Get Updates
Get notified of breaking news, exclusive insights, and must-see stories!

ಕರ್ನಾಟಕ ಬಿಜೆಪಿ ಮೇಲೆ ಬಿಎಲ್‌ ಸಂತೋಷ್‌ ಹಿಡಿತ: ಕೇಸರಿ ಪಾಳಯಕ್ಕೆ ಕೈಕೊಟ್ಟ 'ಮೊಸ್ಟ್‌ ಸಿಕ್ರೆಟ್‌ ಪೊಲಿಟಿಕ್ಸ್‌'

ಬೆಂಗಳೂರು, ಮೇ 14: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿದೆ. ಆಡಳಿತಾರೂಢ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. 65 ಸ್ಥಾನಗಳನ್ನು ಪಡೆದುಕೊಂಡ ಬಿಜೆಪಿಯಲ್ಲಿ ಈಗ ಆತ್ಮವಿಮರ್ಶೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ( ಸಂಘಟಣೆ ) ಬಿ ಎಲ್‌ ಸಂತೋಷ್‌ ಅವರು ಕಾರಣ ಎಂದು ಹೇಳಲಾಗುತ್ತಿದೆ.

224 ಸದಸ್ಯ ಬಲದ ಅಸೆಂಬ್ಲಿಯಲ್ಲಿ 136 ಸ್ಥಾನಗಳನ್ನು ಬಿಜೆಪಿ ಗಳಿಸಿಕೊಂಡಿದೆ. ಏತನ್ಮಧ್ಯೆ, ಬಿಜೆಪಿಯು ಕೇವಲ 65 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಆಡಳಿತ ವಿರೋಧಿ ಅಲೆ, ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ವಿರೋಧ ಪಕ್ಷ ನೀಡಿದ ಭರವಸೆ ಎಂದು ಒಂದು ಕಡೆ ಮಾತುಗಳು ಕೇಳಿಬಂದಿವೆ. ಇನ್ನೊಂದು ಕಡೆಗೆ ಪಕ್ಷವು ಹೊಸಬರಿಗೆ ಮಣೆ ಹಾಕಿ, ಹಳೆಯ ಪ್ರಭಾವಿ ನಾಯಕರನ್ನು ಕೈಬಿಟ್ಟಿರುವುದು ಎಂದು ಕೇಳಲಾಗುತ್ತಿದೆ. ಇದರ ಹಿಂದೆ ಬಿಎಲ್‌ ಸಂತೋಷ್‌ ಇರುವುದನ್ನು ಪಕ್ಷದಿಂದ ಹೊರಬಂದ ನಾಯಕರು ಹೇಳಿಕೊಂಡಿದ್ದಾರೆ.

Is BL Santosh Responsible for BJP to Lose in Karnataka Election?

ಜಗದೀಶ್‌ ಶೆಟ್ಟರ್‌ ಹೇಳಿದ್ದೇನು?

ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಬಳಿಕ ಬಿಎಲ್‌ ಸಂತೋಷ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಗೆ ಟಿಕೆಟ್‌ ಸಿಗದೇ ಇರುವುದಕ್ಕೆ ಕಾರಣ ಬಿಎಲ್‌ ಸಂತೋಷ್‌ ಹಾಗೂ ಪ್ರಹ್ಲಾದ್‌ ಜೋಶಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು.

ತಮ್ಮ ಗೇಮ್ ಪ್ಲಾನ್ ಅನ್ನು ಕಾರ್ಯಗತಗೊಳಿಸಲು ಸಂತೋಷ್ ಅವರು ಸಮರ್ಥರಾಗಿದ್ದಾರೆ. ಆದರೂ, ಬಿಜೆಪಿ ಸೋಲನ್ನು ಎದುರಿಸಲಿದೆ ಎಂದು ಶೆಟ್ಟರ್ ಹೇಳಿದರು. 'ಪಕ್ಷದಲ್ಲಿ (ಬಿಜೆಪಿ) ಯಾವುದೇ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಮಾತಿದೆ. ಇವತ್ತಿನ ದಿನಗಳಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಮುಖ್ಯವಾಗಿದೆ. ಅವರಿಗೆ ನಿಷ್ಠರಾಗಿರುವವರಿಗೆ ಆದ್ಯತೆ ನೀಡಲಾಯಿತು' ಎಂದು ಆರು ಬಾರಿ ಬಿಜೆಪಿ ಶಾಸಕರಾಗಿದ್ದ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಗುಜರಾತ್‌ ಮಾಡೆಲ್‌ ಪ್ರಯೋಗಿಸಿದ ಸಂತೋಷ್‌

ಕಳೆದ ವರ್ಷ ನಡೆದಿದ್ದ ಗುಜರಾತ್‌ ಚುನಾವಣೆಯಲ್ಲಿ ಹೆಚ್ಚು ಹೊಸಬರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿತ್ತು. ಆ ಪ್ರಯೋಗದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿತು. ಅದೇ ಪ್ರಯೋಗವನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಬಿಎಲ್‌ ಸಂತೋಷ್‌ ಮುಂದಾದರು. ಹಳಬರಿಗೆ ಮಣೆ ಹಾಕದೆ ತಮ್ಮ ನಿಷ್ಠರಿಗೆ ಮಣೆ ಹಾಕಲು ನೋಡಿದರು.

Is BL Santosh Responsible for BJP to Lose in Karnataka Election?

ಪಕ್ಷದ ಪ್ರಮುಖ ನಾಯಕರಾದ ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ಮಣೆ ಹಾಕಲಾಯಿತು. ಇದು ಬಿಜೆಪಿಯಲ್ಲಿ ಚುನಾವಣೆ ಮೊದಲೇ ಕಲ್ಲೋಲವನ್ನೇ ಸೃಷ್ಟಿಸಿತು. ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ತೊರೆದರು. ಶೆಟ್ಟರ್‌ ಚುನಾವಣೆಯಲ್ಲಿ ಸೋತರೂ ಸಹಿತ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಭುಗಿಲೆದ್ದಿತು.

ಅದೇ ರೀತಿ ಲಕ್ಷ್ಮಣ ಸವದಿ ಅವರು ಬಿಜೆಪಿಯಿಂದ ಹೊರ ನಡೆದು ಕಾಂಗ್ರೆಸ್‌ ಸೇರ್ಪಡೆಗೊಂಡರು. ಅವರು ಅಥಣಿಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಅಥಣಿ ಪಕ್ಕದ ಎರಡು ತಾಲ್ಲೂಕುಗಳಲ್ಲಿ ಸವದಿ ಅವರು ಪ್ರಭಾವ ಬೀರಿದರು. ಸಂತೋಷ್‌ ಅವರ ನಡೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಇದಕ್ಕೂ ಮೊದಲು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಟ್ಟಿರುವುದರ ಹಿಂದೆ ಬಿಎಲ್‌ ಸಂತೋಷ್‌ ಇದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ. ಇದೂ ಸಹಿತ ಲಿಂಗಾಯತ ಸಮುದಾಯಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು. ಇದೆಲ್ಲವೂ ಸೇರಿ ಬಿಜೆಪಿ ಹಿನ್ನೆಡೆಗೆ ಕಾರಣವಾಯಿತು. ಬಿಜೆಪಿ ಸೋತ ಬಳಿಕ ಬಿಎಲ್‌ ಸಂತೋಷ್‌ ಅವರ ಕಡೆಗೆ ಎಲ್ಲರ ಕಣ್ಣು ಹೊರಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+