'ಶಿವಮೊಗ್ಗದಲ್ಲಿ ಮಾತ್ರ ಬೇಸಿಗೆಯಾ?' ಕಾರ್ಯಕರ್ತರಿಗೆ ರಾಹುಲ್ ಪ್ರಶ್ನೆ!
Recommended Video

ಶಿವಮೊಗ್ಗ, ಏಪ್ರಿಲ್ 06: 'ನಿಮ್ಮ ಜಿಲ್ಲೆಯಲ್ಲಿ ಮಾತ್ರ ಬೇಸಿಗೆಯಾ..?!' ಹಾಗಂತ ಕಾಂಗ್ರೆಸ್ ಪಕ್ಷದ ಶಿವಮೊಗ್ಗ ವಿಭಾಗದ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ ರಾಹುಲ್ ಗಾಂಧಿ!
ಇದೇನು ಕಾಂಗ್ರೆಸ್ ಅಧ್ಯಕ್ಷರ ಹೊಸ ಎಡವಟ್ಟು ಎಂದುಕೊಳ್ಳಬೇಡಿ. ಇದು ಖಂಡಿತ ಎಡವಟ್ಟಲ್ಲ. ಇತ್ತೀಚೆಗೆ ರಾಹುಲ್ ಗಾಂಧಿಯವರು ಶಿವಮೊಗ್ಗದಲ್ಲಿ ನಡೆಸಿದ ರೋಶ್ ಶೋ ಜನರನ್ನು ಸೆಳೆಯುವಲ್ಲಿ ವಿಫಲವಾದ ಕುರಿತು ಬೇಸರ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
ಇದಕ್ಕೆ ಉತ್ತರ ನೀಡಿದ ಕಾರ್ಯಕರ್ತರು, 'ಈಗ ಬೇಸಿಗೆಯಾದ್ದರಿಂದ ಬಿಸಿಲ ಝಳ ಹೆಚ್ಚಿದೆ. ಅದಕ್ಕೆಂದೇ ಹೆಚ್ಚಿನ ಜನ ರೋಡ್ ಶೋ ಗೆ ಬಂದಿಲ್ಲ' ಎಂದು ಉತ್ತರಿಸಿದ್ದಾರೆ. ಇದರಿಂದ ಕೋಪಕೊಂಡ ರಾಹುಲ್ ಗಾಂಧಿ, 'ನಿಮ್ಮ ಜಿಲ್ಲೆಯಲ್ಲಿ ಮಾತ್ರ ಬೇಸಿಗೆಯಾ? ಇಡೀ ದೇಶದಲ್ಲೂ ಬಿಸಿಲ ಝಳ ಇದೆ' ಎಂದು ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರತಿಯೊಂದು ಜಿಲ್ಲೆಯ ಕಾರ್ಯಕರ್ತರೂ ಆಯಾ ಜಿಲ್ಲೆಯ ಪ್ರಮುಖ ಸಮಸ್ಯೆಗಳ ಬಗ್ಗೆ, ಅಲ್ಲಿನ ಜನರ ನಿರೀಕ್ಷೆಯ ಬಗ್ಗೆ ಗಮನಹರಿಸುವಂತೆ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಮೇ 12 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಫಲಿತಾಂಶ ಮೇ.15 ರಂದು ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರು ರಾಜ್ಯದ ನಾನಾ ಜಿಲ್ಲೆಗಳಲ್ಲಿ ನಿರಂತರವಾಗಿ ಸಮಾವೇಷ ನಡೆಸುತ್ತಿದ್ದಾರೆ.












Click it and Unblock the Notifications