ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್

Recommended Video

      ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ | Oneindia kannada

      ಬೆಂಗಳೂರು, ಜನವರಿ 26: ಸರ್ಕಾರಕ್ಕೆ ಆಗಾಗ್ಗೆ ಆತಂಕ ತಂದೊಡ್ಡುತ್ತಿರುವ ಅತೃಪ್ತರ ಶಾಸಕರ ಕಾಟದಿಂದ ಪಾರಾಗಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

      ಅತೃಪ್ತರ ಶಾಸಕರ ಮೇಲೆ ನಿಗಾ ವಹಿಸಲು ಗುಪ್ತಚರ ಇಲಾಖೆಗೆ ಸೂಚನೆ ನೀಡಿದ್ದಾರೆ. ಇದನ್ನು ಕಾಂಗ್ರೆಸ್ ಶಾಸಕರಿ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಅಂಗೀಕರಿಸಿದ್ದು, ಸುದ್ದಿ ಸತ್ಯ ಎಂದು ಮಾಧ್ಯಮಗಳಿಗೆ ಹೇಳಿದ್ದಾರೆ.

      ಸರ್ಕಾರದ ಸಂಸ್ಥೆಯನ್ನು ಪಕ್ಷದ ಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಾರ್ಹವಾದರೂ ಸಹ ಈ ಮುಂಚೆಯೂ ಹಲವು ಮುಖ್ಯಮಂತ್ರಿಗಳು ಈ ರೀತಿಯಾಗಿ ಗುಪ್ತಚರ ಇಲಾಖೆಯನ್ನು ಅನಧಿಕೃತವಾಗಿ ಬಳಸಿಕೊಂಡಿದ್ದರು.

      Intelligence Department will keep an eye on Karnataka dissident MLAs

      ಅತೃಪ್ತ ಶಾಸಕರ ಮೇಲೆ ನಿಗಾ ಇಡಲು ಗುಪ್ತಚರ ಇಲಾಖೆಗೆ ತಿಳಿಸಲಾಗಿದ್ದು, ಅವರ ಓಡಾಟ, ಭೇಟಿ, ಇನ್ನಿತರೆ ಮಾಹಿತಿ ಸಿಎಂ ಅವರನ್ನು ಕಾಲ-ಕಾಲಕ್ಕೆ ತಲುಪಲಿವೆ.

      ಅತೃಪ್ತರ ನಡೆಗಳ ಬಗ್ಗೆ ಮಾಹಿತಿ

      ಅತೃಪ್ತರ ನಡೆಗಳ ಬಗ್ಗೆ ಮಾಹಿತಿ

      ಅತೃಪ್ತರ ಶಾಸಕರ ನಡೆಗಳ ಬಗ್ಗೆ ಮಾಹಿತಿ ಪಡೆದು ಅವರಿಂದ ಆಗಬಹುದಾದ ಡ್ಯಾಮೇಜ್ ಅನ್ನು ತಡೆಯಲುನ ಸಿಎಂ ಅವರು ಕಾಂಗ್ರೆಸ್ ಮುಖಂಡರ ಸಲಹೆ ಮೇರೆಗೆ ಈ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದೆ.

      ಆಪರೇಷನ್ ಕಮಲ ಭಯದಿಂದ ಮುಕ್ತ

      ಆಪರೇಷನ್ ಕಮಲ ಭಯದಿಂದ ಮುಕ್ತ

      ಸರ್ಕಾರವು ಆಪರೇಷನ್ ಕಮಲದ ಭಯದಿಂದ ಮುಕ್ತವಾಗಿದ್ದು, ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಲು ಮುಂಬೈಗೆ ತೆರಳಿದ್ದ ಶಾಸಕರು ವಾಪಸ್ ಬಂದಿದ್ದು, ಪಕ್ಷ ಬಿಟ್ಟು ಹೋಗುವುದಿಲ್ಲವೆಂದು ಕೆಪಿಸಿಸಿಗೆ ಪತ್ರ ಬರೆದಿದ್ದಾರೆ. ಹಾಗಾಗಿ ಸರ್ಕಾರವು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.

      ಅತೃಪ್ತ ಶಾಸಕರ ಮೇಲೆ ನಿಗಾ

      ಅತೃಪ್ತ ಶಾಸಕರ ಮೇಲೆ ನಿಗಾ

      ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಅತೃಪ್ತ ಶಾಸಕರ ಮೇಲೆ ನಿಗಾ ಇಡಲೆಂದು ಗುಪ್ತಚರ ಇಲಾಖೆಯ ಸಹಾಯ ಪಡೆದುಕೊಂಡಿದೆ. ಈ ಕ್ರಮ ಎಷ್ಟರ ಮಟ್ಟಿಗೆ ಸರ್ಕಾರಕ್ಕೆ ಸಹಾಯ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

      ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ

      ಸಿದ್ದರಾಮಯ್ಯ ಸರ್ಕಾರದ ಮೇಲೆ ಆರೋಪ

      ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಸಹ ಗುಪ್ತಚರ ಇಲಾಖೆಯನ್ನು ಪಕ್ಷದ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪ ಬಂದಿತ್ತು. ಆದರೆ ಇಲಾಖೆ ಅದನ್ನು ನಿರಾಕರಿಸಿತ್ತು. ಇದಷ್ಟೆ ಅಲ್ಲ ಈ ಮುಂಚಿನ ಬಹುತೇಕ ಸರ್ಕಾರಗಳ ಸಮಯದಲ್ಲಿ ಗುಪ್ತಚರ ಇಲಾಖೆಯನ್ನು ವೈಯಕ್ತಿಕ ಕಾರ್ಯಕ್ಕೆ ಬಳಸಿಕೊಂಡ ಆರೋಪಗಳು ಇವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+