IPS Transfer; ಧಾರವಾಡ, ಯಾದಗಿರಿಗೆ ಹೊಸ ಎಸ್‌ಪಿ ನೇಮಕ

ಬೆಂಗಳೂರು, ಆಗಸ್ಟ್ 29; ಕರ್ನಾಟಕ ಸರ್ಕಾರ ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಯಾದಗಿರಿ ಮತ್ತು ಧಾರವಾಡಕ್ಕೆ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇಮಕ ಮಾಡಲಾಗಿದೆ.

ಮಂಗಳವಾರ ಕರ್ನಾಟಕ ಸರ್ಕಾರ ಗೃಹ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ. ಜಿ. ಸಂಗೀತಾ, ಐಪಿಎಸ್ (ಕೆಎನ್- 2011) ಯಾದಗಿರಿಯ ನೂತನ ಎಸ್‌ಪಿಯಾಗಿ ನೇಮಗೊಂಡಿದ್ದಾರೆ.

IPS Transfer New SP For Dharwad And Yadgir

ಧಾರವಾಡದ ಎಸ್‌ಪಿಯಾಗಿ ಗೋಪಾಲ್ ಎಂ. ಬ್ಯಾಕೋಡ್, ಐಪಿಎಸ್ (ಸೆಲೆಕ್ಟ್‌ ಲಿಸ್ಟ್- 2021) ನೇಮಕಗೊಂಡಿದ್ದಾರೆ. ಧಾರವಾಡ ಎಸ್‌ಪಿಯಾಗಿದ್ದ ಲೋಕೇಶ್ ಬಿ. ಜಗಲಾಸರ್ ವರ್ಗಾವಣೆಗೊಂಡಿದ್ದಾರೆ.

ಜಿ. ಸಂಗೀತಾ ಅವರು ಡಿಸಿಆರ್‌ಇ, ಬೆಂಗಳೂರು ಎಸ್‌ಪಿಯಾಗಿದ್ದರು. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಯಾದಗಿರಿ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಯಾದಗಿರಿಯ ಎಸ್‌ಪಿಯಾಗಿದ್ದ ಸಿ. ಬಿ. ವೇದಮೂರ್ತಿ ವರ್ಗಾವಣೆಗೊಂಡಿದ್ದಾರೆ. ಸ್ಥಳ ನಿಯೋಜನೆ ಮಾಡಿಲ್ಲ.

ಧಾರವಾಡ ಎಸ್‌ಪಿಯಾಗಿದ್ದ ಲೋಕೇಶ್ ಬಿ. ಜಗಲಾಸರ್ ವರ್ಗಾವಣೆಗೊಂಡಿದ್ದಾರೆ. ಅವರನ್ನು ಕರ್ನಾಟಕ ಪೊಲೀಸ್ ಅಕಾಡಮಿ, ಮೈಸೂರು ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ಧಾರವಾಡದ ನೂತನ ಎಸ್‌ಪಿಯಾಗಿ ಗೋಪಾಲ್ ಎಂ. ಬ್ಯಾಕೋಡ್ ನೇಮಕ ಮಾಡಲಾಗಿದೆ. ಇವರು ಹೆಚ್ಚುವರಿ ಪೊಲೀಸ್ ಆಯುಕ್ತ ಅಪರಾಧ & ಸಂಚಾರ, ಹುಬ್ಬಳ್ಳಿ-ಧಾರವಾಡ ನಗರ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಕಳೆದ ಮೂರು ವಾರಗಳಿಂದ ಪ್ರತಿ ವಾರ ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯನ್ನು ಕರ್ನಾಟಕ ಸರ್ಕಾರ ಮಾಡುತ್ತಲೇ ಇದೆ. ಹಲವು ಜಿಲ್ಲೆಗಳ ಎಸ್‌ಪಿಗಳು ಬದಲಾವಣೆಗೊಂಡಿದ್ದಾರೆ.

ಆಗಸ್ಟ್‌ 22ರಂದು ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯಾಗಿತ್ತು. ಚಿಕ್ಕಮಗಳೂರು ಎಸ್‌ಪಿಯಾಗಿ ಆಮಟೆ ವಿಕ್ರಂ ನೇಮಕ ಮಾಡಲಾಗಿತ್ತು. ಚಿಕ್ಕಮಗಳೂರು ಎಸ್‌ಪಿಯಾಗಿದ್ದ ಉಮಾ ಪ್ರಶಾಂತ್ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

ಚಿಕ್ಕಮಗಳೂರು ಎಸ್‌ಪಿಯಾಗಿದ್ದ ಉಮಾ ಪ್ರಶಾಂತ್ ಅವರನ್ನು ಕರ್ನಾಟಕ ಸರ್ಕಾರ ದಾವಣಗೆರೆ ಎಸ್‌ಪಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಆಗಸ್ಟ್‌ 8ರಂದು ದಾವಣಗೆರೆ ಎಸ್‌ಪಿಯಾಗಿದ್ದ ಡಾ. ಕೆ. ಅರುಣ್ ಅವರನ್ನು ವರ್ಗಾವಣೆಗೊಳಿಸಲಾಗಿತ್ತು.

ದಾವಣಗೆರೆ ಎಸ್‌ಪಿ ಡಾ. ಕೆ. ಅರುಣ್ ಅವರನ್ನು ಕಲಬುರಗಿಯ ಪೊಲೀಸ್ ತರಬೇತಿ ಕೇಂದ್ರದ ಪ್ರಾಚಾರ್ಯರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿತ್ತು. ಡಾ. ಕೆ. ಅರುಣ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಉಮಾ ಪ್ರಶಾಂತ್ ನೇಮಕ ಮಾಡಲಾಗಿತ್ತು.

ಆಗಸ್ಟ್ 9ರಂದು ಕರ್ನಾಟಕ ಸರ್ಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸ್ ಆಯುಕ್ತರಾಗಿ ರೇಣುಕಾ ಕೆ. ಸುಕುಮಾರ ನೇಮಕ ಮಾಡಿತ್ತು. 2011ನೇ ಬ್ಯಾಚ್‌ ಐಪಿಎಸ್ ಅಧಿಕಾರಿ ರೇಣುಕಾ ಕೆ. ಸುಕುಮಾರ ಅವಳಿ ನಗರದ ಮೊದಲ ಮಹಿಳಾ ಪೊಲೀಸ್ ಆಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಈ ಹಿಂದೆ ಅವರು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿಸಿಪಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+