Janardhana Reddy: ಸತೀಶ್ ಜಾರಕಿಹೊಳಿ ಹಣಿಯಲು ಶ್ರೀರಾಮುಲು ಜೊತೆ ಡಿಕೆಶಿ ಮಾತುಕತೆ : ಹೊಸ ಬಾಂಬ್ ಸಿಡಿಸಿದ ಜನಾರ್ದನ್ ರೆಡ್ಡಿ
ಬೆಂಗಳೂರು, ಜನವರಿ 23: ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಆಂತರಿಕ ಭಿನ್ನಮತದ ನಡುವೆ ಸ್ನೇಹಿತರಿಬ್ಬರ ನಡುವಿನ ಜಂಗಿ ಕುಸ್ತಿ ಜೋರಾಗಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಪರಸ್ವರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದು, ಈ ನಡುವೆ ಜನಾರ್ದನ ರೆಡ್ಡಿ ಪತ್ರಿಕಾಗೋಷ್ಠಿ ಕರೆದಿದ್ದು, ಕುತೂಹಲಕಾರಿ ಸಂಗತಿಗಳನ್ನ ಹೇಳಿದ್ದಾರೆ.
ಶ್ರೀರಾಮುಲು ಬೇಕು ಬೇಡ ಎಂದರು ನಾನು ಸಾಯೋತನಕ ಅವನನ್ನು ಸ್ನೇಹಿತನಾಗಿಯೇ ನೋಡುತ್ತೇನೆ. ಪಕ್ಷ ಬಿಡೋದು ಅವರ ವ್ಯೆಯಕ್ತಿಕ, ಹೋಗೋದಾದ್ರೆ ಅವರು ಹೋಗಲಿ. ಹೋದಾಗ ನನ್ನ ಮೇಲೆ ಆರೋಪ ಮಾಡೋದು ಎಷ್ಟು ಸರಿ..? ಬಳ್ಳಾರಿ ಭಾಗದಲ್ಲಿ ಜನರು ಮಾತಾಡ್ತಿದ್ದಾರೆ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲುರನ್ನು ಕರೆದುಕೊಳ್ಳಬೇಕೆಂದು ಮಾತಾಡ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜನಾರ್ದನ್ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಸತೀಶ್ ಜಾರಕಿಹೊಳಿ ಮಣಿಸಬೇಕು ಹೀಗಾಗಿ ಶ್ರೀ ರಾಮುಲು ರನ್ನು ಕಾಂಗ್ರೆಸ್ ಗೆ ಕರೆದುಕೊಳ್ಳಲಿದ್ದಾರೆ ಎಂದು ಜನಾರ್ದನ ರೆಡ್ಡಿ ಅವರು ತಿಳಿಸಿದ್ದಾರೆ. ಶ್ರೀರಾಮುಲು ಬೇಕು ಅಂದ್ರು ಬೇಡ ಅಂದ್ರು ಜನಾರ್ದನ ರೆಡ್ಡಿ ದೃಷ್ಟಿಯಲ್ಲಿ ಸ್ನೇಹಿತನೇ. ನಾನು ಒಂದು ಬಾರೀ ಸ್ನೇಹ ಮಾಡಿದ್ರೆ ನಾನು ಯಾವತ್ತು ಶತ್ರು ತರ ನೋಡಲ್ಲ. ನಮ್ಮ ಶತ್ರು ಜೊತೆ ಸ್ನೇಹ ಮಾಡಿದ್ದೇನೆ ಅನ್ನುವುದು ವಿಪರ್ಯಾಸ. ಆದರೆ, ನಿನ್ನೆ ಪಕ್ಷ ಬಿಡುತ್ತೇನೆ ಅಂತ ಹೇಳಿದ್ದು ತಪ್ಪು. ನನ್ನ ಮೇಲೆ ಆರೋಪ ಮಾಡಿ ಪಕ್ಷ ಬಿಡ್ತಿರೋದು ತಪ್ಪು. ನಾನು 40 ವರ್ಷ ಮಾಡಿರೋದು ನೆನಪಿಸಿಕೊಳ್ಳದೇ ಈ ರೀತಿ ಆರೋಪ ಮಾಡೋದು ತಪ್ಪು ಎಂದು ಶ್ರೀರಾಮುಲು ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾನು ಕರ್ಮವನ್ನ ನಂಬುತ್ತೇನೆ. ಆ ದೇವರಿಗೆ ನಾನು ಎಲ್ಲವನ್ನು ಬಿಡುತ್ತೇನೆ, ಕರ್ಮ ನನ್ನನ್ನು ಸೇರಿದಂತೆ ಯಾರನ್ನು ಬಿಡಲ್ಲ. ಡಿಕೆ ಶಿವಕುಮಾರ್ ಸಂಪರ್ಕದಲ್ಲಿ ಇದ್ದಾರೆ ಅನ್ನೋದನ್ನ ಮಾಧ್ಯಮದಲ್ಲಿ ನೋಡಿದ್ದೇನೆ ನನಗೆ ಗೊತ್ತಿಲ್ಲ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿರೋದು ಹೈಕಮಾಂಡ್. ಯಾರೋ ನಾಲ್ಕು ಜನ ವಿರೋಧ ಮಾಡ್ತಿದ್ದಾರೆ ಅಂತ ಹೇಳಿ ಅವರ ಜೊತೆ ಸೇರಿಕೊಂಡು ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಹೇಳಿದರು.
ಪಕ್ಷದ ವರಿಷ್ಠರ ಬಳಿ ಶ್ರೀರಾಮುಲು ಸಂಡೂರಲ್ಲಿ ಕೆಲಸ ಮಾಡಿಲ್ಲ ಅಂತ ಹೇಳೋದು ನನ್ನ ಜಯಮಾನವಲ್ಲ. ನನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದು, ಹೈಕಮಾಂಡ್ ನಾಯಕರೇ ಹೊರೆತು ಯಾರೋ ಸಹಾಯದಿಂದ ಅಲ್ಲ..
ನನ್ನಿಂದ ಬೆಳದವರ ಸಹಾಯ ಪಡೆದು ನಾನು ಪಕ್ಷಕ್ಕೆ ಸೇರಿದವನು ಅಲ್ಲ, ಹೈಕಮಾಂಡ್ ನಾಯಕರು ರಾಮುಲು ಅವರನ್ನ ಏನ್ ಕೇಳಿದ್ದಾರೋ ನನಗೆ ಗೊತ್ತಿಲ್ಲ. ಯಾವ ಆಧಾರ ಮೇಲೆ ಯಾವ ಪ್ರಶ್ನೆ ಕೇಳಿದ್ರೋ ನನಗೆ ಗೊತ್ತಿಲ್ಲ. ಸದಾನಂದಗೌಡ ಅವರು ವರದಿ ತಯಾರಿಸಿದ್ದಾರೆ. ನಾನು ಕೂಡ ಮಾಹಿತಿ ನೀಡಿದ್ದೇನೆ. ನಾನು ಯಾರೊಬ್ಬರ ಮೇಲೂ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಂಗಾರು ಹನುಮಂತು ಬೆಳೆಯುತ್ತಿದ್ದಾರೆ ಅಂತ ಅವರಿಗೆ ಅನಿಸಿದೆಯೋ ಏನೋ ಗೊತ್ತಿಲ್ಲ. 12 ವರ್ಷಗಳಲ್ಲಿ ಸಾಕಷ್ಟು ಮೈಮೇಲೆ ಎಳೆದುಕೊಂಡಿದ್ದಾರೆ ಶ್ರೀರಾಮುಲು, ಏಜೆನ್ಸಿ ತನಿಖೆ ಬಂದ್ರೆ ವರ್ಷಗಳೇ ಹಿಡಿಯುತ್ತೇವೆ ತನಿಖೆ ನಡೆಸಲು. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ, ಶ್ರೀರಾಮುಲು ಹುಟ್ಟಿದ ಸ್ಲಂನಿಂದ ಹಿಡಿದು ಪಟ್ಟಣದವರೆಗೂ ಹೋಗಿ ಕೇಳಿದ್ರು ಜನಾರ್ದನ ರೆಡ್ಡಿ ಏನೂ ಅಂತ ಹೇಳ್ತಾರೆ. ಪಕ್ಷ ನನಗೆ ಟಿಕೆಟ್ ಕೊಡಲ್ಲ ಅಂತ ಹೇಳಿದ್ರು ನಾನು ಒಪ್ಪುತ್ತೇನೆ. ಶ್ರೀರಾಮುಲು ಪರ ಪ್ರಚಾರ ಮಾಡು ಅಂತ ಹೈಕಮಾಂಡ್ ಹೇಳಿದ್ರೆ ಆ ಕೆಲಸ ಮಾಡುತ್ತೇನೆ. ಪಕ್ಷದ ನಿರ್ಧಾರಕ್ಕೆ ನಾನು ತಲೆ ಬಾಗುತ್ತೇನೆ ಎಂದು ಜನಾರ್ದನ್ ರೆಡ್ಡಿ ಹೇಳಿದರು.












Click it and Unblock the Notifications