ಸದಾನಂದ ಗೌಡರಿಗೆ ಬೇಡಿಕೆಯ ಪಟ್ಟಿ ರವಾನಿಸಿದ ಶೆಟ್ಟರ್
ಹುಬ್ಬಳ್ಳಿ, ಜೂನ್ 12: ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕೇಂದ್ರದಲ್ಲಿ ರೈಲ್ವೆ ಖಾತೆ ಹಿಡಿದಿದ್ದೇ ರಾಜ್ಯದಲ್ಲಿ ಅನಾದಿಕಾಲದಿಂದಲೂ ಪಳೆಯುಳಿಕೆಗಳಂತೆ ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಮುಕ್ತಿ ಕಾಣಿಸುವ ಪ್ರಯತ್ನಗಳು ಜಾರಿಯಲ್ಲಿವೆ.
ನಾಡಿನ ಪ್ರಭಾವಿ ನಾಯಕರು ನಾಮುಂದು ತಾಮುಂದು ಎಂದು ಗೌಡರ ಮುಂದೆ ಅರ್ಜಿ ಹಿಡಿದು ನಿಂತಿದ್ದಾರೆ. ಇವೆಲ್ಲವಕ್ಕೂ ಗೌಡರು ಹಸಿರು ನಿಶಾನೆ ತೋರುತ್ತಾರಾ? ಜುಲೈ ಮೊದಲ ವಾರದಲ್ಲಿ ಅವರು ಮಂಡಿಸುವ ಬಜೆಟ್ಟಿನಲ್ಲಿ ಇದರ ಬಗ್ಗೆ ಸುಳಿವು ಸಿಗಲಿದೆ. ಹಾಗಾಗಿ ಈ ಬಾರಿಯ ರೈಲ್ವೆ ಬಜೆಟ್ ಹಿಂದೆಂದಿಗಿಂತಲೂ ಹೆಚ್ಚು ಕುತೂಹಲಕಾರಿಯಾಗಲಿದೆ.
ಇರಲಿ, ರಾಜ್ಯದ ಹಿತಾಸಕ್ತಿ ಕಾಯುವ ಸದುದ್ದೇಶದಿಂದ ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಭಾಗದಲ್ಲಿ ಆಗಬೇಕಿರುವ ರೈಲ್ವೆ ಕೆಲಸಗಳ ಬಗ್ಗೆ ರೈಲ್ವೆ ಸಚಿವ ಡಿವಿ ಸದಾನಂದ ಗೌಡ ಅವರಿಗೆ ಪತ್ರ ಬರೆದಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಬೇಡಿಕೆಯ ಪಟ್ಟಿಯಲ್ಲಿ ಸಹಜವಾಗಿಯೇ ತಮ್ಮ ಭಾಗದಲ್ಲಿನ ಬೆಳಗಾವಿ-ಕಿತ್ತೂರು-ಹುಬ್ಬಳ್ಳಿ, ಬಾಗಲಕೋಟ-ಕುಡಚಿ, ಗದಗ-ವಾಡಿ, ಬೆಂಗಳೂರು ವರ್ತುಲ ರೈಲ್ವೆ ಯೋಜನೆಗಳತ್ತ ರೌಂಡ್ಸ್ ಹೊಡೆದಿದ್ದಾರೆ.
ಇದು ಶೆಟ್ಟರ ಬೇಡಿಕೆಗಳೂ ಹೌದು ಮತ್ತು ಈ ಭಾಗದ ರೈಲ್ವೆ ದುಸ್ಥಿತಿಯ ಚಿತ್ರಣವೂ ಹೌದು. ಅದು ಹೀಗಿದೆ:

2. ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಗದಗ-ವಾಡಿ ರೈಲು ಯೋಜನೆ ಕಾರ್ಯಗತವಾದರೆ ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ಗುಲ್ಬರ್ಗ ನಡುವೆ ನೇರ ರೈಲು ಸಂಪರ್ಕ ಸಿಗಲಿದೆ. ಈ ಯೋಜನೆಯನ್ನು ತುರ್ತಾಗಿ ಕಾರ್ಯಗತಗೊಳಿಸಬೇಕಿದೆ. ಹುಬ್ಬಳ್ಳಿ-ಮುಂಬೈ ಶತಾಬ್ದಿ ಹೊಸ ರೈಲು ಆರಂಭಿಸುವ ಅಗತ್ಯವಿದೆ. ಈ ರೈಲು ಸೇವೆ ಆರಂಭಗೊಂಡರೆ ಜನರು ದುಬಾರಿ ವೆಚ್ಚದ ಬಸ್ ಪ್ರಮಾಣ ಮಾಡುವುದು ತಪ್ಪುತ್ತದೆ. ಸಮಯ ಉಳಿತಾಯವಾಗಲಿದೆ.
3. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಸಂಪರ್ಕಿಸುವ ಗದಗ-ಹಾವೇರಿ ಹೊಸ ರೈಲು ಮಾರ್ಗ, ಹುಬ್ಬಳ್ಳಿ-ಅಂಕೋಲ ರೈಲು ಮಾರ್ಗ, ಶಿವಮೊಗ್ಗ-ಬೀರೂರು ಯೋಜನೆ. ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗ ರಚನೆ ಮಾಡಿ ನೈರುತ್ಯ ರೈಲ್ವೆಯೊಂದಿಗೆ ಜೋಡಿಸಬೇಕು. ಏಕೆಂದರೆ ಕರ್ನಾಟಕದಲ್ಲಿಯೇ ಇದ್ದರೂ ಮಂಗಳೂರು ಹೊರ ರಾಜ್ಯ ವಲಯಕ್ಕೆ ಸೇರುವಂತಾಗಿದೆ.
ಇದನ್ನೂ ಓದಿ:
* ಸದಾನಂದ ಗೌಡ ಮುಂದೆ ಅರ್ಜಿ ಇಟ್ಟ ಯಡಿಯೂರಪ್ಪ
* ಆರೋಗ್ಯ ಸಚಿವ ಖಾದರ್ ರೈಲ್ವೆ ಆಲೋಚನೆಗಳೇನು?
4. ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ತುಲ ರೈಲು ಯೋಜನೆ ಆರಂಭಿಸುವ ಅಗತ್ಯ ಹೆಚ್ಚಿದೆ. ಇದರ ಜತೆಗೆ ಬೆಂಗಳೂರಿನಿಂದ ಸಮೀಪದ ನಗರ ಹಾಗೂ ಪಟ್ಟಣಗಳ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ರಾಮನಗರ, ತುಮಕೂರು, ಗೌರಿಬಿದನೂರು, ಬಾಗೇಪಲ್ಲಿ, ಮುಳಬಾಗಿಲು, ಬಂಗಾರಪೇಟೆ, ಆನೇಕಲ್, ಕನಕಪುರ, ಹಾಸನ ನಡುವೆ ಸಬ್ ಅರ್ಬನ್ ರೈಲು ಸೇವೆ ಆರಂಭಿಸುವ ಅಗತ್ಯವಿದೆ.
5. ಕಡೂರು-ಚಿಕ್ಕಮಗಳೂರು, ಕೋಲಾರ-ಚಿಕ್ಕಮಗಳೂರು, ಕೆಬಿ ಕ್ರಾಸ್ ನಿಂದ ತುರುವೇಕೆರೆಗೆ ಹೊಸ ರೈಲು ಮಾರ್ಗ, ವಾರಕ್ಕೊಮ್ಮೆ ಯಶವಂತಪುರ-ವೈಷ್ಣೋದೇವಿ ರೈಲು ಸೇವೆ, ಪ್ರತಿದಿನ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್, ಹುಬ್ಬಳ್ಳಿ-ಮುಂಬೈ ಎಕ್ಸ್ ಪ್ರೆಸ್ ರೈಲು ಹಾಗೂ ಹೈದರಾಬಾದ್-ಗುಲ್ಬರ್ಗ ಇಂಟರ್ ಸಿಟಿ ಆರಂಭಿಸುವಂತೆಯೂ ಶೆಟ್ಟರು ಪತ್ರದಲ್ಲಿ ಕೋರಿದ್ದಾರೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು-ಹಾಸನ ರೈಲು ಮಾರ್ಗ ತ್ವರಿತವಾಗಿ ಪೂರ್ಣಗೊಳಿಸಬೇಕು. ಹೈದರಾಬಾದ್- ಬೀದರ್ ಹೊಸ ರೈಲು ಯೋಜನೆ ಆರಂಭಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.












Click it and Unblock the Notifications