Yuva Nidhi: ಯುವನಿಧಿ ಪಡೆಯಲು ಪ್ರತಿ ತಿಂಗಳು ಈ ದಾಖಲೆ ಸಲ್ಲಿಸುವುದು ಕಡ್ಡಾಯ

ಬೆಂಗಳೂರು, ಫೆಬ್ರವರಿ 15: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಯುವ ನಿಧಿ ಯೋಜನೆ ಆರಂಭವಾಗಿ ಒಂದು ತಿಂಗಳು ಕಳೆಯುತ್ತಿದ್ದು, ನೊಂದಣಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಪ್ರತಿ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವ ನಿಧಿ ಯೋಜನೆಗೆ ನೊಂದಣಿ ಮಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಯುವನಿಧಿ ಯೋಜನೆಯನ್ನು ವಿದ್ಯಾವಂತ ನಿರುದ್ಯೋಗಿಗಳಿಗೆ ನೀಡುತ್ತಿದ್ದು, 2022-23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ವೃತ್ತಿಪರ ಕೋರ್ಸ್‌ ಒಳಗೊಂಡು ಎಲ್ಲಾ ಪದವೀಧರರು ಈ ಯುವನಿಧಿ ಯೋಜನೆ ಪಡೆಯಲು ಅರ್ಹರಾಗಿದ್ದಾರೆ.

It Is Mandatory To Submit This Document Every Month To Get Yuva Nidhi Scheme

ಪದವೀಧರರಿಗೆ 3,000 ರೂಪಾಯಿ ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸರ್ಕಾರದಿಂದ ಸಿಗಲಿದೆ. ಈ ಭತ್ಯೆಯು ಅಭ್ಯರ್ಥಿಗೆ ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ವರೆಗೆ ಸರ್ಕಾರ ನೀಡಲಿದೆ. ಆದರೆ ಅರ್ಜಿದಾರರಿಗೆ ಸರ್ಕಾರದಿಂದ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಈ ಹಿಂದೆ ನೀಡಿದ್ದ ಷರತ್ತುಗಳ ಜೊತೆಗೆ ಇನ್ನೊಂದು ಮುಖ್ಯವಾದ ಕರಾರು ಹಾಕಲಾಗಿದೆ.

ಯುವ ನಿಧಿ ಯೋಜನೆಯ ಫಲಾನುಭವಿಗಳು ಈ ಯೋಜನೆಯಡಿ ಪ್ರತಿ ತಿಂಗಳು ಹಣ ಪಡೆಯಬೇಕೆಂದರೆ ಪ್ರತಿ ತಿಂಗಳು ನಮಗೆ ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂದು ಸ್ವಯಂ ಘೋಷಿಸಿದ ಪ್ರಮಾಣ ಪತ್ರವನ್ನು ನಿಗದಿತ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ ಮಾಡಬೇಕು. ಒಂದು ವೇಳೆ ಯಾವುದಾರೂ ಒಂದು ತಿಂಗಳು ಈ ಪ್ರಮಾಣ ಪತ್ರವನ್ನು ಅಪ್ಲೋಡ್‌ ಮಾಡದೇ ಇದ್ದರೆ, ಯುವ ನಿಧಿ ಯೋಜನೆಯಿಂದ ಬರುವ ಹಣ ಸ್ಥಗಿತಗೊಳ್ಳಿದೆ.

ಯುವನಿಧಿಗೆ ಇರುವ ಷರತ್ತುಗಳೇನು..?

ರಾಜ್ಯ ಸರ್ಕಾರದಿಂದ ನೀಡುವ ಈ ಯುವ ನಿಧಿ ಯೋಜನೆ ಹಣ ಪದವಿ ಅಥವಾ ಡಿಪ್ಲೊಮಾ ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದೆ ಉದ್ಯೋಗ ಅರಸುತ್ತಿರುವವರಿಗರ ಸಿಗಲಿದೆ, ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್‌ ಅಥವಾ ಬೆಂಗಳೂರು ಒನ್‌, ಗ್ರಾಮ ಒನ್‌ನಲ್ಲಿ ಅರ್ಜಿ ಸಲ್ಲಿಸಬೇಕು .ಈ ಯೋಜನೆ ಒಬ್ಬ ಅಭ್ಯರ್ಥಿಗೆ ಎರಡು ವರ್ಷ ಮಾತ್ರ ಸಿಗಲಿದ್ದು, ಎರಡು ವರ್ಷದ ಮಧ್ಯದಲ್ಲಿ ಅಭ್ಯರ್ಥಿಗೆ ಉದ್ಯೋಗ ಸಿಕ್ಕರೆ ಸರ್ಕಾರದಿಂದ ಬರುವ ಹಣ ಸ್ಥಗಿತಗೊಳ್ಳಿದೆ. ಒಂದು ವೇಳೆ ಉದ್ಯೋಗ ದೊರೆತ ನಂತರ ಅಭ್ಯರ್ಥಿ ಸರ್ಕಾರಕ್ಕೆ ತಿಳಿಸದೇ ಯುವ ನಿಧಿ ಯೋಜನೆಯ ಹಣ ಪಡೆದರೆ, ಅಂತವರ ವಿರುದ್ಧ ಕ್ರಮವಾಗಲಿದ್ದು, ಸರ್ಕಾರ ಭಾರೀ ಮೊತ್ತದ ದಂಡ ವಿಧಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+