Jan Ki Baat Pre Poll Survey: ಕರಾವಳಿ ಭಾಗದಲ್ಲಿ ಬಿಜೆಪಿ ಮುಂದು

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ ಪಕ್ಷಗಳು ತಮ್ಮ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಈವರೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಲಾ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯಾಗಬೇಕಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಭರದ ಸಿದ್ದತೆ ನಡೆಸಿವೆ. ಈ ನಡುವೆ ಇಂದು (ಏಪ್ರಿಲ್ 14) ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ವರದಿಯನ್ನು ಸುವರ್ಣ ನ್ಯೂಸ್ ಬಿಡುಗಡೆ ಮಾಡಿದೆ.

ನಿಖರ ನಂಬರ್‌ಗಳಿಗೆ ಹೆಸರುವಾಸಿಯಾಗಿರುವ ಜನ್‌ ಕೀ ಬಾತ್‌, ಈಗ 2023ರ ಚುನಾವಣಾ ಪೂರ್ವ ಸಮೀಕ್ಷೆ ಮಾಡಿದೆ. ಮತ್ತೆ ಅಧಿಕಾರದ ಗದ್ದುಗೆಗೆ ಬಿಜೆಪಿ ಏರುತ್ತಾ? ಕಾಂಗ್ರೆಸ್ ನಾಯಕರ ರಣತಂತ್ರ ವರ್ಕೌಟ್‌ ಆಗುತ್ತಾ? 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಜೆಡಿಎಸ್ ಕಥೆ ಏನು? ಎನ್ನುವುದರ ಬಗ್ಗೆ ಸಮಗ್ರವಾಗಿ ಜನ್‌ ಕೀ ಬಾತ್‌ ಸಮೀಕ್ಷೆ ತಿಳಿಸಲಿದೆ.

Jan Ki Baat Pre Poll Survey 16 Seat For BJP In Coastal districts

ಈ ಸಮೀಕ್ಷೆಯ ವರದಿ ಪ್ರಕಾರ ರಾಜ್ಯದ ಕರಾವಳಿಯ ಒಟ್ಟು 19 ಸ್ಥಾನಗಳ ಪೈಕಿ, ಬಿಜೆಪಿ 16, ಕಾಂಗ್ರೆಸ್ 03, ಜೆಡಿಎಸ್ ಯಾವುದೇ ಸ್ಥಾನವನ್ನು ಪಡೆಯುದಿಲ್ಲ. ಬಿಜೆಪಿ 16 ಸ್ಥಾನಗಳಲ್ಲಿ ಜಯ ಸಾಧಿಸಲಿದ್ದು ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆಯಲಿದ್ದು ಜೆಡಿಎಸ್ ಹೀನಾಯ ಸೋಲನ್ನು ಅನುಭವಿಸಲಿದೆ ಎನ್ನುತ್ತದೆ ಸಮೀಕ್ಷೆಯ ವರದಿ.

ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಎಂಟು, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿವೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು, ಮಂಗಳೂರು ನಗರ ದಕ್ಷಿಣ, ಮಂಗಳೂರು ನಗರ ಉತ್ತರ, ಬಂಟ್ವಾಳ, ಮೂಡಬಿದರೆ, ಸುಳ್ಯ, ಪುತ್ತೂರು, ಬೆಳ್ತಂಗಡಿ ಕ್ಷೇತ್ರವನ್ನು ಹೊಂದಿದೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಉಡುಪಿ, ಕಾರ್ಕಳ, ಕಾಪು, ಕುಂದಾಪುರ ಮತ್ತು ಬೈಂದೂರು ಕ್ಷೇತ್ರವನ್ನು ಹೊಂದಿದೆ.

Jan Ki Baat Pre Poll Survey 16 Seat For BJP In Coastal districts

ಚುನಾವಣೆಯಲ್ಲಿ ಪಕ್ಷ ಪಡೆದುಕೊಳ್ಳುವ ವೋಟ್ ಶೇರಿಂಗ್ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ ಹಂಚಿಕೆ ಶೇಕಡಾವಾರು ಉತ್ತಮಪಡಿಸಿಕೊಂಡಿದೆ. ಕಾಂಗ್ರೆಸ್ ಒಳ ಜಗಳ, ಕೆಲ ಕ್ಷೇತ್ರದಲ್ಲಿ ಆಡಳಿತವಿರೋಧಿ ಅಲೆ, ಇತ್ತ ಜೆಡಿಎಸ್ ಪ್ರಯತ್ನಗಳಿಂದ ಅತಂತ್ರ ವಿಧಾನಸಭಾ ಚುನಾವಣೆ ಸೃಷ್ಟಿಯಾಗಲಿದೆ ಅನ್ನೋದು ಸಮೀಕ್ಷೆ ಹೇಳುತ್ತಿದೆ. ಸ್ಥಾನಗಳ ಪೈಕಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿರುವ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಲಿದೆ ಎಂದಿದೆ. ಕಾಂಗ್ರೆಸ್ 89 ರಿಂದ 97 ಸ್ಥಾನ ಗೆಲ್ಲಲಿದೆ ಎಂದು ವರದಿ ಹೇಳುತ್ತಿದೆ. ಇತ್ತ ಜೆಡಿಎಸ್ 25 ರಿಂದ 29 ಹಾಗೂ ಇತರರ ಗರಿಷ್ಠ 1 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

2018ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಕಾಂಗ್ರೆಸ್ಸಿನ ಯು.ಟಿ.ಖಾದರ್ ಗೆಲುವು ಸಾಧಿಸಿದ್ದರು.ಇನ್ನು, ಮಂಗಳೂರು ದಕ್ಷಿಣದಿಂದ ವೇದವ್ಯಾಸ ಕಾಮತ್, ಉತ್ತರದಿಂದ ಡಾ.ಭರತ್ ಶೆಟ್ಟಿ, ಬೆಳ್ತಂಗಡಿಯಿಂದ ಹರೀಶ್ ಪೂಂಜಾ, ಮೂಡಬಿದರೆಯಿಂದ ಉಮಾನಾಥ ಕೋಟ್ಯಾನ್, ಬಂಟ್ವಾಳದಿಂದ ರಾಜೇಶ್ ನಾಯಕ್, ಪುತ್ತೂರಿನಿಂದ ಸಂಜೀವ ಮಠಂದೂರು ಆಯ್ಕೆಯಾಗಿದ್ದರು. ಇವೆರೆಲ್ಲರೂ ಬಿಜೆಪಿಯ ಅಭ್ಯರ್ಥಿಗಳಾಗಿದ್ದರು.

ಇನ್ನು, ಉಡುಪಿಯಲ್ಲಿ ರಘುಪತಿ ಭಟ್, ಕಾಪುವಿನಿಂದ ಲಾಲಾಜಿ ಮೆಂಡನ್, ಕಾರ್ಕಳದಿಂದ ಸುನೀಲ್ ಕುಮಾರ್, ಬೈಂದೂರಿನಿಂದ ಸುಕುಮಾರ್ ಶೆಟ್ಟಿ ಮತ್ತು ಕುಂದಾಪುರದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ ಆಯ್ಕೆಯಾಗಿದ್ದರು, ಎಲ್ಲರೂ ಬಿಜೆಪಿಯವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+