ಡಿಕೆ ಶಿವಕುಮಾರ್ ಆಪ್ತರಿಗೆ ಮತ್ತಷ್ಟು ಐಟಿ ಶಾಕ್
ಹಾಸನ/ನವದೆಹಲಿ, ಆಗಸ್ಟ್ 3: ಎರಡನೇ ದಿನವೂ ಇಂಧನ ಸಚಿವ ಡಿ.ಕೆ ಶಿವಕುಮಾರ್ ಆಪ್ತರಿಗೆ ಐಟಿ ಶಾಕ್ ತಟ್ಟಿದೆ. ಬುಧವಾ ಬೆಳಿಗ್ಗೆ ಹಲವಾರು ಜನ ಡಿ.ಕೆ ಶಿವಕುಮಾರ್ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸಂಜೆ ಹೊತ್ತಿಗೆ ಮತ್ತಷ್ಟು ಜನರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಬುಧವಾರ ರಾತ್ರಿ ಮಾಜಿ ಸಚಿವ ಬಿ. ಶಿವರಾಂ ಅಳಿಯ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್ ಮನೆ ಮೇಲೆ ದಾಳಿ ನಡೆದಿದೆ. ಸಚಿನ್ ನಾರಾಯಣ್ ಅವರ ಮನೆ, ಹೋಟೆಲ್, ಪೆಟ್ರೋಲ್ ಬಂಕ್ ಮೇಲೆ ದಾಳಿ ನಡೆದಿದೆ. ಎರಡು ಕಾರಿನಲ್ಲಿ ಬಂದ ಐಟಿ ಅಧಿಕಾರಿಗಳು ದಾಖಲೆಗಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ.

ಇನ್ನು ಇಂದು ದೆಹಲಿಯ ಸಫ್ದರ್ ಜಂಗ್ ಮತ್ತು ಆರ್.ಕೆ ಪುರಂನಲ್ಲಿರುವ ಡಿಕೆ ಶಿವಕುಮಾರ್ ಮನೆ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.












Click it and Unblock the Notifications