Jan Ki Baat Pre Poll Survey: ಕಿತ್ತೂರು ಕರ್ನಾಟಕದ 50 ಸ್ಥಾನದಲ್ಲಿ ಬಿಜೆಪಿ ಅಧಿಕ ಸ್ಥಾನ, ವಿಪಕ್ಷಗಳಿಗೆ ಸೀಟಿನ ವಿವರ ಇಲ್ಲಿದೆ
ಬೆಂಗಳೂರು, ಏಪ್ರಿಲ್ 14: ಕರ್ನಾಟಕ ರಾಜ್ಯದಲ್ಲಿ ಮುಂದಿನ ತಿಂಗಳ ಮೇ 10ರಂದು ಮತದಾನ ನಡೆಯಲಿದ್ದು, ಕಿತ್ತೂರು ಕರ್ನಾಟಕ ಭಾಗದಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನ ಗೆಲ್ಲಲಿವೆ ಎಂಬ ನೂತನ ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೊರ ಬಿದ್ದಿದೆ.
ಶುಕ್ರವಾರ ಕನ್ನಡ ಸುವರ್ಣ ಸುದ್ದಿ ವಾಹಿನಿ ನಡೆಸಿದ ಜನ್ ಕಿ ಬಾತ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಕಿತ್ತೂರು ಕರ್ನಾಟಕದ ಒಟ್ಟು 50 ಸೀಟು ಪೈಕಿ ಆಡಳಿತಾರೂಢ ಬಿಜೆಪಿಗೆ ಎಷ್ಟು ಸ್ಥಾನ?. ವಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಎಷ್ಟು ಸ್ಥಾನ? ಎಂಬುದು ಬಹಿರಂಗವಾಗಿದೆ. ಈ ಕುರಿತ ಸಮೀಕ್ಷೆಯ ಅಂಶಗಳು ಇಲ್ಲಿವೆ.

ಪ್ರತಿ ಬಾರಿ 50 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಬರೋಬ್ಬರಿ 31 ಸೀಟುಗಳ ಈ ಸಲ ಧಕ್ಕಲಿವೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇಲ್ಲಿ ಪ್ರಬಲ ವಿರೋಧ ಪಕ್ಷವಾದ ಕಾಂಗ್ರೆಸ್ ಕೇವಲ 19 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇದೆ.
ವಿಪರ್ಯಾಸವೆಂದರೆ ಈ ಕಿತ್ತೂರು ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಜೆಡಿಎಸ್ ಠೇವಣಿ ಉಳಿಸಿಕೊಂಡರೆ ಹೆಚ್ಚು ಎಂಬಂತಾಗಿದೆ. ಕಾರಣ ಇಲ್ಲಿ ಜೆಡಿಎಸ್ ಹಾಗೂ ಇತೆರೆ ಪಕ್ಷಗಳು ಶತಯಗತಾಯ ಪ್ರತ್ನಿಸಿದರೂ ಒಂದೇ ಒಂದು ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಸಮೀಕ್ಷೆ ತಿಳಿಸಿದೆ.

ಬಿಜೆಪಿಗೆ ಲಿಂಗಾಯತರೇ ಇಲ್ಲಿ ವರದಾನ
ಕರ್ನಾಟಕ ರಾಜ್ಯದ ಬೃಹತ್ ಜಿಲ್ಲೆಯಲ್ಲಿ ಒಂದಾಗಿರುವ ಬೆಳಗಾವಿ ಜಿಲ್ಲೆಯೊಂದರಲ್ಲೇ 18 ವಿಧಾನಸಭಾ ಕ್ಷೇತ್ರಗಳು ಇವೆ. ಈ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಧಾರವಾಡ, ವಿಜಯಪುರ, ಹಾವೇರಿ, ಗದಗ, ಬಾಗಲೋಟೆ, ಉತ್ತರ ಕನ್ನಡದ ಸೇರಿ ಒಟ್ಟು ಏಳು ಜಿಲ್ಲೆಗಳು ಬರುತ್ತವೆ. ಆ ಜಿಲ್ಲೆಗಳಲ್ಲಿನ ಒಟ್ಟು 50 ವಿಧಾನಸಭಾ ಕ್ಷೇತ್ರಗಳಿದ್ದು, ಅಲ್ಲಿ ಲಿಂಗಾಯತರೇ ನೀರ್ಣಾಯಕ ಎನ್ನಲಾಗಿದೆ. ಇಲ್ಲಿ ಯಾವುದೇ ಪಕ್ಷ ಗೆಲ್ಲಲು ಲಿಂಗಾಯತ ಸಮುದಾಯದ ಮತಗಳು ಅತ್ಯವಶ್ಯಕ ಎಂಬುದು ಎಲ್ಲ ಪಕ್ಷಗಳಿಗೂ ಗೊತ್ತಿದೆ.
ಉತ್ತರ ಕನ್ನಡ ಜಿಲ್ಲೆ ಹೊರತಾಗಿ ಉಳಿದೆಲ್ಲ ಕಡೆಗಳಲ್ಲಿ ಲಿಂಗಾಯತರೇ ಹೆಚ್ಚಿದ್ದಾರೆ. ಹಾವೇರಿ ಭಾಗದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಳಗೊಂಡಂತೆ ಲಿಂಗಾಯತದ ಹಲವು ನಾಯಕರ ಪ್ರಾಬಲ್ಯ ಇಲ್ಲಿದೆ. ಹೀಗಾಗಿ ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಯದ್ದೇ ಅಗ್ರಸ್ಥಾನ ಎಂದು ಸಮೀಕ್ಷೆಯ ಅಂಶಗಳು ಖಚಿತಪಡಿಸಿವೆ.












Click it and Unblock the Notifications