ಬೆಂಗಳೂರು-ತುಮಕೂರಿನಲ್ಲಿ ಬೃಹತ್‌ ಯೋಜನೆ: ₹83 ಸಾವಿರ ಕೋಟಿ ಹೂಡಿಕೆಗೆ ಐಪಿಸಿ ಆಸಕ್ತಿ, 1,000 ಎಕರೆ ಜಾಗಕ್ಕೆ ಬೇಡಿಕೆ

ಬೆಂಗಳೂರು: ಡಿಜಿಟಲ್‌ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್‌ ಹೈಡ್ರೋಜನ್‌ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಸಂಬರ್ಗ್‌ ಮೂಲದ ಇನ್ನೋವೇಶನ್‌ ಪ್ಲಾಟ್‌ಫಾರಂ ಕ್ಯಾಪಿಟಲ್‌ (IPC) ಕಂಪನಿಯು ಕರ್ನಾಟಕದಲ್ಲಿ ಒಟ್ಟು ₹83 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಕಂಪನಿಯ ಉನ್ನತ ಮಟ್ಟದ ನಿಯೋಗದೊಂದಿಗೆ ಈ ಕುರಿತು ಚರ್ಚೆ ನಡೆದಿದೆ. ಕಂಪನಿಯ ವ್ಯವಸ್ಥಾಪಕ ಪಾಲುದಾರ ಗುರುಶರಣ್‌ ಸಿಂಗ್‌ ಕುಂದನ್‌ ನಿಯೋಗದ ನೇತೃತ್ವ ವಹಿಸಿದ್ದರು. ಐಪಿಸಿ ಕಂಪನಿಯು ಕರ್ನಾಟಕದಲ್ಲಿ ಒಟ್ಟು ಮೂರು ಹಂತಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ದೇಶಿಸಿದೆ. ಮೊದಲ ಹಂತದಲ್ಲೇ ₹17,114 ಕೋಟಿ ಹೂಡಿಕೆ ಮಾಡಲು ಕಂಪನಿ ಪ್ರಸ್ತಾವನೆ ಮುಂದಿಟ್ಟಿದೆ.

IPC Eyes 83 000 Crore Investment in Karnataka Plans Data Centres Green Hydrogen Projects

ಬೆಂಗಳೂರು-ತುಮಕೂರು ಪ್ರದೇಶದಲ್ಲಿ ಇಂಟಿಗ್ರೇಟೆಡ್‌ ಗ್ರೀನ್‌ ಹೈಡ್ರೋಜನ್‌ ಯೋಜನೆ , 2,500 ಮೆಗಾವ್ಯಾಟ್‌ ಐಟಿ ಲೋಡ್‌ ಸಾಮರ್ಥ್ಯದ ಮೂಲಸೌಕರ್ಯ ಹಾಗೂ ಒಟ್ಟು 1,000 ಮೆಗಾವ್ಯಾಟ್‌ ಸಾಮರ್ಥ್ಯದ ಹೈಪರ್‌ಸ್ಕೇಲ್‌ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಕಂಪನಿ ಹೊಂದಿದೆ.

ಮೊದಲ ಹಂತದ ಯೋಜನೆಯಲ್ಲಿ ತಲಾ 200 ಮೆಗಾವ್ಯಾಟ್‌ ಸಾಮರ್ಥ್ಯದ ಎರಡು ಡೇಟಾ ಸೆಂಟರ್‌ಗಳು ಹಾಗೂ 500 ಮೆಗಾವ್ಯಾಟ್‌ ಸಾಮರ್ಥ್ಯದ ಗ್ರೀನ್‌ ಹೈಡ್ರೋಜನ್‌ ಸ್ಥಾವರ ಮತ್ತು ಇಂಧನ ಸಂಕೀರ್ಣ** ನಿರ್ಮಿಸಲು ಕಂಪನಿ ಉದ್ದೇಶಿಸಿದೆ. ಈ ಯೋಜನೆಗಳಿಗೆ ಕಂಪನಿಯು ಸುಮಾರು 1,000 ಎಕರೆ ಭೂಮಿ ಕೇಳಿದೆ. ಇದರಲ್ಲಿ ಡೇಟಾ ಸೆಂಟರ್‌ ಮತ್ತು ಗ್ರೀನ್‌ ಹೈಡ್ರೋಜನ್‌ ಯೋಜನೆಗಳಿಗೆ ತಲಾ 400 ಎಕರೆ ಬಳಸಲು ಉದ್ದೇಶಿಸಲಾಗಿದೆ. ಉಳಿದ 200 ಎಕರೆ ಪ್ರದೇಶವನ್ನು ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗೆ ಮೀಸಲಿಡಲು ಕಂಪನಿ ಯೋಜಿಸಿದೆ.

ಯೋಜನೆಗಳಿಗೆ ಪ್ರತಿದಿನ ಸುಮಾರು 13 MLD ನೀರು ಅಗತ್ಯವಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರಲ್ಲಿ ಸುಮಾರು 85% ನೀರನ್ನು ಸಂಸ್ಕರಿತ ಮೂಲಗಳಿಂದ ಪಡೆಯುವ ಉದ್ದೇಶವನ್ನು ಕಂಪನಿ ಹೊಂದಿದೆ.
ಈ ಬೃಹತ್‌ ಹೂಡಿಕೆ ಯೋಜನೆಯಿಂದ ರಾಜ್ಯದಲ್ಲಿ ಡಿಜಿಟಲ್‌ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್‌ ಹೈಡ್ರೋಜನ್‌ ಕ್ಷೇತ್ರಗಳಿಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ಕೈಗಾರಿಕೆ ಸೌಲಭ್ಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಮಂಡಲ ಅಸ್ತು

ಕೈಗಾರಿಕೆಗಳಿಗೆ ಒಟ್ಟು 20 ಸೇವೆಗಳನ್ನು ಅಫಿಡವಿಟ್ ಆಧರಿತ ಅನುಮೋದನೆ (ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್- ಎಬಿಸಿ) ವಿಧಾನದಲ್ಲಿ ಒದಗಿಸಲು ಅವಕಾಶ ಕೊಡಲಿರುವ ಮತ್ತು ಏಕಗವಾಕ್ಷಿ ಪದ್ಧತಿಗೆ ಕಾನೂನಿನ ಮಾನ್ಯತೆ ತಂದುಕೊಡಲಿರುವ ಕರ್ನಾಟಕ ಕೈಗಾರಿಕಾ ಸೌಲಭ್ಯ (ತಿದ್ದುಪಡಿ) ವಿಧೇಯಕ-2026 ಅನ್ನು ವಿಧಾನ ಮಂಡಲದ ಉಭಯ ಸದನಗಳು ಸೋಮವಾರ ಅಂಗೀಕರಿಸಿದವು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಈ ವಿಧೇಯಕವನ್ನು ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲೂ ಮಂಡಿಸಿದರು. ಬಳಿಕ ಮಸೂದೆ ಬಗ್ಗೆ ಮಾತನಾಡಿದ ಸಚಿವರು, ರಾಜ್ಯವು 2002ರಲ್ಲೇ ಕೈಗಾರಿಕಾ ಸೌಲಭ್ಯ ಕಾಯಿದೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತಂದ ಖ್ಯಾತಿ ಹೊಂದಿದೆ. 2020ರಲ್ಲಿ ಇದಕ್ಕೆ ತಿದ್ದುಪಡಿ ತಂದು ಎಬಿಸಿ ಪದ್ಧತಿಯಡಿ 15 ಸೇವೆಗಳನ್ನು ಕೊಡಲಾಗುತ್ತಿತ್ತು. ಈಗ ಇನ್ನೂ 5 ಸೇವೆಗಳನ್ನು ಸೇರಿಸಲಾಗುತ್ತಿದೆ.

ಜತೆಗೆ ಏಕಗವಾಕ್ಷಿ ವ್ಯವಸ್ಥೆಗೆ ಕಾನೂನಿನ ಮನ್ನಣೆ ನೀಡಿ, ಕೈಗಾರಿಕೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಅದರ ಮೂಲಕವೇ ಸಲ್ಲಿಸುವ ಮತ್ತು ಮುಂದಿನ ಪ್ರಕ್ರಿಯೆಗಳನ್ನು ತ್ವರಿತವಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದು ಸುಗಮ ವಾಣಿಜ್ಯ ಸಂಸ್ಕೃತಿ ಪ್ರಕ್ರಿಯೆಯ ಭಾಗವಾಗಿದೆ ಎಂದಿದ್ದಾರೆ.

ಹೀಗಾಗಿ ಇನ್ನು ಮುಂದೆ ಏಕಗವಾಕ್ಷಿ ವ್ಯವಸ್ಥೆಯಡಿ ಬರುವ ಕೆವೈಎ, ಕೆವೈಸಿ, ಸಿಂಗಲ್ ಸೈನ್-ಆನ್, ಡ್ಯಾಶ್ ಬೋರ್ಡ್, ಆಡಿಟ್ ಟ್ರಯಲ್, ಟಿಎಟಿ ಮಾನಿಟರಿಂಗ್, ಎಪಿಐ ಇಂಟಿಗ್ರೇಶನ್ ಮತ್ತು ಒನ್ಸ್-ಓನ್ಲಿ ಸಬ್ಮಿಶನ್ ಮುಂತಾದ ಸೌಲಭ್ಯಗಳಿಗೆ ಕಾನೂನಿನ ಬಲ ಬರಲಿದೆ. ಜತೆಗೆ ರಾಜ್ಯ ಮಟ್ಟದ ನೋಡಲ್ ಏಜೆನ್ಸಿ, ಸಮನ್ವಯ ಸಮಿತಿ ಮತ್ತು ಕೇಂದ್ರ ತಪಾಸಣಾ ವ್ಯವಸ್ಥೆಗೆ ಬಲ ಬರಲಿದೆ. ಒಟ್ಟಾರೆಯಾಗಿ ಕೈಗಾರಿಕೆಗಳು ತಮ್ಮ ಕಾಮಗಾರಿ ಇತ್ಯಾದಿ ಆರಂಭಿಸಿ, ಬಳಿಕ ಅನುಮೋದನೆ ಪಡೆದುಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.

ಸರಕಾರದ ಮಟ್ಟದಲ್ಲಿ ಕೈಗಾರಿಕೆಗಳಿಗೆ ಬೇಕಾಗುವ ಒಪ್ಪಿಗೆ ಇತ್ಯಾದಿಗಳು ಸರಳವಾಗಿದ್ದು, ಪಾರದರ್ಶಕವಾಗಿರಬೇಕು. ಈ ಮೂಲಕ ಬಂಡವಾಳಸ್ನೇಹಿ ವ್ಯವಸ್ಥೆಯನ್ನು ನಿರ್ಮಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+