ್: ಕುಮಾರಸ್ವಾಮಿಗೆ ಹೈಕೋರ್ಟ್ ನಿಂದ 'ಮಧ್ಯಂತರ' ರಿಲೀಫ್
ಬೆಂಗಳೂರು, ಜೂನ್ 28: ಜಂತಕಲ್ ಕಂಪೆನಿಗೆ ಗಣಿಗಾರಿಕೆಗೆ ಅನುಮತಿ ನೀಡಲು 150 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ.
ಮಧ್ಯಂತರ ಆದೇಶ ನೀಡಿರುವ ಹೈಕೋರ್ಟ್ ಜುಲೈ ಕೊನೆಯವಾರದವರಗೆ ಕುಮಾರಸ್ವಾಮಿ ಬಂಧಿಸದಂತೆ ಸೂಚನೆ ನೀಡಿದೆ. ಇದರಿಂದ ಇನ್ನೊಂದು ತಿಂಗಳು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರಾಳರಾಗಿದ್ದಾರೆ.

ಇನ್ನು ಪ್ರಕರಣದ ವಿಚಾರಣೆಯನ್ನೂ ಹೈಕೋರ್ಟ್ ಜುಲೈ ಕೊನೆಯ ವಾರಕ್ಕೆ ಮುಂದೂಡಿದೆ.
ನಿರೀಕ್ಷಣಾ ಜಾಮೀನು ಸಲ್ಲಿಕೆ
ಇನ್ನು ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಬಂಧನ ಭೀತಿಯಿಂದ ಈ ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆಯನ್ನು ಜುಲೈ 10 ಹೈಕೋರ್ಟ್ ಮುಂದೂಡಿದೆ.












Click it and Unblock the Notifications