Bengaluru-Belagavi Flights: ಕೇಂದ್ರದ ಮುಂದೆ ಮಹತ್ವದ ಬೇಡಿಕೆ ಇಟ್ಟ ಜಗದೀಶ್ ಶೆಟ್ಟರ್

ಬೆಂಗಳೂರು, ಅಕ್ಟೋಬರ್ 16: ಬೆಳಗಾವಿ ಮತ್ತು ಬೆಂಗಳೂರು ಮಧ್ಯೆ ದೈನಂದಿನ ಏರ್‌ಲೈನ್ ಸೇವೆಯನ್ನು ರದ್ದುಗೊಳಿಸದಂತೆ ಹಾಗೂ ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್‌ಗೆ ಸಂಬಂಧಿಸಿದಂತೆ ದೀರ್ಘ ಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರು ಇಬ್ಬರು ಕೇಂದ್ರ ಸಚಿವರ ಬಳಿಕ ಅವರು ಮನವಿ ಮಾಡಿದರು.

ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಾಜಿ ಸಿಎಂ, ಎಂಪಿ ಜಗದೀಶ್ ಶೆಟ್ಟರ್ ಅವರು, ಬುಧವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

Jagadish Shettar Request to Central Dont Stop Indigo Flights Between Belagavi-Bengaluru

ಮೊದಲಿಗೆ ಜಗದೀಶ್ ಶೆಟ್ಟರ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ. ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್‌ ಜಾಗವನ್ನು/ಜಮೀನನ್ನು ನಿಯಮಗಳ ಬೆಳಗಾವಿ ಮಹಾನಗರ ಪಾಲಿಕೆ ಬಿಟ್ಟುಕೊಡಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಸಂಸದರು ಕೋರಿದರು.

ಬೆಳಗಾವಿಯ ಈ ದೀರ್ಘಕಾಲದ ಬೇಡಿಕೆ ಕೇಳಿ ಬರುತ್ತಿದೆ. ರಕ್ಷಣಾ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ನಾಗರಿಕ ಪ್ರದೇಶಗಳನ್ನು ಬೆಳಗಾವಿ ನಗರ ಪಾಲಿಕೆಗೆ ವರ್ಗಾಯಿಸಲು ಪ್ರಸ್ತಾವನೆ ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ, ಕಂಟೋನ್ಮೆಂಟ್ ಬೋರ್ಡ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಅವರು ಕೋರಿದ್ದಾರೆ. ಇದಕ್ಕೆ ರಾಜನಾಥ್ ಸಿಂಗ್ ಅವರು ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಳಗಾವಿ-ಬೆಂಗಳೂರು ವಿಮಾನ ಸೇವೆ ರದ್ದಾಗದಂತೆ ಮನವಿ

ಬೆಳಗಾವಿ ಮತ್ತು ಬೆಂಗಳೂರು ಮಧ್ಯದ ದೈನಂದಿನ ಬೆಳಗಿನ ವಿಮಾನವನ್ನು ಏರ್‌ಲೈನ್ಸ್ ರದ್ದುಗೊಳಿಸಲು ನಿರ್ಧರಿಸಿದೆ. ಈ ಮಾರ್ಗದಲ್ಲಿ ಶೇಕಡಾ 82ರಷ್ಟು ಭರ್ತಿಯಾಗಿ ಸೇವೆ ನೀಡುತ್ತಿರುವ ಇಂಡಿಗೋ ವಿಮಾನ ರದ್ದಾದರ ಪ್ರಯಾಣಿಕರಿಗೆ ಸಾಕಷ್ಟು ಅನನುಕೂಲವಾಗಲಿದೆ. ಆದ್ದರಿಂದ ಸೇವೆ ನಿಲ್ಲಸದೇ ಮುಂದುವರಿಸಬೇಕು. ಈ ನಿಟ್ಟಿನಲ್ಲಿ ಇಂಡಿಯೋ ಅಧಿಕಾರಿಗಳು ನಿರ್ದೇಶಿಸುವಂಗತೆ ಅವರು ಕೋರಿದರು.

ಬೆಳಗಾವಿಯಿಂದ ಪುಣೆ, ಚೆನ್ನೈ, ಕೊಚ್ಚಿ ಮತ್ತು ಮುಂಬೈನಂತಹ ಇತರ ನಗರಗಳಿಗೆ ವಿಮಾನ ಸೇವೆಗಳನ್ನು ವಿಸ್ತರಿಸುವ ಬಗ್ಗೆಯೂ ಸಚಿವರೊಂದಿಗೆ ಚರ್ಚಿಸಲಾಯಿತು. ಬೆಳಗಾವಿ ವಿಮಾನ ನಿಲ್ದಾಣ ಸೇರಿದಂತೆ UDAN 3.0 ಯೋಜನೆಯನ್ನು ಇನ್ನೂ 10 ವರ್ಷಗಳವರೆಗೆ ವಿಸ್ತರಿಸಲು ಮನವಿ ಮಾಡಿಕೊಂಡಿದ್ದೇನೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಹೊಸ ವಿಮಾನಗಳ ಸೇವೆ ಶೀಘ್ರ

ಇಂಡಿಗೋ ವಿಮಾನ ಸೇವೆ ರದ್ದತಿಯು ಗುತ್ತಿಗೆಯ ಮುಕ್ತಾಯದ ಕಾರಣದಿಂದಾಗಿದೆ ಎಂಬ ಮಾಹಿತಿ ಇದೆ. ಡಿಸೆಂಬರ್‌ ನಿಂದ ಬೆಳಗಾವಿಯಿಂದ ಹೊಸ ವಿಮಾನಗಳು ಬೆಳಗಾವಿಯಿಂ ಸೇವೆ ನೀಡುವಂತೆ ತಿಳಿಸಲಾಗುವುದು ಎಂದು ಸಚಿವರು ನೀಡಿದ ಭರವಸೆ ಕುರಿತು ಸಂಸದರು ಮಾಹಿತಿ ನೀಡಿದ್ದಾರೆ.

ಇತ್ತಿಚೆಗೆ ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ವರೆಗೆ ವಿಸ್ತರಣೆಮಾಡುವಂತೆ ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬೇಟಿ ಮಾಡಿ ಸಂಸದರು ಮನವಿ ಮಾಡಿದ್ದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+