Get Updates
Get notified of breaking news, exclusive insights, and must-see stories!

ಕುಮಾರಸ್ವಾಮಿ ಅವರು ಲಾಟರಿ ಮುಖ್ಯಮಂತ್ರಿ: ಎಂ.ಪಿ.ರೇಣುಕಾಚಾರ್ಯಯವರ ವಿಶೇಷ ಸಂದರ್ಶನ

ನಾವು ಪಾಕಿಸ್ತಾನದಲ್ಲಿ ಹೋಗಿ ಭಾರತ ಮಾತೆಯ ಧ್ವಜವನ್ನ ಹಾರಿಸಿದರೇ ಬಿಡುತ್ತಾರಾ.? ಕಾಂಗ್ರೆಸ್ ಅಪಪ್ರಚಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಎಂ.ಪಿ ರೇಣುಕಾಚಾರ್ಯ ಅವರು ವಾಗ್ದಾಳಿ ನಡೆಸಿದರು.

ಬೆಂಗಳೂರು,ಫೆಬ್ರವರಿ6: ಕುಮಾರಸ್ವಾಮಿಯವರು ಹಗಲು ಗನಸು ಕಾಣುತ್ತಿದ್ದಾರೆ. ಒಮ್ಮೆ ನಾವು ಮುಖ್ಯಮಂತ್ರಿಯನ್ನಾಗಿ ಮಾಡಿದ್ವಿ, ಇನ್ನೊಮ್ಮೆ ಕಾಂಗ್ರೆಸ್ ನವರು ಅಧಿಕಾರ ಕೊಟ್ರು, ಕೊನೆಗೆ ಅವರೇ ಕಾಲೆಳೆದರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಆಕಸ್ಮಿಕವಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರು ಲಟರಿ ಮುಖ್ಯಮಂತ್ರಿ. ಜೆಡಿಎಸ್ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ ಎಂದು 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಇನ್ನೂ ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.

1. ಈ ಬಾರಿ ಚುನಾವಣೆಯಲ್ಲಿ ಹೊನ್ನಾಳಿ ಕ್ಷೇತ್ರದಲ್ಲಿ ಎಂ ಪಿ ರೇಣುಕಾಚಾರ್ಯ ಅವರ ಗೆಲುವು ಕಷ್ಟವಾಗಲಿಯೇ.?

ರಾಜ್ಯದಲ್ಲಿ ಬಿಜೆಪಿ ಪಾರ್ಟಿ 140 ಕ್ಕೂ ಹೆಚ್ಚು ಸ್ಥಾನಗಳನ್ನ ಗಳಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಅಧಿಕಾರ ಇದ್ದಾಗ ಏನು ಕೆಲಸ ಮಾಡಲಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದೂಳಿದ ವರ್ಗಗಳಿಗೆ ಅನ್ಯಾಯ ಮಾಡಿದೆ. ಅಂಬೇಡ್ಕರ್ ಗೆ ಅವಮಾನ ಮಾಡಿದ ಪಕ್ಷ ರಾಜ್ಯದಲ್ಲಿ ಯಾವತ್ತಿಗೂ ಅಧಿಕಾರಕ್ಕೆ ಬರಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನತೆ ಒಂದು ಅಭಿವೃದ್ದಿ ಹಾಗೂ ಕೋವಿಡ್ ಸಂದರ್ಭದಲ್ಲಿ ಪ್ರಮಾಣಿಕವಾಗಿ ಸೇವೆ ಮಾಡಿದ್ದೇನೆ. ಹೊನ್ನಾಳಿ ತಾಲೂಕಿನ ಜನತೆ ಬಹಳ ಪ್ರಭುದ್ದರೂ ಯಾರನ್ನ ಆಯ್ಕೆ ಮಾಡಬೇಕು ಅಂತ ಗೊತ್ತಿದೆ. ನಾನು ಹೊನ್ನಾಳಿ-ನ್ಯಾಮತಿ ತಾಲೂಕಿನ ಜನತೆಯ ಸೇವಕ. ನನಗೆ ನನ್ನ ಕ್ಷೇತ್ರ ಜನತೆಯ ಮೇಲೆ ನನಗೆ ಆತ್ಮ ವಿಶ್ವಾಸ ಇದೆ 100 ಕ್ಕೆ 100 ರಷ್ಟು ನನ್ನನ್ನ ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.

Interview With Honnali MLA MP Renukacharya

2. ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಜನರ ಸೇರುತ್ತಾ ಇಲ್ಲ ಎಂದು ಕಾಂಗ್ರೆಸ್ ಟೀಕೆ ಮಾಡ್ತಾ ಇದೆ. ಯಾಕೆ ಬಿಜೆಪಿ ಕಾರ್ಯಕ್ರಮಕ್ಕೆ ಜನರು ಸೇರುತ್ತಿಲ್ಲವೇ.?

ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲು ಹುಡುಕು ಪ್ರಯತ್ನ ಮಾಡುತ್ತಾರೆ. ಎಲ್ಲಾ ಕಡೆ ಜನಸಂಕಲ್ಪ ಯಾತ್ರೆಯಲ್ಲಿ ಸಾಕಷ್ಟು ಜನ ಸೇರಿದ್ದಾರೆ. ನಮ್ಮ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಕುರ್ಚಿ ಇಲ್ಲದೆ ಒದ್ದಾಡುತ್ತಿದ್ದಾರೆ. ದೇಶದಲ್ಲಿ ಅಡ್ರೆಸ್ ಇಲ್ಲ, ದೇಶದಲ್ಲಿ ಪ್ರತಿಪಕ್ಷ ಸ್ಥಾನವೇ ಇಲ್ಲ, ರಾಜ್ಯದಲ್ಲೂ ಅದೇ ವಾತಾವರಣ ಇದೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೂ ಬಿಜೆಪಿ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಹಾಗೆಯೇ ಹೊನ್ನಾಳಿಯಲ್ಲಿಯೂ ನಿಜವಾದ ಸೇವಕನನ್ನ ಆಯ್ಕೆ ಮಾಡುವುದು ಸತ್ಯ ಎಂದು ಹೇಳಿದರು.

3. ಜೆಡಿಎಸ್ ಪಂಚರತ್ನ ರಥಯಾತ್ರೆ ಹೆಚ್ಚಿನ ಜನರು ಸೇರುತ್ತಿದ್ದಾರೆ. ಜನರ ಭಾವನೆಯೂ ಬದಲಾಗಿದೆ ಎಂದದು ಜೆಡಿಎಸ್ ನಾಯಕರು ಹೇಳಿದ್ದಾರೆ. ಇದು ಬಿಜೆಪಿ ಯಾವ ರೀತಿಯ ಪರಿಣಾಮ ಬೀರಲಿದೆ.?

ಕುಮಾರಸ್ವಾಮಿಯವರು ಹಗಲು ಗನಸು ಕಾಣುತ್ತಿದ್ದಾರೆ. ಒಮ್ಮೆ ನಾವು ಮುಖ್ಯಮಂತ್ರಿಯನ್ನಾಗಿ ಮಾಡಿದ್ವಿ, ಇನ್ನೊಮ್ಮೆ ಕಾಂಗ್ರೆಸ್ ನವರು ಅಧಿಕಾರ ಕೊಟ್ರು, ಕೊನೆಗೆ ಅವರೇ ಕಾಲೆಳೆದರು. ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿ ಶಾಸಕರು ರಾಜೀನಾಮೆ ಕೊಟ್ಟು ಬಂದರು. ನಂತರ ಜನರು ಆಶೀರ್ವಾದದಿಂದ ಮತ್ತೆ ಗೆದ್ದು ಬಂದು ಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಎರಡು ಬಾರೀ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಜನರಿಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ರೈತರಿಗೆ, ಅಭಿವೃದ್ದಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ಆಕಸ್ಮಿಕವಾಗಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಕುಮಾರಸ್ವಾಮಿ ಅವರು ಲಾಟರಿ ಮುಖ್ಯಮಂತ್ರಿ. ಜೆಡಿಎಸ್ ಈ ರಾಜ್ಯದಲ್ಲಿ ಅಧಿಕಾರಕ್ಕೆ ಬರಲ್ಲ. ದೇಶದಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪನವರು ಹಾಗೂ ಬಸವರಾಜ ಬೊಮ್ಮಾಯಿ ಅವರು ಜನಪರವಾದ ಆಡಳಿತವನ್ನ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸಂಘಟನೆ ಬಲಿಷ್ಟವಾಗಿದ್ದು, ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬಂದೇ ಬರುತ್ತೇವೆ.

Interview With Honnali MLA MP Renukacharya

ಕಾಂಗ್ರೆಸ್ ಬಸ್ ಯಾತ್ರೆ ಮಾಡ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಧರ್ಮವನ್ನ ಹೊಡೆದವರು,ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿದ್ದವರು ನೀವು ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು. ಇನ್ನೂ ಉಚಿತವಾಗಿ 200 ಯುನಿಟ್ ಕೊಡ್ತಿನಿ ಅಂತ ಭರವಸೆ ಕೊಟ್ಟಿದ್ದೀರಾ ಅಲ್ವಾ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರೇ 2013 ಹಾಗೂ 2018 ರಲ್ಲಿ ಯಾಕೆ ನೀವು 200 ಯುನಿಟ್ ಫ್ರೀ ಕೊಡ್ಲಿಲ್ಲ.? ಎಂದು ಪ್ರಶ್ನಿಸಿದ್ದಾರೆ. ಕೋಮುಗಲಭೆಯನ್ನ ಸೃಷ್ಠಿ ಮಾಡಿದ್ದೂ ಇವರೇ , ಈಗಾಗಲೇ ಎಲ್ಲಾ ಧರ್ಮದವರಿಗೂ ಮನವರಿಕೆ ಆಗಿದೆ ನಮ್ಮ ಸರ್ಕಾರ ಬಂದ್ರೆ ಎಲ್ಲಾರಿಗೂ ಸೌಲಭ್ಯವಾಗಲಿದೆ ಎಂದು ಹೇಳಿದರು. ಯಾವ ಯಾತ್ರೆಗಳು ನಡೆಯಲ್ಲ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದರು.

4. ಬಿ.ಎಸ್ ಯಡಿಯೂರಪ್ಪನವರನ್ನ ಬಿಜೆಪಿ ಪಕ್ಷ ಸರಿಯಾಗಿ ನಡೆಸಿಕಳ್ಳುತ್ತಿಲ್ಲ ಎಂಬ ಬಗ್ಗೆ ಟೀಕೆ ಟಿಪ್ಪಣಿಗಳು ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು.?

ಯಡಿಯೂರಪ್ಪನವರು ಮೇರು ನಾಯಕರು. ದಕ್ಷಿಣ ಭಾರತದಲ್ಲಿ, ಕರ್ನಾಟಕದಲ್ಲಿ ಬಿಜೆಪಿಯನ್ನ ಕಟ್ಟಿ ಬೆಳೆಸಿದ ಕೀರ್ತಿ ಯಡಿಯೂರಪ್ಪನವರಿಗೆ ಸಲ್ಲುತ್ತದೆ. ಅನಂತ್ ಕುಮಾರ್, ಈಶ್ವರಪ್ಪ, ಜಗದೀಶ್ ಶೆಟ್ಟರ್ ನಂತಹ ಅನೇಕ ನಾಯಕರು ಪಕ್ಷವನ್ನ ಕಟ್ಟಿ ಬೆಳೆಸಿದ್ದಾರೆ. ಯಡಿಯೂರಪ್ಪ ನವರಿಗೆ ಪಕ್ಷ ಇಷ್ಟೊಂದು ಅವಕಾಶ ಕೊಟ್ಟಿದೆ ಅಂತ ಹೇಳಿ ಸಂತೋಷದಿಂದ ಕಣ್ಣೀರು ಹಾಕಿದ್ದು, ಯಡಿಯೂರಪ್ಪ ನವರು ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ಅವರಿಗೆ ಅವಕಾಶವನ್ನ ಹೈಕಮಾಂಡ್ ಕೊಟ್ಟಿದ್ದೇ. ಯಡಿಯೂರಪ್ಪ ನವರ ಮಾರ್ಗದರ್ಶನದಲ್ಲಿ ನಾವು ಚುನಾವಣೆಯನ್ನ ಎದರಿಸುತ್ತೇವೆ ಎಂದು ಹೇಳಿದರು.

5. ಬಿ ಎಸ್ ಯಡಿಯೂರಪ್ಪ ನವರ ಜೊತೆಗೆ ನೀವು ಅಂತರವನ್ನ ಕಾಯ್ದುಕೊಂಡಿದ್ದೀರಾ.?

ಯಡಿಯೂರಪ್ಪನವರ 2004 ರಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಬಿ ಫಾರ್ಮ್ ಕೊಟ್ಟಿದ್ದಾರೆ. 2008 ರಲ್ಲಿಯೂ ಬಿ ಫಾರ್ಮ್ ಕೊಟ್ರು, ಸಚಿವರನ್ನಾಗಿ ಮಾಡಿದ್ರೂ. ಯಡಿಯೂರಪ್ಪನವರು ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ ಹಾಗೂ ರಾಜಕೀಯ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಯಡಿಯೂರಪ್ಪನವರ ಜೊತೆಗೆ ಅಂತರವನ್ನ ಕಾಯ್ದುಕೊಳ್ಳವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

Interview With Honnali MLA MP Renukacharya

6.ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೈಕಮಾಂಡ್ ನಾಯಕರನ್ನ ಹೆಚ್ಚಾಗಿ ಕರೆಸುತ್ತಿದ್ದೀರಾ, ಚುನಾವಣೆಯನ್ನ ಎದರಿಸುವ ಶಕ್ತಿ ಸಮರ್ಥ ರಾಜ್ಯ ಬಿಜೆಪಿ ನಾಯಕರಿಗೆ ಇಲ್ಲವೇ.?

ಮೋದಿ ಈ ದೇಶದ ನಾಯಕ. ಏನು ಪ್ರಬುದ್ಯತೆ ಇಲ್ಲದ ರಾಹುಲ್ ಗಾಂಧಿಯವರು ದೇಶದಲ್ಲಿ ಪಾದಯಾತ್ರೆ ಮಾಡಿದರು. ರಾಹುಲ್ ಗಾಂಧಿ ಓಡಿ ಎಂದ್ರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಓಡಬೇಕು. ನರೇಂದ್ರ ಮೋದಿಯರ ನಾಯಕತ್ವವನ್ನ ಇಡೀ ದೇಶವೇ ಮೆಚ್ಚಿದೆ. ಬೇರೆ ಬೇರೆ ದೇಶಗಳು ಆರ್ಥಿಕವಾಗಿ ದಿವಾಳಿಯಾಗಿವೆ. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ವ್ಯವಸ್ಥೆ ಆರ್ಥಿಕವಾಗಿ ಸಧೃಡವಾಗಿದೆ. ಕೊರೋನಾ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಇದಿದ್ದರೆ ಲಕ್ಷಾಂತರ ಮಂದಿ ಸಾವಿಗೀಡಾಗುತ್ತಿದ್ದರು. ಆರ್ಥಿಕವಾಗಿ ನಮ್ಮ ದೇಶ ಸಧೃಡವಾಗಿದೆ. ನಮ್ಮ ರಾಷ್ಟ್ರೀಯ ನಾಯಕರಾದ ಮೋದಿ, ಜೆಪಿ ನಡ್ಡಾ ಅವರನ್ನ ಕರೆಸುವುದರಲ್ಲಿ ತಪ್ಪೇನಿದೆ. ಕಾಂಗ್ರೆಸ್ ನಲ್ಲಿ ಲಕೋಟೆ ಸಂಸ್ಕೃತಿ ಆದ್ರೆ ಬಿಜೆಪಿಯಲ್ಲಿ ಆ ಸಂಸ್ಕೃತಿ ಇಲ್ಲ ಎಂದು ಹೇಳಿದರು.

7. ಭಾರತ್ ಜೋಡೋ ಯಾತ್ರೆ ಮುಂದಿನ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಏನಾದ್ರೂ ಪರಿಣಾಯ ಬೀರಲಿದೆಯೇ.?

ಭಾರತ್ ಜೋಡೋ ಅಲ್ಲ, ಅದು ಭಾರತ್ ತೋಡೋ. ಭಾರತವನ್ನ ಅವರ ಕಾಲದಲ್ಲಿಯೇ ತೋಡಿ ಆಗಿದೆ. ನಮ್ಮ ಕಾಲದಲ್ಲಿ ನಾವು ಯಾವುದೇ ಜಾಗವನ್ನ ಬಿಟ್ಟುಕೊಟ್ಟಿಲ್ಲ. ರೈತರನ್ನ ಯೋಧರನ್ನ ಗೌರವಿಸಿದ ಪಾರ್ಟಿ ಅಂದ್ರೆ ಅದು ಬಿಜೆಪಿ ಪಾರ್ಟಿ ಎಂದು ಹೇಳಿದರು.

8. ಮೋದಿಯವರು ಹೇಳುವ ಎಲ್ಲಾ ಮಾತನ್ನು ಒಪ್ಪುವ ರಾಜ್ಯ ನಾಯಕರು ಯಾಕೆ ಪ್ಯಾಮಿಲಿ ಪಾಲಿಟಿಕ್ಸ್ ಗೆ ಅಂತ್ಯವಾಡುತ್ತಿಲ್ಲ.?

ಕೆಲವೊಂದು ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಕೊಟ್ಟಿರುತ್ತಾರೆ. ಜೆಡಿಎಸ್, ಕಾಂಗ್ರೆಸ್ ನಲ್ಲಿ ಇರುವಷ್ಟು ಕುಟುಂಬ ರಾಜಕಾರಣ ನಮ್ಮಲ್ಲಿ ಇಲ್ಲ. ನಮ್ಮ ರಾಜಕಾರಣದಲ್ಲಿ ಎಲ್ಲಿಂದೆ ಕುಟುಂಬ ರಾಜಕಾರಣ ಎಂದು ಪ್ರಶ್ನಿಸಿದ್ದಾರೆ. ಇನ್ನೂ ವರಿಷ್ಠರು ಒಪ್ಪಿದರೇ ವಿಜಯೇಂದ್ರ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ವಿಜಯೇಂದ್ರ ಬಿಜೆಪಿ ಉಪಧ್ಯಾಕ್ಷರಾಗಿ ಸಾಕಷ್ಟು ಪಕ್ಷ ಸಂಘಟನೆ ಮಾಡಿದ್ದಾರೆ. ಇಂದಿರಾ ಗಾಂಧಿ ಕುಟುಂಬದಲ್ಲಿ ಇತರೇ ಇತರೇ ಎನ್ನುವಷ್ಟು ಜನ ರಾಜಕೀಯದಲ್ಲಿ ಇದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಅದು ಇಲ್ಲ. ಯಾರಿಗೂ ಅರ್ಹತೆ ಹಾಗೂ ಸಂಘಟನಾ ಸಮರ್ಥ್ಯ ಇರುತ್ತೋ ಅವರಿಗೆ ಪಕ್ಷ ಅವಕಾಶ ಮಾಡಿಕೊಟ್ಟಿರುತ್ತದೆ ಎಂದು ಹೇಳಿದರು.

9. ಚುನಾವಣೆ ಸಮೀಪಿಸುತ್ತಿದ್ದಂತೆ ರೌಡಿ ಶೀಟರ್ ಗಳಗೆ ಮಣೆಯಾಕುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿರುವುದು ನಿಜಾವೇ.?

ಕಾಂಗ್ರೆಸ್ ಭೂಗತದವರಿಗೆ ಮಣೆ ಹಾಕಿದೆ. ಕಾಂಗ್ರೆಸ್ ರೌಡಿ ಶೀಟರ್ ಗಳ ಜೊತೆಗೆ ಇರುವ ಪಕ್ಷ. ಕಾಂಗ್ರೆಸ್ ನವರು ಹಣ ಬಲ,ತೋಳ ಬಲವನ್ನ ಪ್ರಯೋಗ ಮಾಡಿದ್ದಾರೆ. ಬಿಜೆಪಿ ಪಕ್ಷ ಯಾವುದೇ ರೌಡಿ ಶೀಟರ್ ಗಳಿಗೆ ಮಣೆ ಹಾಕುವಂತಹ ಪ್ರಶ್ನೆಯೇ ಇಲ್ಲ. ರೌಡಿಗಳನ್ನ ಮಟ್ಟ ಹಾಕುವಂತ ಪಕ್ಷ ಯವುದಾದರೂ ಇದೆ ಅಂದ್ರೆ ಅದು ಬಿಜೆಪಿ.

10. ಕಾಂಗ್ರೆಸ್ ಪೇ ಸಿಎಂ ಅಭಿಯಾನಕ್ಕೆ ಬಿಜೆಪಿ ಯಾಕೆ ಸಮರ್ಥವಾದ ಉತ್ತರವನ್ನ ಕೊಡುತ್ತಿಲ್ಲ ಯಾಕೆ.?

ಪೇ ಸಿಎಂ ಅಭಿಯಾನ ಬಸವರಾಜ ಬೊಮ್ಮಾಯಿಯವರಿಗೆ ಮಾಡಿದ ಅವಮಾನ ಅಲ್ಲ. ಅದು ರಾಜ್ಯದ ಜನರಿಗೆ ಮಾಡಿದ ಅವಮಾನ. ಇವರ ಕಾಲದಲ್ಲಿ ಐ ಎ ಎಸ್ ಅಧಿಕಾರಿಗಳು ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡರು. 2024ಕ್ಕೆ ಮತ್ತೆ ಮೋದಿ ಸರ್ಕಾರವೇ ಅಧಿಕಾರಕ್ಕೆ ಬರುತ್ತೆ. ಕರ್ನಾಟಕದಲ್ಲಿ ಪೇ ಸಿಎಂ ಮಾಡಲು ಹೋಗಿ ಕಾಂಗ್ರೆಸ್ ಕೈ ಸುಟ್ಟಿಕೊಂಡಿದೆ. ಇದಕ್ಕೆ ರಾಜ್ಯದ ಜನತೆ ತಕ್ಕ ಪಾಠವನ್ನ ಕಲಿಸುತ್ತಾರೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.

Interview With Honnali MLA MP Renukacharya

11. ಬಿಜೆಪಿ ಯಾಕೆ ಕೊಟ್ಟ ಭರವಸೆಯನ್ನ ಈಡೇರಿಸಿಲ್ಲ ಎಂದು ಕಾಂಗ್ರೆಸ್ ಪಶ್ನೆ ಮಾಡಿದ್ರೂ ಯಾಕೆ ಬಿಜೆಪಿ ನಾಯಕರು ಉತ್ತರ ಕೊಡ್ತಾ ಇಲ್ಲ.

ಕಾಂಗ್ರೆಸ್ ನಾಯಕರು ಹಲ್ಲು ಕಿತ್ತ ಹಾವುಗಳು. ದೇಶಕ್ಕೆ, ರಾಜ್ಯಕ್ಕೆ ಹಾಗೂ ಕ್ಷೇತ್ರಗಳಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ನೀರಾವರಿ, ಶಿಕ್ಷಣ , ಅರೋಗ್ಯ ಕ್ಷೇತ್ರದಲ್ಲಿ ಆದ್ಯತೆ ಕೊಟ್ಟಿದೆ ಅಂದ್ರೆ ಅದು ಬಿಜೆಪಿ ಪಾರ್ಟಿ. 5300 ಕೋಟಿಯನ್ನ ಭದ್ರಾ ಯೋಜನೆಗೆ ಕೇಂದ್ರ ಕೊಟ್ಟಿದೆ. ನಮ್ಮ ಸರ್ಕಾರಗಳು ಅಧಿಕಾರಕ್ಕೆ, ಖುರ್ಚಿಗಾಗಿ ಕೆಲಸ ಮಾಡುತ್ತಿಲ್ಲ, ಅಭಿವೃದ್ದಿಗಾಗಿ ಕೆಲಸ ಮಾಡುತ್ತೇವೆ. ನಾವು ದೇಶ ಮೊದಲು ಅಂತ ಹೇಳುವವರು ಎಂದರು.

12.ಒಂದು ವೇಳೆ ಚುನಾವಣಾ ಫಲಿತಾಂಶ ಅತಂತ್ರ ಆದರೆ ಜೆಡಿಎಸ್ ಜೊತೆಗೆ ಮೈತ್ರಿ ಯಾಗುತ್ತಾ.?

2023 ರಲ್ಲಿ ಬಿಜೆಪಿ ಜನಾದೇಶದ ಮೇಲೆ ಅಧಿಕಾರಕ್ಕೆ ಬರುತ್ತೆ. ಅತಂತ್ರ ಇಲ್ಲವೇ ಇಲ್ಲ ಸ್ಥಿರವಾದ ಸರ್ಕಾರ, ಸುಭದ್ರವಾದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ಜೆಡಿಎಸ್ ಜೊತೆಗೆ ಮೈತ್ರಿಯ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥ ನಾಯಕರಿದ್ದರೆ. ಯಡಿಯೂರಪ್ಪ ನವರು ಎರಡನೇ ಹಂತದ ನಾಯಕರನ್ನ ಬೆಳೆಸುತ್ತಿದ್ದಾರೆ. ನಮ್ಮಲ್ಲಿ ನಾಯಕತ್ವದ ಕೊರತೆ ಇಲ್ಲ ಎಂದರು.

13. ಯತ್ನಾಳ್ ಹಾಗೂ ನಿರಾಣಿ ನಡುವಿನ ಟೀಕಾಪ್ರಹಾರ ಪಕ್ಷಕ್ಕೆ ಡ್ಯಾಮೇಜ್ ಆಗಲ್ವೇ.?

ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಬರುತ್ತೆ ಅಂತ ಡಿವೋರ್ಸ್ ಕೊಡಲು ಆಗುತ್ತದೆಯೇ. ನಮ್ಮಲ್ಲಿ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಇದೆ. ಭಿನಾಭಿಪ್ರಾಯದಲ್ಲಿ ಅಲ್ಲ. ನಮ್ಮ ಮೊದಲ ಆದ್ಯತೆ ಗುಂಪುಗಾರಿಕೆ ಅಲ್ಲ. ಸಂಘಟನೆಯ ಬಲದಿಂದ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯತ್ನಾಳ ಅವಾರು ಈಗಾಗಲೇ ಹೇಳಿದ್ದಾರೆ ಯಡಿಯೂರಪ್ಪ ನವರ ಮೇಲೆ ಗೌರವ ಇದೆ ಅಂತ ಹೇಳಿದ್ದಾರೆ ಎಂದರು.

14. 40% ಕಮಿಷನ್ ಆರೋಪ ಚುನಾವಣಾ ಸಂದರ್ಭದಲ್ಲಿ ಪರಿಣಾಯ ಬೀರಲಿದೆಯೇ.?

ಆರೋಪ ಮಾಡಿರುವ ಕೆಂಪಣ್ಣ ಕಾಂಗ್ರೆಸ್ ಏಜೆಂಟ್. ಕಾಂಗ್ರೆಸ್ ನಾಯಕರ ಮನೆಗೆ ಹೋಗಿ ಬಂದ ಮೇಲೆ ಹೇಳಿಕೆಯನ್ನ ಕೊಡುತ್ತಾರೆ. ಚುನಾವಣೆಗೊಸ್ಕರ ಕಾಂಗ್ರೆಸ್ ನವರು ಅಪಪ್ರಚಾರ ಮಾಡುತ್ತಿದೆ. ನಮ್ಮ ಸರ್ಕಾರ ಯಾವುದೇ ಪರ್ಸಟೆಜ್ ಸರ್ಕಾರ ಅಲ್ಲ ಎಂದು ಹೇಳಿದರು.

15. ಬಿಜೆಪಿ ಗೆ ಅಭಿವೃದ್ದಿ ಅಜೆಂಡಾ ವೋ ಅಥವಾ ಹಿಂದುತ್ವ ಅಜೆಂಡಾ ವೋ.?

ಅಭಿವೃದ್ದಿ ಅಂತ ಬಂದಾಗ ಅಭಿವೃದ್ದಿಯೇ ನಮ್ಮ ಮಾನದಂಡ. ದೇಶ ಅಂತ ಬಂದಾಗ ಹಿಂದುತ್ವ. ನಾವು ಪಾಕಿಸ್ತಾನದಲ್ಲಿ ಹೋಗಿ ಭಾರತ ಮಾತೆಯ ಧ್ವಜವನ್ನ ಹಾರಿಸಿದರೇ ಬಿಡುತ್ತಾರಾ.? ಕಾಂಗ್ರೆಸ್ ಅಪಪ್ರಚಾರಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಮ್ಮ ಪಕ್ಷದ ಅಜೆಂಡಾ ಸಂಘಟನೆ ಹಿಂದುತ್ವ, ಕಾಂಗ್ರೆಸ್ ಪಕ್ಷದ ಅಜೆಂಡಾ ಭ್ರಷ್ಟಚಾರ. ಕಾಂಗ್ರೆಸ್ ನವರಿಗೆ ಪರ್ಸಟೆಜ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದಕ್ಕೆ ಮಾತೃ ಅವರೇ. ಕಾಂಗ್ರೆಸ್ ಅಂದ್ರೆ ಬ್ರಹ್ಮಾಂಡ ಭ್ರಷ್ಟಚಾರಿಗಳ ಪಕ್ಷ ಎಂದು ಕಿಡಿಕಾರಿದರು.

17. ರಸ್ತೆ ಗುಂಡಿ ವಿಚಾರವನ್ನ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತ್ನಾಡಿ ಎಂದು ಕಟೀಲ್ ಅವರ ಹೇಳಿಯನ್ನ ನೀವು ಒಪ್ಪುತ್ತಿರಾ.?

ಸರ್ಕಾರ ಯಾವ ಯಾವ ಅಭಿವೃದ್ದಿ ಕೆಲಸ ಆಗಬೇಕು ಅದನ್ನ ಸರ್ಕಾರ ಮಾಡುತ್ತದೆ. ಲವ್ ಜಿಹಾದ್ ನಿಂದ ಬಲಿಪಾಶು ಆಗಬಾರದು, ನಮ್ಮ ಹಿಂದು ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡುವ ಕೆಲಸವನ್ನ ಮಾಡಬೇಕು. ಬಿಜೆಪಿ ವಿಶೇಷವಾಗಿ ಮಹಿಳೆಯರಿಗೆ ಕೊಡುವ ಗೌರವ. ನಮ್ಮ ಹೆಣ್ಣು ಮಕ್ಕಳು ಲವ್ ಜಿಹಾದ್ ನಿಂದ ಮೋಸ ಹೋಗಬಾರದು ಅಂತ ನಮ್ಮ ರಾಜ್ಯಧ್ಯಕ್ಷರು ಮಾತನಾಡಿದ್ದಾರೆ. ರಾಜ್ಯಧ್ಯಕ್ಷರ ಹೇಳಿಕೆ ತಪ್ಪಿಲ್ಲ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+