ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಒಪ್ಪಿಕೊಂಡ್ರಾ ಜಗದೀಶ್ ಶೆಟ್ಟರ್

ಬೆಂಗಳೂರು, ಡಿಸೆಂಬರ್ 10: ಕರ್ನಾಟಕ ರಾಜ್ಯ ಕಾಂಗ್ರೆಸ್‌ ನಲ್ಲಿ ಎಲ್ಲವು ಸರಿ ಇಲ್ಲ ಎಂಬ ವಿಚಾರ, ರಾಜಕಾರಣ ಎಂದರೆ ಹಾಗೇ ಏನು ಮಾಡಲು ಆಗುವುದಿಲ್ಲ. ಎಲ್ಲದವರ ಬಗ್ಗೆ ಮುಖ್ಯಮಂತ್ರಿಗಳು, ಪಕ್ಷ ರಾಜ್ಯಾಧ್ಯಕ್ಷ ತಿರ್ಮಾನಿಸುತ್ತಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪರೋಕ್ಷವಾಗಿ ಪಕ್ಷಲ್ಲಿ ಎಲ್ಲ ಸರಿಯಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಭಾನುವಾರ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಸಮಾಧಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮುಖ್ಯಮಂತ್ರಿ, ರಾಜ್ಯದ ಅಧ್ಯಕ್ಷರು ಕಾಳಜಿ ತೆಗೆದುಕೊಳ್ಳುತ್ತಾರೆ.

Jagadish Shettar Reaction about Congress BK Hariprasad unhappy, Shettar Slams on BJP

ಅವರನ್ನು ಕರೆದು ಮಾತನಾಡಿಸಿ ಸರಿ ಮಾಡುವ ಕೆಲಸ ಮಾಡುತ್ತಾರೆ. ರಾಜಕಾರಣ ಅಂದರೆ ಹಾಗೆ, ಏನು ಮಾಡಲಿಕ್ಕಾಗುವುದಿಲ್ಲ ಎಂದು ಹೇಳಿದರು.

ಪಕ್ಷವೆಂದ ಮೇಲೆ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ರೀತಿಯಾಗಿರುತ್ತದೆ. ಅಂತಹ ಯಾವುದೇ ಸಮಸ್ಯೆ ಇದ್ದರೂ ಸಿಎಂ ಸರಿಪಡಿಸುವ ಕೆಲಸ ಮಾಡುತ್ತಾರೆ. ಈಡಿಗ ಸಮಾವೇಶ ರಾಜಕೀಯ ಪ್ರೇರಿತ ಎಂಬ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರ

ಅದಕ್ಕೆ ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಅಧ್ಯಕ್ಷರು ಉತ್ತರ ಕೊಡುತ್ತಾರೆ. ನಾನು ಏನು ಮಾಡಬೇಕು ಎಂದರು.

Jagadish Shettar Reaction about Congress BK Hariprasad unhappy, Shettar Slams on BJP

ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ?

ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂಬ ಕಾರಣದಿಂದಲೇ ಅಧಿಕಾರ ಕಳೆದುಕೊಂಡರು. ನಾವು ಭ್ರಷ್ಟಾಚಾರ ಮಾಡಿಲ್ಲ ಅಂತ ಸಾಬೀತುಪಡಿಸಲು ಅವರಿಗೆ ಆಗಲಿಲ್ಲ. ಕೋಟ್ಯಾಂತರ ರೂಪಾಯಿ ಬಿಜೆಪಿ ಅವರು ಖರ್ಚು ಮಾಡುತ್ತಾರಲ್ಲ. ಅವರೇನು ಸತ್ಯ ಹರಿಶ್ಚಂದ್ರರಾ? ಎಂದು ಕಾಂಗ್ರೆಸ್‌ಗೆ ಸಿಸಿ ಸರ್ಕಾರ ಎಂದು ಪ್ರಹ್ಲಾದ್ ಜೋಶಿಗೆ ತಿರುಗೇಟು ನೀಡಿದರು.

ಬಿಜೆಪಿಯವರು ಖರ್ಚು ಮಾಡುವ ಹಣ ಎಲ್ಲಿಂದ ಬರುತ್ತದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿ ಅವರಿಗೆ ಯಾವುದೇ ನೈತಿಕತೆ ಇಲ್ಲ. ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಜಯಶ್ರೀರಾಮ್ ಎಂದಿದ್ದರ ಬಗ್ಗೆ ನಾನು ಅದಕ್ಕೆ ರಾಜಕಾರಣ ಎಂದು ಹೇಳುತ್ತೇನೆ. ಅಲ್ಲದೇ ರಾಜಕಾರಣದಲ್ಲಿ ಯಾವಾಗ ಏನಾಗುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಮಾರ್ಮಿಕವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

130 ಸ್ಥಾನ ಎಂದು 60ಕ್ಕೆ ಇಳಿದರು

ಲೋಕಸಭೆ ನಂತರ ಕಾಂಗ್ರೆಸ್ ಸರ್ಕಾರ ಇರೋದಿಲ್ಲ ಎಂಬ ವಿಪಕ್ಷ್ ನಾಯಕರ ಹೇಳಿಕೆ ವಿಚಾರ, ಬಿಜೆಪಿಯವರಿಗೆ ಅಧಿಕಾರಿ ಕಳೆದುಕೊಂಡ ಮೇಲೆ ನಮ್ಮನ್ನು ನೋಡಿ ಸಹಿಸಿಕೊಳ್ಳಲಾಗುತ್ತಿಲ್ಲ. 130 ಸ್ಥಾನ ಗೆಲ್ಲುತ್ತೇವೆ ಎಂದವರು 60 ಸ್ಥಾನಕ್ಕೆ ಇಳಿದರು. ಹೀಗಾಗಿ ಬಿಜೆಪಿಯವರು ನೀರಿನಿಂದ ಹೊರಗೆ ಬಿದ್ದ ಮೀನು ಒದ್ದಾಡುವ ರೀತಿ ಒದ್ದಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಬೀಳಲಿದೆ ಎಂದು ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ. ಶಾಸಕ ಬನಗೌಡ ಪಾಟೀಲ್ ಯತ್ನಾಳ್ ಅವರು ಯಡಿಯೂರಪ್ಪ ಕುಟುಂಬವನ್ನು ಟೀಕೆ ಮಾಡುತ್ತಿದ್ದಾರೆ.

ನನ್ನನ್ನು ಕಡೆಗಣಿಸಲು ಕಾರಣವನ್ನು ಯತ್ನಾಳ್ ಅವರೇ ಉತ್ತರ ಕೊಟ್ಟಿದ್ದಾರೆ. ಬಿಜೆಪಿ ಅಧೋಗತಿಗೆ ಹೋಗುತ್ತಿದೆ ಎಂದು ಲೇವಡಿ ಮಾಡಿದರು.

ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರು, ಪ್ರತಿಪಕ್ಷ ನಾಯಕ ಆದರೂ ರಿಪೇರಿ ಮಾಡದಷ್ಟು ದುರಸ್ತಿಯಾಗಿದೆ. ಅದನ್ನ ರಿಪೇರಿ ಮಾಡಲು ಸಾಧ್ಯವೇ ಇಲ್ಲ ಅದರ ಪರಿಣಾಮ ಈಗ ನೋಡುತ್ತಿದ್ದೇವೆ. ಇವರಿಗೆ ಸರ್ಕಾರ ಎದುರಿಸಲು ಆಗುತ್ತಿಲ್ಲ ಎಂದು ಶೆಟ್ಟರ್ ತೀವ್ರ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+