ದ್ವೇಷ ರಾಜಕಾರಣಕ್ಕೆ ಅಂತ್ಯ ಹಾಡಿದ ಡಿ.ಕೆ.ಶಿವಕುಮಾರ್?
ಬೆಂಗಳೂರು: ಕರ್ನಾಟಕ ಎಂದೆಂದಿಗೂ ಶಾಂತಿ ಪ್ರಿಯರ ನಾಡು, ಕನ್ನಡಿಗರು ಎಂದೆಂದಿಗೂ ರಕ್ತ ರಾಜಕೀಯ ಒಪ್ಪಿಲ್ಲ. ಅಕ್ಕಪಕ್ಕದ ರಾಜ್ಯದಲ್ಲಿ 'ಕೈ ತೆಗಿ, ಕಾಲು ತೆಗಿ' ರಾಜಕೀಯ ಇದ್ದರೂ ನಮ್ಮ ರಾಜ್ಯಕ್ಕೆ ಅದೆಲ್ಲಾ ಎಂದಿಗೂ ಕಾಲಿಟ್ಟಿಲ್ಲ. ಆದ್ರೆ ರಾಜಕೀಯ ನಾಯಕರ ನಡುವೆ ಮುನಿಸು ಸಹಜವಾಗಿ ಇತ್ತು, ಈಗ ಅದನ್ನೂ ಅಂತ್ಯಗೊಳಿಸಲು ಡಿ.ಕೆ.ಶಿವಕುಮಾರ್ ಹೊಸ ಹೆಜ್ಜೆ ಇಟ್ಟರಾ? ಎಂಬ ಚರ್ಚೆ ಶುರುವಾಗಿದೆ.
ರಾಜ್ಯದ ನೂತನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಪಟ್ಟ ಪಡೆದಿರುವ ಡಿ.ಕೆ.ಶಿವಕುಮಾರ್ ಇದೀಗ ವಿಪಕ್ಷ ನಾಯಕರ ಜೊತೆಗೂ ಸಹನೆ, ತಾಳ್ಮೆಯಿಂದ ಮಾತನಾಡುತ್ತಿದ್ದಾರೆ. ಇಷ್ಟೇ ಅಲ್ಲ ವಿಪಕ್ಷ ನಾಯಕರ ಜೊತೆಗೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಮತ್ತೊಂದ್ಕಡೆ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದೆಲ್ಲ ರಾಜ್ಯದಲ್ಲಿ ದ್ವೇಷ ರಾಜಕೀಯಕ್ಕೆ ಅಂತ್ಯ ಹಾಡುವ ಪ್ರಯತ್ನವಾ? ಎಂಬ ಚರ್ಚೆ ಹುಟ್ಟುಹಾಕಿದೆ.

ಅಶೋಕ್, ಬೊಮ್ಮಾಯಿ ಜೊತೆ ಡಿಕೆಶಿ ಸ್ಮೈಲ್!
ವಿಧಾನಸಭೆ ಅಧಿವೇಶನ ಆರಂಭವಾದ ಮೊದಲ ದಿನವೇ ವಿರೋಧ ಪಕ್ಷಗಳ ನಾಯಕರ ಜೊತೆ ನಗುನಗುತ್ತಾ ಮಾತನಾಡಿದರು ಡಿ.ಕೆ.ಶಿವಕುಮಾರ್. ಅದರಲ್ಲೂ ತಮ್ಮ ವಿರುದ್ಧ ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂತಿದ್ದ ಆರ್.ಅಶೋಕ್ ಜೊತೆ ನಿಂತು ಫೋಟೋ ತೆಗೆಸಿಕೊಂಡ್ರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅಶೋಕ್ ಅವರಿಗೆ ಸಾಥ್ ನೀಡಿದರು. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡಿಸೈನ್ ಡಿಸೈನ್ ಕಮೆಂಟ್ಸ್ ಬರುತ್ತಿವೆ.
ಡಿಕೆಶಿ ಗೆಲ್ಲಲ್ಲ ಎಂದಿದ್ದ ಬಿಜೆಪಿ, ಡಿಸಿಎಂ ಆದ್ರು!
ಚುನಾವಣೆಗೆ ಮೊದಲು ಬಿಜೆಪಿ ನಾಯಕರು ಪೂರ್ಣ ಬಹುಮತದ ಸರ್ಕಾರ ರಚಿಸುವ ಹುಮ್ಮಸ್ಸು ಹೊಂದಿದ್ದರು. ಆಗ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಕ್ಷೇತ್ರ ಟಾರ್ಗೆಟ್ ಮಾಡಿ ಈ ಬಾರಿ ಇವರು ಗೆಲ್ಲಲ್ಲ ಅಂತಾ ಚುನಾವಣೆಗೆ ಮೊದಲೇ ಭವಿಷ್ಯ ಹೇಳಿದ್ರು. ಕೇಂದ್ರದ ಬಿಜೆಪಿ ಲೀಡರ್ಸ್ ವಿರುದ್ಧ ಮಾತಾಡಿದ ಕಾರಣಕ್ಕೆ ಡಿಕೆ ಬ್ರದರ್ಸ್ ಮೊದಲ ಟಾರ್ಗೆಟ್ ಆಗಿದ್ರು ಅನ್ನೋ ಆರೋಪ ಇತ್ತು. ಆರೋಪ, ಪ್ರತ್ಯಾರೋಪ ಓಡಾಡುವಾಗಲೇ ಡಿ.ಕೆ. ಶಿವಕುಮಾರ್ ಭರ್ಜರಿ ವಿಜಯ ಸಾಧಿಸಿ ಡಿಸಿಎಂ ಪಟ್ಟಕ್ಕೂ ಆಯ್ಕೆಯಾಗಿದ್ದಾರೆ. ಅಲ್ಲದೆ ದ್ವೇಷದ ರಾಜಕಾರಣಕ್ಕೂ ಎಂಡಿಂಗ್ ಹಾಡುತ್ತಿದ್ದಾರೆ.

7 ಗೆಲುವಿನ ಸರದಾರನಿಗೆ 8ನೇ ದಿಗ್ವಿಜಯ!
ಕನಕಪುರದಲ್ಲಿ ಸತತ 7 ಗೆಲುವು ಸಾಧಿಸಿದ್ದ ಡಿ.ಕೆ.ಶಿವಕುಮಾರ್ ಸೋಲಿಸಲು ಬಿಜೆಪಿಯ ರಾಷ್ಟ್ರೀಯ ನಾಯಕರು ತೊಡೆತಟ್ಟಿ ನಿಂತಿದ್ದರು. ಹೀಗಾಗಿ ಆರ್.ಅಶೋಕ್ ಅವರಂಥ ಪ್ರಬಲ ಅಭ್ಯರ್ಥಿಯನ್ನ ಈ ಕ್ಷೇತ್ರಕ್ಕೆ ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಒಕ್ಕಲಿಗ ಅಭ್ಯರ್ಥಿ VS ಒಕ್ಕಲಿಗ ಅಭ್ಯರ್ಥಿ ಸ್ಟ್ರಾಟಜಿ ಮೂಲಕ ಡಿಕೆ ಶಿವಕುಮಾರ್‌ಗೆ ಸೋಲಿನ ರುಚಿ ತೋರಿಸುವ ಲೆಕ್ಕಾಚಾರ ಹಾಕಿಕೊಂಡಿದ್ದರು ಬಿಜೆಪಿ ನಾಯಕರು. ಆದರೆ ಆ ಎಲ್ಲಾ ತಂತ್ರ, ರಣತಂತ್ರ ಠುಸ್ ಪಟಾಕಿ ಆಗಿ, ಡಿ.ಕೆ. ಶಿವಕುಮಾರ್ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಬೀಗಿದರು. ಆದರೂ ಈಗ ಆರ್.ಅಶೋಕ್ ಅವರ ಜೊತೆ ನಗುನಗುತ್ತಾ ಮಾತನಾಡಿದ್ದಾರೆ ಡಿಕೆಶಿ.
ಕನಕಪುರ ಬಿಟ್ಟು ಕದಲದ ಅಶೋಕ್!
ಆರ್.ಅಶೋಕ್ ದಿಲ್ಲಿ ವರಿಷ್ಠರ ಮಾತಿಗೆ ಅದೆಷ್ಟು ಬೆಲೆ ಕೊಟ್ಟಿದ್ದರು ಎಂದರೆ, ತಮ್ಮ ತವರು ಪದ್ಮನಾಭ ಕ್ಷೇತ್ರದ ಕಡೆ ಅಷ್ಟಾಗಿ ಗಮನ ಹರಿಸದೆ ಸಂಪೂರ್ಣವಾಗಿ ಕನಕಪುರ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ಕನಕಪುರದ ಪ್ರತಿ ಗಲ್ಲಿ ಗಲ್ಲಿ ಸುತ್ತಿ ಮತ ಕೇಳಿದ್ದರು. ಆದರೆ ಇದ್ಯಾವುದೂ ಗೆಲುವು ತಂದುಕೊಡಲಿಲ್ಲ ಬದಲಾಗಿ ಮತ್ತೊಮ್ಮೆ ಡಿಕೆಶಿ ಭರ್ಜರಿ ಗೆಲುವು ಸಾಧಿಸಿ ಇದೀಗ ಕರ್ನಾಟಕ ಸರ್ಕಾರದಲ್ಲಿ ಡಿಸಿಎಂ ಸ್ಥಾನ ಪಡೆದಿದ್ದಾರೆ. ಚುನಾವಣೆಗೆ ಮೊದಲು ತಮ್ಮದೇ ಕ್ಷೇತ್ರಕ್ಕೆ ಬಂದು, ತಮ್ಮ ವಿರುದ್ಧ ಪ್ರಚಾರ ಮಾಡಿದ್ದವರ ಜೊತೆಯಲ್ಲೂ ಸ್ಮೈಲ್ ನೀಡಿ ಫೋಟೋ ತೆಗೆಸಿಕೊಂಡಿದ್ದಾರೆ ಡಿಕೆಶಿ.
ಒಟ್ನಲ್ಲಿ ರಾಜ್ಯ ರಾಜಕೀಯದಲ್ಲಿ ಹೊಸ ಬದಲಾವಣೆಗಳು ಆರಂಭವಾದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಈ ಬಾರಿಯ ಸರ್ಕಾರದಲ್ಲಿ ಹೊಸತನ ತರಲು ಡಿ.ಕೆ. ಶಿವಕುಮಾರ್ ಯತ್ನಿಸುತ್ತಿದ್ದಾರೆ. ಆದರೆ ಈ ಹೊಸತನ & ವಿಪಕ್ಷಗಳ ನಡುವಿನ ಗೆಳತನ ಎಷ್ಟು ದಿನ ಇರುತ್ತೆ ಅನ್ನೋದನ್ನ ಕಾದು ನೋಡಬೇಕು. ಯಾಕಂದ್ರೆ ಎಲೆಕ್ಷನ್ ಬಂದ್ರೆ ಎಲ್ಲವೂ ಉಲ್ಟಾ ಆಗೋದು ಪಕ್ಕಾ. ಇನ್ನೇನು 2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ












Click it and Unblock the Notifications