ಅನ್ಯಾಯವೇ ಕಾನೂನಾದಾಗ...ಅನುಪಮಾ ಏನಂದ್ರು?

Written By:
Subscribe to Oneindia Kannada

ಬೆಂಗಳೂರು, ಜೂನ್, 06: ರಾಜೀನಾಮೆ ನೀಡಿ ವ್ಯವಸ್ಥೆಯಿಂದ ಹೊರಕ್ಕೆ ಬಂದಿರುವ ಅನುಪಮಾ ಶೆಣೈ ಸರ್ಕಾರದ ವಿರುದ್ಧ ರೆಬೆಲ್ ಆಗಿದ್ದಾರೆ. ಅನ್ಯಾಯವೇ ಕಾನೂನಾದಾಗ, ರೆಬೆಲ್ ಆಗುವುದೇ ಡ್ಯೂಟಿ ಆಗಬೇಕಾಗುತ್ತದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಶೆಣೈ ಬರೆದುಕೊಂಡಿದ್ದಾರೆ.

ಅನುಪಮಾ ಶೆಣೈ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಸಹ ಆರಂಭವಾಗಿದೆ. ಮತ್ತೊಂದೆಡೆ ಇಂದು ಬೆಳಗ್ಗೆ ತಮ್ಮ ಫೇಸ್ ಬುಕ್ ಪೇಜ್ ಸ್ಟೇಟಸ್ ಅಪ್ ಡಿಎಆರ್ ಪೇದೆ ರಾಮಕೃಷ್ಣ ಅವರನ್ನು ವಜಾಗೊಳಿಸಿದ್ದಕ್ಕೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

facebook

ಶನಿವಾರ ರಾಜಿನಾಮೆ ನೀಡಿದ ಬಳಿಕ ಇಂದು ಮೊದಲ ಬಾರಿಗೆ ತಮ್ಮ ಫೇಸ್ ಬುಕ್ ಸ್ಟೇಟಸ್ ಅಪಡೇಟ್ ಮಾಡಿರುವ ಶೆಣೈ, ನನ್ನ ಸಾಮಾಜಿಕ ತಾಣದ ಅಪ್ ಡೇಟ್ ನೋಡಿ ಕೇಸು ದಾಖಲು ಮಾಡುತ್ತಾರಂತೆ ಬೃಹನ್ನಳೆಯರು! ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.[ಅನುಪಮಾ ಶೆಣೈ ಯಾರು?]

ಅನುಪಮಾ ಅವರ ಅಪ್ ಡೇಟ್ 600ಕ್ಕೂ ಅಧಿಕ ಶೇರ್ ಕಂಡಿದ್ದು ಜನರು ಪುನಃ ಕೆಲಸಕ್ಕೆ ಹಾಜರಾಗುವಂತೆ ಬೇಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A day after Kudligi Deputy Superintendent of Police Anupama Shenoy's resignation, she took to Facebook in what seems like a ‘rebellion' of sorts. Of the two photos Shenoy posted on Facebook "When injustice becomes law, rebellion becomes duty".
Please Wait while comments are loading...