Get Updates
Get notified of breaking news, exclusive insights, and must-see stories!

ತೆನಾಲಿ ರಾಮನ ಬಡ ಬೆಕ್ಕು ಬಹುಮಾನ ಪಡೆದ ಕಥೆಯಂತಿದೆ

ಬೆಂಗಳೂರು, ಜೂ. 03 : ಕೊರೊನಾ ದಿಂದ ಸಂಕಷ್ಟಕ್ಕೆ ಒಳಗಾಗಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಕೊಡುವ ವಿಚಾರದಲ್ಲಿ ಶಿಕ್ಷಣ ಸಚಿವರು "ತೆನಾಲಿರಾಮ ಥಿಯರಿ" ಪಾಲಿಸಿದ್ದಾರೆ. ಖಾಸಗಿ ಶಾಲಾ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ತಲಾ ಐದು ಸಾವಿರ ರೂ. ಹಣವನ್ನು ನೀಡುವಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಅಸಲಿ ಸಂಗತಿ ಹೊರಗೆ ಬಿದ್ದಿದೆ.

ಪೋಷಕರಿಗೂ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿಗಳ ನಡುವೆ ಶುಲ್ಕ ವಿಚಾರದಲ್ಲಿ ತಿಕ್ಕಾಟಕ್ಕೆ ದಾರಿ ಮಾಡಿಕೊಟ್ಟಿರುವ ಶಿಕ್ಷಣ ಇಲಾಖೆ ಇದೀಗ ಕೊರೊನಾ ವಿಶೇಷ ಪ್ಯಾಕೇಜ್ ಘೋಷಣೆ ಮೂಲಕ ಖಾಸಗಿ ಶಾಲಾ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿ ನಡುವಿನ ತಿಕ್ಕಾಟಕ್ಕೆ ನಾಂದಿ ಹಾಡಿದ್ದಾರೆ. ಅಂತೂ ಶಿಕ್ಷಣ ಸಚಿವರ ಹಾಗೂ ಅಧಿಕಾರಿಗಳ ಕ್ಷಾಣಾಕ್ಷ ತೆನಾಲಿ ರಾಮನ ಪರಿಹಾರ ಕಥೆ ಅಸಲಿ ಸತ್ಯ ತಿಳಿದ ಖಾಸಗಿ ಶಿಕ್ಷಣ ಸಂಸ್ಥೆಗಳು ಕೊರೊನಾ ವಿಶೇಷ ಪ್ಯಾಕೇಜ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿವೆ.

ತೆನಾಲಿ ರಾಮನ ಕಥೆ

ತೆನಾಲಿ ರಾಮನ ಕಥೆ

ರಾಜನೊಬ್ಬ ಯಾರು ಚೆನ್ನಾಗಿ ಬೆಕ್ಕು ಸಾಕುತ್ತಾರೆ ಅವರಿಗೆ ವಿಶೇಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರಂತೆ. ರಾಜನ ಮಾತು ಕೇಳಿ ಎಲ್ಲರೂ ಕೈಯಲ್ಲಿದ್ದ ಹಣವನ್ನು ಖರ್ಚು ಮಾಡಿ ಕುದುರೆಗಳ ರೀತಿಯಲ್ಲಿ ಬೆಕ್ಕು ಸಾಕಿದ್ದರಂತೆ. ಚೆನ್ನಾಗಿ ಸಾಕಿದ ಬೆಕ್ಕುಗಳನ್ನು ರಾಜನ ಮುಂದೆ ಪ್ರದರ್ಶನ ಏರ್ಪಡಿಸಲಾಗಿತ್ತು. ತೆನಾಲಿ ರಾಮ ಮಾತ್ರ ಬಡಪಾಯಿ ಬೆಕ್ಕು ಕಂಕಳಲ್ಲಿ ಇಟ್ಟುಕೊಂಡು ಬಂದಿದ್ದನಂತೆ. ಎಲ್ಲರೂ ಬಹುಮಾನ ನಮಗೆ ಸಿಗಬಹುದು ಎಂದೇ ಕಾತರದಿಂದ ಕಾಯುತ್ತಿದ್ದರಂತೆ. ಆದರೆ, ರಾಜ ಎಲ್ಲಾ ಬೆಕ್ಕು ನೋಡಿ ಖುಷಿಯಾದರು. ನನ್ನ ಆಜ್ಞೆಯನ್ನು ಎಷ್ಟು ಚೆನ್ನಾಗಿ ಪ್ರಜೆಗಳು ಪಾಲಿಸಿದ್ದಾರೆ ಎಂದು ಖಷಿಯಾದರು. ಆದರೆ ತೆನಾಲಿ ರಾಮನ ಬೆಕ್ಕು ನೋಡಿ ಬೇಸರಗೊಂಡರು. ಯಾಕೋ ಸಾಯುವ ತರ ಬೆಕ್ಕು ತಂದು ಪ್ರದರ್ಶನ ಮಾಡಿದ್ದೀಯ ಎಂದು ಕೇಳಿದರು. ಸ್ವಾಮಿ ನೀವು ಕೊಟ್ಟ ಬೆಕ್ಕು, ಹಾಲು ಕುಡಿಯುವುದಿಲ್ಲ. ಅದು ಹಾಲು ಕುಡಿಯುತ್ತಿದ್ದಲ್ಲಿ ಎಲ್ಲರಿಗಿಂತಲೂ ನಾನೇ ಚೆನ್ನಾಗಿ ಸಾಕುತ್ತಿದ್ದೆ. ದಯವಿಟ್ಟು ಹಾಲು ಕುಡಿಯದ ಬೆಕ್ಕು ಕೊಟ್ಟು ನನಗೆ ಅನ್ಯಾಯ ಮಾಡಿದ್ದೀರಿ. ಬಹುಮಾನ ಆದ್ರೂ ಕೊಟ್ಟು ಸರಿ ಪಡಿಸಿ ಎಂದು ತೆನಾಲಿ ರಾಮ ಕೇಳಿಕೊಂಡಿದ್ದ. ನಾನು ಹೇಳುವುದು ಸುಳ್ಳು ಅಂತಿದ್ದರೆ, ಮಹಾ ಸ್ವಾಮಿಗಳೇ ನೀವೇ ಪರಿಶೀಲಿಸಿ ಎಂದು ತೆನಾಲಿ ರಾಮ ಕೇಳಿಕೊಂಡಿದ್ದ. ರಾಜನ ಆಜ್ಞೆಯಂತೆ ತೆನಾಲಿ ರಾಮನ ಬೆಕ್ಕಿನ ಮುಂದೆ ಹಾಲು ಇಟ್ಟರೆ ಅದು ಕುಡಿಯಲಿಲ್ಲ. ಯಾಕೆಂದರೆ ಅದಕ್ಕೆ ತೆನಾಲಿರಾಮ ಯಾವಾಗಲು ಬಿಸಿ ಬಿಸಿ ಹಾಲು ಇಟ್ಟಿದ್ದನಂತೆ. ಮೂತಿ ಸುಟ್ಟುಕೊಂಡಿದ್ದ ಬೆಕ್ಕು ಹಾಲು ನೋಡಿದ ಕೂಡಲೇ ಓಡಿ ಹೋಗುತ್ತಿತ್ತು. ವಿಧಿಯಿಲ್ಲದೇ ಬೆಕ್ಕು ಸಾಕದ ತೆನಾಲಿ ರಾಮನಿಗೆ ರಾಜ ಅನಿವಾರ್ಯವಾಗಿ ಬಹುಮಾನ ನೀಡಿದಂತೆ. ಪಾಪ, ಹಗಳಿರುಳು ಬೆಕ್ಕು ಸಾಕಿದವರು ಪೆಚ್ಚು ಮೊರೆ ಹಾಕಿಕೊಂಡು ವಾಪಸು ತೆರಳಿದರಂತೆ. ಬಹುಮಾನ ಪಡೆಯಲು ತೆನಾಲಿ ರಾಮನ ಉಪಾಯ ಇದಾಗಿತ್ತು. ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೂ ವಿಶೇಷ ಪ್ಯಾಕೇಜ್ ನೀಡುವಲ್ಲಿ ಶಿಕ್ಷಣ ಇಲಾಖೆ ಕೂಡ ತೆನಾಲಿರಾಮನ ಈ ಥಿಯರಿಯನ್ನೇ ಅಳವಡಿಸಿಕೊಂಡು ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿದೆ.

ಏನಿದು ವಿಶೇಷ ಪ್ಯಾಕೇಜ್ ಥಿಯರಿ

ಏನಿದು ವಿಶೇಷ ಪ್ಯಾಕೇಜ್ ಥಿಯರಿ

ರಾಜ್ಯದಲ್ಲಿ ಕೊರೊನಾ ಸಂಕಷ್ಟಕ್ಕೆ ಈಡಾಗಿದ್ದ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡುವಂತೆ ಶಾಲಾ ಶಿಕ್ಷಕರು ಬೇಡಿಕೆ ಇಟ್ಟರು. ಪಾಪ ರಾಜ್ಯದಲ್ಲಿ ಖಾಸಗಿ ಶಾಲಾ ಶಿಕ್ಷಕರು ಕಷ್ಟದಲ್ಲಿದ್ದಾರೆ ಎಂದು ಸರ್ಕಾರದ ಮನಸು ಕರಗಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಖಾಸಗಿ ಶಾಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ತಲಾ ಐದು ಸಾವಿರ ಪರಿಹಾರ ನೀಡುವುದಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡೇ ಬಿಟ್ಟರು. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಸ್ವತಃ ಮುಂದಾಳತ್ವ ವಹಿಸಿ , ನಿಮ್ಮ ಮನವಿಗೆ ನಾನು ಸ್ಪಂದಿಸಿ ಮುಖ್ಯಮಂತ್ರಿಗಳಿಂದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸಿದ್ದೇನೆ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರು. ಶಿಕ್ಷಣ ಸಚಿವರ ಈ ಪರಿಶ್ರಮವನ್ನು ಶಿಕ್ಷಕರು ಅಭಿನಂದಿಸಿದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗೂ ಸ್ವಾಗತಿಸಿ ಖುಷಿ ಪಟ್ಟವು. ಕಷ್ಟ ಕಾಲದಲ್ಲಿ ಶಿಕ್ಷಣ ಸಚಿವರು ಆಸರೆಯಾದರು ಎಂದು ಸಂತಸಗೊಂಡರು. ಆದರೆ, ಗುರುವಾರ ಶಿಕ್ಷಣ ಇಲಾಖೆ ಹೊರಡಿಸಿರುವ ಖಾಸಗಿ ಶಿಕ್ಷಕರ ವಿಶೇಷ ಪ್ಯಾಕೇಜ್ ನ ಕಥೆ ಕೇಳಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಗಾಬರಿಯಾಗಿವೆ. ಶಿಕ್ಷಣ ಇಲಾಖೆ ಮಾಡಿರುವ ಐಡಿಯಾ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಶುಲ್ಕ ಶಾಲೆಗಳದ್ದು, ಹೆಸರು ಸರ್ಕಾರಕ್ಕೆ

ಶುಲ್ಕ ಶಾಲೆಗಳದ್ದು, ಹೆಸರು ಸರ್ಕಾರಕ್ಕೆ

ಆರ್ ಟಿಇ ಅಡಿಯಲ್ಲಿ ಓದುತ್ತಿರುವ ಮಕ್ಕಳ ಶುಲ್ಕವನ್ನು ಸರ್ಕಾರ ಕಳೆದ ಸೆಪ್ಟೆಂಬರ್ ನಲ್ಲಿಯೇ ಪಾವತಿಸಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈವರ್ಷ ಇನ್ನೂ ಪಾವತಿ ಮಾಡಿಲ್ಲ. ಇದೀಗ ಖಾಸಗಿ ಶಾಲಾ ಶಿಕ್ಷಕರಿಗೆ ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್ ಹಣವನ್ನು ಆರ್‌ಟಿಇ ಅಡಿಯಲ್ಲಿ ಬಿಡುಗಡೆ ಮಡಬೇಕಿರುವ ಹಣದಲ್ಲಿ ಪಾವತಿ ಮಾಡಲು ಸೂಚಿಸಲಾಗಿದೆ. ಆರ್‌ಟಿಇ ಅಡಿಯಲ್ಲಿ ಶಾಲಾ ನಿರ್ವಹಣೆ, ರಿಪೇರಿ, ಪಿಎಫ್ ವೆಚ್ಚ, ಪೂಜೆ ವೆಚ್ಚ, ಪರೀಕ್ಷೆ ವೆಚ್ಚ ಮತ್ತಿತರ ವೆಚ್ಚ ಕಡಿತಗೊಳಿಸಿದ್ದಾರೆ. ಇದೇ ವರ್ಷ ಪ್ರಥಮ ಬಾರಿ ಬಿಇಓ ಅಧಿಕಾರಿಗಳು ತಮ್ಮ ಮನಸೋ ಇಚ್ಛೆ ಕಡಿತಮಾಡಿದ್ದು, ಇದರಿಂದ ಉಳಿದ ಮೊತ್ತ ನೂರಾರು ಕೋಟಿ ಆಗಿದೆ. ಇದೀಗ ಆರ್‌ ಟಿಇ ಮರು ಪಾವತಿ ನಿಗದಿ ಪಡಿಸಿದ 700 ಕೋಟಿಯಲ್ಲಿ ನೂರಾರು ಕೋಟಿ ಉಳಿದಿದೆ. ಖಾಸಗಿ ಶಾಲಾ ಶಿಕ್ಷಣ ಆರ್‌ಟಿಇ ಅಡಿಯಲ್ಲಿ ನೀಡಬೇಕಾಗಿರುವ ಶುಲ್ಕದಲ್ಲಿ ಕಡಿತಗೊಳಿಸಿ ಉಳಿಸಿದ ಮೊತ್ತವನ್ನೇ ಖಾಸಗಿ ಶಾಲಾ ಶಿಕ್ಷಕರಿಗೆ ಬಂಪರ್ ಪರಿಹಾರ ಹೆಸರಿನಲ್ಲಿ ನೀಡಲಾಗುತ್ತಿದೆ. ಈ ಕುರಿತ ಅಧಿಕೃತ ಆದೇಶವನ್ನು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಖಾಸಗಿ ಶಾಲಾ ಶಿಕ್ಷಕರಿಗೆ ನೀಡಲಿರುವ ವಿಶೇಷ ಪ್ಯಾಕೇಜ್ ಹಣವನ್ನು ಕ್ರೋಢೀಕರಣ ಮಾಡುವ ಸಂಬಂಧ ಆರ್‌ಟಿಇ ಅಡಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಶುಲ್ಕದಲ್ಲಿ ಕಡಿತ ಗೊಳಿಸಲಾಗಿದೆ. ರಾಜ್ಯದಲ್ಲಿ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಾವತಿಸಬೇಕಿರುವ ವಾರ್ಷಿಕ ಶುಲ್ಕದಲ್ಲಿ ( ನಾನಾ ಶುಲ್ಕ ) ಅಲ್ಪ ಪ್ರಮಾಣವನ್ನು ಕಡಿತಗೊಳಿಸಿ ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಅಂದರೆ ಇಲ್ಲಿ ಆರ್‌ಟಿಇ ಅಡಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಸರ್ಕಾರ ಪಾವತಿ ಮಾಡಬೇಕಿರುವ ಶುಲ್ಕದಲ್ಲಿ ಪರೋಕ್ಷವಾಗಿ ಕಡಿತಗೊಳಿಸಿ ವಿಶೇಷ ಪ್ಯಾಕೇಜ್ ಹೆಸರಿನಲ್ಲಿ ಬಿಡುಗಡೆ ಮಾಡಲು ಹೊರಟಿದೆ. ಇಲ್ಲಿ ಪರಿಹಾರ ನೀಡಿದಂತೆ ಆಯಿತು. ಇದಕ್ಕಾಗಿ ಸರ್ಕಾರ ಐದು ಪೈಸೆ ಕೊಡುವಂತಿಲ್ಲ. ಆರ್‌ಟಿಇ ಶುಲ್ಕದ ಅಡಿ ಖಾಸಗಿ ಶಾಲೆಗಳಿಗೆ ಕೊಡಬೇಕಾಗಿರುವ ಶುಲ್ಕದಲ್ಲಿಯೇ ಕಡಿ ಮಾಡಿ ವಿಶೇಷ ಪ್ಯಾಕೇಜ್ ಹೆಸರಿನಲ್ಲಿ ಪಾವತಿ ಮಾಡುವುದು. ಇದರಿಂದ ಸರ್ಕಾರಕ್ಕೆ ಹೊರೆಯೂ ಇಲ್ಲ. ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ಕೊಟ್ಟಂತೆ ಆಯಿತು. ಇದರಲ್ಲಿ ಸರ್ಕಾರ ಕಳೆದುಕೊಳ್ಳುವುದು ಏನಿದೆ ? ಎಂಬುದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಪ್ರಶ್ನೆ !

Recommended Video

    ಮಂಗಳಮುಖಿಯರ ಕಷ್ಟಗಳು ಹೇಗೆಲ್ಲಾ ಇರುತ್ತೇ ಗೊತ್ತಾ | Oneindia Kannada
    ಶಿಕ್ಷಣ ಸಚಿವರಿಗೆ ಮನವಿ

    ಶಿಕ್ಷಣ ಸಚಿವರಿಗೆ ಮನವಿ

    ಆರ್‌ಟಿಇ ಮರುಪಾವತಿ ಹಣದಲ್ಲಿ ಮೊಟಕುಗೊಳಿಸಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಪರಿಹಾರ ಧನ ನೀಡುವ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮೋಸ ಮಾಡಲು ಹೊರಟಿದ್ದಾರೆ. 2020-21 ನೇ ಸಾಲಿನಲ್ಲಿ ಖಾಸಗಿ ಶಾಲೆಗಳಿಗೆ ಮರುಪಾವತಿ ಮಾಡಬೇಕಾದ ಆರ್‌ಟಿಇ ಶುಲ್ಕದಲ್ಲಿ ಕಡಿತಗೊಳಿಸಲಾಗುತ್ತದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಸಲ್ಲಬೇಕಿರುವ ಆರ್‌ಟಿಇ ಮರುಪಾವತಿ ಹಣದಲ್ಲಿ ಕಡಿತಗೊಳಿಸಿ ಅದನ್ನೇ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ರೂಪದಲ್ಲಿ ನೀಡಲು ಆದೇಶ ಹೊರಡಿಸಲಾಗಿದೆ. ಆರ್‌ಟಿಇ ಶುಲ್ಕ ಮರುಪಾವತಿಯಲ್ಲಿ ಮೊದಲಿನಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ. ಖಾಸಗಿ ಶಾಲೆಗಳಿಗೆ ನೀಡಬೇಕಿರುವ ಶುಲ್ಕದಲ್ಲಿಯೇ ಕಡಿತಗೊಳಿಸಿ ಖಾಸಗಿ ಶಾಲಾ ಶಿಕ್ಷಕರಿಗೆ ಕೊರೊನಾ ವಿಶೇಷ ಪ್ಯಾಕೇಜ್ ಎಂದು ನೀಡುವುದು ಎಷ್ಟು ಸರಿ ಎಂದು ಖಾಸಗಿ ಅನುದಾನಿತ ಶಾಲೆ ಆಡಳಿತ ಮಂಡಳಿಗಳ ಒಕ್ಕೂಟ ( ಕ್ಯಾಮ್ಸ್ ) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಪ್ರಶ್ನಿಸಿದ್ದಾರೆ. ಇದರಲ್ಲಿ ಆಗುತ್ತಿರುವ ಅನ್ಯಾಯ ಸರಿ ಪಡಿಸಿ ಎಂದು ಶಿಕ್ಷಣ ಮಂತ್ರಿಗೆ ಮನವಿ ಮಾಡಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+