12 ವರ್ಷದ ದ್ವೇಷ ತೀರಿಸಿಕೊಂಡ ಕುಮಾರಸ್ವಾಮಿ : ಜನಾರ್ದನ ರೆಡ್ಡಿ
Recommended Video

ಬೆಂಗಳೂರು, ನವೆಂಬರ್ 15 : 'ನನ್ನನ್ನು ಬಂಧಿಸಿ, ತೇಜೋವಧೆ ಮಾಡಿದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಾಕ್ಷಸರಿಗೆ ಸಿಗುವಂತಹ ಆನಂದ ಸಿಗಬಹುದು. ಆದರೆ, ಅದು ಅಲ್ಪ ಮಾತ್ರ. ಭಗವಂತ ನನ್ನ ಜೊತೆ ಇದ್ದಾನೆ' ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.
ಬುಧವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಜನಾರ್ದನ ರೆಡ್ಡಿ ಅವರು ಜೈಲಿನ ಹೊರಗೆ ಮಾಧ್ಯಮಗಳ ಜೊತೆ ಮಾತನಾಡಿದರು. ತಮ್ಮ ಬಂಧನಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಕಾರಣ ಎಂದು ಆರೋಪ ಮಾಡಿದರು.
'ಸಿಸಿಬಿ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡವಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು 12 ವರ್ಷಗಳ ಹಿಂದಿನ ದ್ವೇಷವನ್ನು ಇಟ್ಟುಕೊಂಡು ಬಂಧಿಸುವಂತೆ ಮಾಡಿದ್ದಾರೆ. ಸಿಸಿಬಿ ಪೊಲೀಸರಿಗೆ ನ್ಯಾಯಾಲಯ ಏನು ಹೇಳಿದೆ ಎಂಬುದು ರಾಜ್ಯದ ಜನರ ಮಂದಿದೆ' ಎಂದು ಜನಾರ್ದನ ರೆಡ್ಡಿ ಹೇಳಿದರು.
'ವಿಧಾನಸಭೆ ಚುನಾವಣೆ ಸಮಯದಿಂದಲೂ ನನ್ನನ್ನು ಬಂಧಿಸಬೇಕು ಎಂದು ಪ್ರಯತ್ನ ನಡೆದಿತ್ತು. ಉಪ ಚುನಾವಣೆ ಘೋಷಣೆಯಾದ ಬಳಿಕ ನನ್ನ ಮನೆ ಬಳಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು' ಎಂದು ಜನಾರ್ದನ ರೆಡ್ಡಿ ದೂರಿದರು.

ರಾಕ್ಷಸರಿಗೆ ಸಿಗುವ ಆನಂದ
'ನನ್ನನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಕುಮಾರಸ್ವಾಮಿ ಅವರಿಗೆ ರಾಕ್ಷಸರಿಗೆ ಸಿಗುವಂತಹ ಆನಂದ ಸಿಗಬಹುದು. ಕುಂಭಕರ್ಣ, ಹಿರಣ್ಯ ಕಶಪು ನಂತಹ ರಾಕ್ಷಸರು ಅಲ್ಪ ಆನಂದ ಅನುಭವಿಸಿದರು. ನಿಮ್ಮ ಕತೆಯೂ ಹಾಗೆಯೇ. ಭಗವಂತ ನನ್ನ ಜೊತೆ ಇದ್ದಾನೆ. ಸತ್ಯಕ್ಕೆ ಎಂದಿಗೂ ಗೆಲುವು ಸಿಗುತ್ತದೆ' ಎಂದು ಜನಾರ್ದನ ರೆಡ್ಡಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಸುಮ್ಮನಿರೋಲ್ಲ
'ಜೈಲು ವಾಸದ ಸಂದರ್ಭದಲ್ಲಿ ನನ್ನ ಕುಟುಂಬವನ್ನು ಮಿಸ್ ಮಾಡಿಕೊಂಡಿದ್ದೆ. ಈಗ ಅವರ ಜೊತೆ ಕಾಲ ಕಳೆಯುತ್ತಾ ಸತ್ಯವೇ ನಮ್ಮ ತಂದೆ-ತಾಯಿ ಎಂದು ಬದುಕುತ್ತಿದ್ದೇನೆ. ಆದರೆ, ವಿನಾಃ ಕಾರಣ ಯಾವುದೋ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಇನ್ನು ನಾನು ಸುಮ್ಮನೆ ಕೈ ಕಟ್ಟಿ ಕೂರುವುದಿಲ್ಲ' ಎಂದು ಜನಾರ್ದನ ರೆಡ್ಡಿ ಘೋಷಣೆ ಮಾಡಿದರು.

12 ವರ್ಷದ ದ್ವೇಷ
'ಹಾವಿನ ದ್ವೇಷ 12 ವರುಷ ಎಂಬಂತೆ ಕುಮಾರಸ್ವಾಮಿ 12 ವರ್ಷದ ಹಿಂದಿನ ದ್ವೇಷವನ್ನು ಈಗ ನನ್ನ ವಿರುದ್ಧ ತೀರಿಸಿಕೊಳ್ಳುತ್ತಿದ್ದಾರೆ. 12 ವರ್ಷಗಳ ಹಿಂದೆ ಸುಳ್ಳು ಕೇಸುಗಳನ್ನು ಹಾಕಿ, 1500 ಪೊಲೀಸರನ್ನು ಕರೆಸಿ ನನ್ನನ್ನು ಬಂಧಿಸಲು ಪ್ರಯತ್ನ ಮಾಡಿ ಸೋತಿದ್ದರು. ಆ ಸೇಡನ್ನು ಇಂದಿಗೂ ಇಟ್ಟುಕೊಂಡು ಯಾವುದೋ ಪ್ರಕರಣದಲ್ಲಿ ನನ್ನನ್ನು ಸೇರಿಸಿ, ತೇಜೊವಧೆ ಮಾಡಿ ಬಂಧಿಸಿದ್ದಾರೆ. ಅಧಿಕಾರಿಗಳು ಅವರ ಮಾತಿಗೆ ತಕ್ಕಂತೆ ಕುಣಿಯುತ್ತಿದ್ದಾರೆ' ಎಂದು ಜನಾರ್ದನ ರೆಡ್ಡಿ ಆರೋಪ ಮಾಡಿದರು.

ಆತಂಕದ ವಾತಾವರಣ
'ವಿಧಾನಸಭೆ ಚುನಾವಣೆಯಲ್ಲಿ ನಾನು ಆತ್ಮೀಯ ಗೆಳೆಯನಿಗಾಗಿ ಮೊಳಕಾಲ್ಮೂರಿನಲ್ಲಿ ಪ್ರಚಾರ ಮಾಡಿದೆ. ಅಂದಿನಿಂದಲೂ ರಾಜಕೀಯ ದ್ವೇಷ ಸಾಧಿಸಲಾಗುತ್ತಿದೆ. ನನ್ನ ಮನೆ ಸುತ್ತ ಆತಂಕದ ವಾತಾವಣ ನಿರ್ಮಾಣ ಮಾಡಲಾಗಿದೆ. ಉಪ ಚುನಾವಣೆ ಘೋಷಣೆಯಾದ ಮೇಲೆ ನನ್ನ ಮನೆಯ ಹತ್ತಿರ ಅಪರಿಚಿತರು ಓಡಾಡುತ್ತಿದ್ದರು. ನನ್ನ ವಾಹನವನ್ನು ಫಾಲೋ ಮಾಡಲಾಗುತ್ತಿತ್ತು. ಕೆಲವು ಪೊಲೀಸ್ ಪೇದೆಗಳು ಹುಷಾರಾಗಿ ಇರಿ ಎಂದು ನನಗೆ ಮಾಹಿತಿ ನೀಡಿದ್ದರು' ಎಂದು ಜನಾರ್ದನ ರೆಡ್ಡಿ ಹೇಳಿದರು.

ತಲೆ ತಗ್ಗಿಸಿ ನಿಂತಿದ್ದಾರೆ
'ಸಿಸಿಬಿ ಪೊಲೀಸರ ಮೇಲೆ ರಾಜಕೀಯ ಒತ್ತಡವಿದೆ. ಅಲೋಕ್ ಕುಮಾರ್, ಡಿಸಿಪಿ ಗಿರೀಶ್ ಅವರು ಕರ್ನಾಟಕದ ನಂಬರ್ 1 ಅಧಿಕಾರಿಗಳು ಇಂತಹವ ಸೇವೆ ಕರ್ನಾಟಕ ರಾಜ್ಯಕ್ಕೆ ಅವಶ್ಯಕತೆ ಇಲ್ಲ. ಇವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ' ಎಂದು ರೆಡ್ಡಿ ವ್ಯಂಗ್ಯವಾಡಿದರು.
'ರಾಜಕೀಯ ಒತ್ತಡಕ್ಕೆ ಮಣಿದು ನನ್ನನ್ನು ಬಂಧಿಸಿದರು. ನ್ಯಾಯಾಲಯ ವಿವರ ಕೇಳಿದಾಗ ಪೊಲೀಸರು ತಲೆ ತಗ್ಗಿಸಿ ನಿಂತಿದ್ದರು. ಇದನ್ನು ಮಾಧ್ಯಮಗಳು ರಾಜ್ಯದ ಜನರ ಮುಂದಿಟ್ಟಿವೆ. ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ.












Click it and Unblock the Notifications